Ad Widget

ಪಡ್ಪಿನಂಗಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ

ದ. ಕ. ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ ಇದರ ಸಹಯೋಗದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮದಡಿ ಹೆಣ್ಣು ಶಿಶು ಪ್ರದರ್ಶನ, ಅನ್ನ ಪ್ರಾಶಣ ಮತ್ತು ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಫೆ. 19 ರಂದು ನಡ್ಕ ಶಿವಗೌರಿ ಕಲಾ ಮಂದಿರ ಪಡ್ಪಿನಂಗಡಿಯಲ್ಲಿ ನೆರವೇರಿಸಲಾಯಿತು.

. . . . .


ಶಾಲಾ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲ ನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರೇಖಾ ಇವರು ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲ ಕೃಷ್ಣ. ಕೆ , ಶಿಶು ಅಭಿವೃದ್ಧಿ ಯೋಜನೆ ಪಂಜ ವಲಯದ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ. ಕೆ , ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ ಸುಳ್ಯದ ಶ್ರಯ ಶ್ರೀಮತಿ ಗೀತಾ, ಆಶಾಕಾರ್ಯಕರ್ತೆ ಶ್ರೀಮತಿ ವಾರಿಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಟೆಗುಡ್ಡೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಕಸ್ತೂರಿ ಪ್ರಾರ್ಥಿಸಿದರು. ಶ್ರೀಮತಿ ಲೀಲಾವತಿ ಅಂಗನವಾಡಿ ಕಾರ್ಯಕರ್ತೆ ಪಡ್ಪಿನಂಗಡಿ ಸ್ವಾಗತಿಸಿದರು. ಶ್ರೀಮತಿ ರವಿಶ್ರೀ. ಕೆ ಮೇಲ್ವಿಚಾರಕಿ ಪಂಜ ವಲಯ ಇವರು ಪ್ರಾಸ್ತಾವಿಕ ಮಾತನಾಡಿ ಹೆಣ್ಣು ಮತ್ತು ಗಂಡು ಲಿಂಗಾನುಪಾತ ಉತ್ತಮ ಪಡಿಸುವುದು, ಹೆಣ್ಣು ಭ್ರೂಣ ಹತ್ಯೆ ನಿಷೇಧಗೊಳಿಸುವುದು, ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಹಾಗೂ ಪ್ರತಿ ತಿಂಗಳು ಮೊದಲನೆ ಗುರುವಾರ ಹುಟ್ಟಿದ ಹೆಣ್ಣು ಮಗುವಿಗೆ ರೂ. 1000 ಪ್ರೋತ್ಸಾಹ ಧನ, ಪ್ರಥಮ ಗರ್ಭಿಣಿಯ ಆರೈಕೆಗಾಗಿ ಮಾತೃ ವಂದನಾ ಯೋಜನೆಯಡಿ ಮೂರು ಕಂತುಗಳಲ್ಲಿ ರೂ. 5000 ಸಹಾಯಧನ ಮತ್ತು ಭಾಗ್ಯಲಕ್ಷ್ಮಿ ಯೋಜನೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ದೊರಕುವ ಪೂರಕ ಪೌಷ್ಠಿಕ ಆಹಾರವನ್ನು ಪ್ರತಿ ತಿಂಗಳು ಅರ್ಹ ಫಲಾನುಭವಿಗಳು ತೆಗೆದುಕೊಳ್ಳುವಂತೆ ತಿಳುವಳಿಕೆ ನೀಡಿದರು. ಬಾಳಿಲ ಮುಪ್ಪೇರ್ಯ ಗ್ರಾಮದ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ರೇಖಾರವರು ಮಾತನಾಡಿ ತಾಯಂದಿರು ಶಿಶು ಭ್ರೂಣ ಹತ್ಯೆ, ಶಿಶು ಮರಣ ತಗ್ಗಿಸಲು, ಅಪೌಷ್ಟಿಕತೆ ಹೋಗಲಾಡಿಸಲು ಪೌಷ್ಟಿಕ ಆಹಾರ ಸೇವನೆ ಬಗ್ಗೆ ತಾಯಂದಿರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾಕಾರ್ಯಕರ್ತೆಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಶ್ರೀಮತಿ ನಳಿನಿ. ಎ ಪಂಬೆತ್ತಾಡಿ ಅಂಗನವಾಡಿ ಕಾರ್ಯಕರ್ತೆ ವಂದಿಸಿದರು. ಕಲ್ಮಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ. ರೈ ಕಾರ್ಯಕ್ರಮ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!