Ad Widget

ಮಡಪ್ಪಾಡಿ ಪ್ರೀಮಿಯರ್ ಲೀಗ್ 2021 ವಾಲಿಬಾಲ್ ಪಂದ್ಯಾಟ : ಪ್ರಥಮ – ಶ್ರೀ ವಿಷ್ಣು ಕೇವಳ

ಯುವಕ ಮಂಡಲ ಮಡಪ್ಪಾಡಿ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ಆರು ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ “ಮಡಪ್ಪಾಡಿ ಪ್ರೀಮಿಯರ್ ಲೀಗ್ 2021” ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿಯ ಕ್ರೀಡಾಂಗಣದಲ್ಲಿ ಫೆ.28 ರಂದು ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪಿ.ಸಿ.ಜಯರಾಮ್ ವಾಲಿಬಾಲ್ ಕ್ರೀಡಾಂಗಣದಲ್ಲಿ ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷ ಲೋಹಿತ್ ಬಾಳಿಕಳ ವಹಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ‌.ಸದಸ್ಯ ಜಯರಾಮ ಹಾಡಿಕಲ್ಲು, ಮಡಪ್ಪಾಡಿ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ, ಎ.ಪಿ.ಎಂ.ಸಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು, ಗ್ರಾಮ ಲೆಕ್ಕಾಧಿಕಾರಿ ಸಿದ್ದಪ್ಪ ನಿಂಗದಾಳ, ವಾಲಿಬಾಲ್ ಕ್ರೀಡಾಪಟು ಬಾಲಕೃಷ್ಣ ವಾಲ್ತಾಜೆ ಉಪಸ್ಥಿತರಿದ್ದರು. ಸಂಜೆ ನಡೆದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎ.ಪಿ‌.ಎಂ.ಸಿ. ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು,ಗ್ರಾ.ಪಂ.ಉಪಾಧ್ಯಕ್ಷೆ ಶ್ರೀಮತಿ ಉಷಾ ಜಯರಾಮ, ಎಸ್ ಡಿ ಎಂ ಸಿ ಅಧ್ಯಕ್ಷೆ ನಾಗೇಶ್ ಕುಚ್ಚಾಲ, ಯುವಕ ಮಂಡಲ ಕಾರ್ಯದರ್ಶಿ ಲೋಹಿತ್ ಬಳ್ಳಡ್ಕ, ಮಡಪ್ಪಾಡಿ ಪ್ರೀಮಿಯರ್ ಲೀಗ್ 2021 ರ ಪ್ರಥಮ ಸ್ಥಾನವನ್ನು ಶ್ರೀ ವಿಷ್ಣು ಕೇವಳ, ದ್ವಿತೀಯ ಪನಿಯಾಲ ಪೈರೇಟ್, ತೃತೀಯ ಕಡ್ಯ ಸ್ಮಾಶರ್ಸ್, ಚತುರ್ಥ ಟೀಮ್ ಬಾಳಿಕಳ, ಉತ್ತಮ ಹೊಡೆತಗಾರ ಶ್ರೀ ವಿಷ್ಣು ತಂಡದ ರತನ್, ಉತ್ತಮ ಎತ್ತುವಿಕೆ ರಸುಲ್, ಉದಯೋನ್ಮುಖ ಆಟಗಾರ ರೋಶನ್ ಕೇವಳ ಬಹುಮಾನ ಪಡೆದುಕೊಂಡರು, ಕ್ರೀಡಾಪಟುಗಳು,ತಂಡಗಳ ವ್ಯವಸ್ಥಾಪಕರು,ಯುವಕ ಮಂಡಲದ ಸದಸ್ಯರು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading