2020 ಸಾಲಿನ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ನೀಡುವ ವಿಶೇಷ ಸಾಧಕ ಪ್ರಶಸ್ತಿಗೆ ತುಳು ಜಾನಪದ ಕಲಾ ಸಂಘಟಕ ರಮೇಶ್ ಪಿ. ಮೆಟ್ಟಿನಡ್ಕ ಆಯ್ಕೆಯಾಗಿದ್ದಾರೆ. ಇವರು ನಾಲ್ಕೂರು ಗ್ರಾಮದ ಪೂಜಾರಿಕೋಡಿ ದಿ.ಮನ್ಚ ಮತ್ತು ದಿ.ಮೆಚ್ಚು ದಂಪತಿಗಳ ಪುತ್ರ. ಮೆಟ್ಟಿನಡ್ಕದಲ್ಲಿ ತರುಣಜ್ಯೋತಿ ಯುವಕ ಮಂಡಲದ ಪದಾಧಿಕಾರಿಯಾಗಿ, ನೇಸರ ಕಲಾ ಸಂಘ ವನ್ನು ಸಂಘಟಿಸಿ, ತನ್ನದೇ ಕಲಾತಂಡ ರಚಿಸಿ,ಗಾಯಕನಾಗಿ,ಜಾನಪದ ಕುಣಿತ,ಪಾಡ್ದನ,ಜನಪದ ಗೀತೆ, ಮುಂತಾದ ಪ್ರಕಾರಗಳನ್ನು ಕಲಿಸುವುದರೊಂದಿಗೆ, ತುಳು ಭಾಷೆ, ಸಂಸ್ಕೃತಿ,ಆಚರಣೆಗಳ ಬಗ್ಗೆ ಬೆಳಕು ಚೆಲ್ಲುವ,”ತುಳುನಾಡ ವೈಭವ” ಎಂಬ ನೃತ್ಯ ರೂಪಕ ರಚಿಸಿ,ಸುಮಾರು 50 ಜನ ಕಲಾವಿದರ ತಂಡದೊಂದಿಗೆ, ರಾಜ್ಯದಾದ್ಯಂತ ಪ್ರದರ್ಶನ ನೀಡುತ್ತಿದೆ. ಜಿಲ್ಲೆಯಾದ್ಯಂತ ಜಾನಪದ ಗೀತೆ,ಕುಣಿತಗಳ ತರಬೇತುದಾರರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ನಿರ್ಣಯಕರಾಗಿ, ಕೆಲಸ ನಿರ್ವಹಿಸಿದ್ದಾರೆ. ಮಾ. 7 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
- Sunday
- November 24th, 2024