ದೇಶದ ಜನ ಕೊರೊನ ಹೆಮ್ಮಾರಿಯಿಂದ ಸಂಪೂರ್ಣ ಹೈರಣಾಗಿ ಹೋಗಿದ್ದಾರೆ. ಈ ಕಾಲದಲ್ಲಿ ಜನ ಸಾಮಾನ್ಯನಿಗೆ ಸಹಾಯ ಮಾಡಬೇಕಾದ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಬೇಕಿತ್ತು. ಆದರೆ ಇವತ್ತು ನಮ್ಮ ದೇಶದಲ್ಲಿ ಏನಾಗಿದೆಯೆಂದರೇ ಲಾಕ್ ಡೌನ್ ಮೊದಲು ಒಂದು ಡಾಲರ್ ಕ್ರೂಡ್ ಆಯಿಲ್ ಗೆ 31.02 ಡಾಲರ್ ಇತ್ತು ಆಗ ಪೆಟ್ರೋಲ್ ಗೆ ಲೀಟರ್ ಒಂದಕ್ಕೆ ರೂ 75/- ಡೀಸಲ್ ಗೆ ರೂ 64/- ಇತ್ತು ಆದರೆ ಅದೇ ದರ ಈ ಸಂದರ್ಭದಲ್ಲಿ 14.25 ಡಾಲರ್ ಗೆ ಕುಸಿದಿದೆ. ಅಂದರೆ 16.77 ಡಾಲರ್ ಅಂತರಾಷ್ಟ್ರೀಯ ಮಾರ್ಕೆಟ್ ನಲ್ಲಿ ಕುಸಿದಿದೆ. ಆದರೆ ಈಗಲೂ ಪೆಟ್ರೋಲ್ ದರ ರೂ 73/- ಹಾಗೂ ಡಿಸೇಲ್ ದರ ಲೀಟರ್ ಗೆ ಒಂದಕ್ಕೆ ರೂ 65 /-. ವಾಸ್ತವವಾಗಿ ಕ್ರೂಡ್ ಆಯಿಲ್ ನ ದರ ಕುಸಿತದ ಹಿನ್ನಲೆಯಲ್ಲಿ 75/- ರೂಪಾಯಿ ಇದ್ದ ಪೆಟ್ರೋಲ್ ದರ ರೂ 38/- ಕ್ಕೆ ಹಾಗೂ ರೂ 64/- ಇದ್ದ ಡಿಸೇಲ್ ದರ ರೂ 32/- ಕ್ಕೆ ಇಳಿಸಬೇಕಿತ್ತು. ಆದರೆ ನಮ್ಮ ದುರ್ದೈವ. ಅಂದರೆ ಡಿಸೇಲ್ ದರ ಲಾಕ್ ಡೌನ್ ಗೂ ಮೊದಲಿದ್ದ ದರಕ್ಕಿಂತಲೂ 1/- ರೂ ಹೆಚ್ಚಳ , ಅಂದರೆ ಮೋದಿ ಸರಕಾರವನ್ನು ನಾವು ಹಾಡಿ ಹೊಗಳಬೇಕೇ..? ಅಥವಾ ಇದು ನಮ್ಮ ದುರ್ದೈವ ಅಂತ ಅಂದು ಕೊಳ್ಳಬೇಕಾ..?
ನೀವು ಚಿನ್ನದ ದರವನ್ನು ನೋಡಿದರೆ ಅಂದು 26/5/2014 ರಂದು ಮೋದಿಜಿ ಅಧಿಕಾರಕ್ಕೆ ಬರುವ ದಿನ 1 ಗ್ರಾಂ ಚಿನ್ನಕ್ಕೆ ರೂ 2349/- ಇದ್ರೆ ಇಂದು ಅದೇ 22 ಕ್ಯಾರೆಟ್ ಚಿನ್ನಕ್ಕೆ ಜಿ ಎಸ್ ಟಿ ಹೊರತು ಪಡಿಸಿ ರೂ 4300/- ಇದೆ, ಎಂದಾದ್ರೆ ಇದಕ್ಕೇನೆನ್ನಬೇಕು..? ಇಂತಹಾ ಬೆಲೆಯೇರಿಕೆಯನ್ನು ಕೂಡಾ ಜನ ಸಾಮಾನ್ಯ ಮೌನದಿಂದಲೇ ಸ್ವೀಕರಿಸುವುದಾದರೆ, ನಮ್ಮದೇಶ ಎತ್ತ ಕಡೆ ಸಾಗುತ್ತದೆ..?
ಇದರ ಹೊರತಾಗಿ ಒಬ್ಬ ಸಕ್ಕರೆ ಖಾಯಿಲೆಯ ವ್ಯಕ್ತಿ ಉಪಯೋಗಿಸುತ್ತಿರುವ ಒಂದು ಇನ್ಸೂಲಿನ್ ಗೆ ಅಂದು 26/5/2014 ಕ್ಕೆ ರೂ 410/- ಇತ್ತು ಇಂದು ಅದೇ ಮೆಡಿಸಿನ್ ಗೆ ರೂ 640/- ಇದೆ ಎಂದಾದರೇ ನಿಜಕ್ಕೂ ನಮಗೆ ಅಚ್ಚೇದಿನ್ ಬಂದಿದೆಯಲ್ಲವೇ..? ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.
- Monday
- November 25th, 2024