ಯುವಜನ ಸಂಯುಕ್ತ ಮಂಡಳಿ ವತಿಯಿಂದ (ರಿ) ಸುಳ್ಯ ಫೆ.13 ರಂದು ಅಯುಷ್ಮಾನ್ ಕಾರ್ಡ್ ನೋಂದಣಿ & ವಿತರಣಾ ಶಿಬಿರವು ನಡೆಯಿತು. ಮಂಡಳಿಯ ಅಧ್ಯಕ್ಷ ಅನಿಲ್ ಪೂಜಾರಿಮನೆ ಸಭಾಧ್ಯಕ್ಷತೆ ವಹಿಸಿದ್ದರು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಯಿಲೆ ಬಂದ ಮೇಲೆ ಪರಿತಪಿಸುವ ಬದಲು ಈಗಲೇ ಇಂತಹ ಕಾರ್ಡುಗಳನ್ನು ಮಾಡುವುದು ಒಳ್ಳೆಯದು ಮತ್ತು ಯುವಜನ ಸಂಯುಕ್ತ ಮಂಡಳಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಸರಳಿಕುಂಜ ಗಣೇಶ್ ಇಂಡಸ್ಟ್ರೀಸ್ ಮಾಲಿಕ ಜಗದೀಶ್ ಪಿ. ಅರಂಬೂರು, ಯುವಜನ ಸಂಯುಕ್ತ ಮಂಡಳಿಯ ಪೂರ್ವಾಧ್ಯಕ್ಷ ಪಿ.ಎಸ್. ಗಂಗಾಧರ್ , ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಪೂರ್ವಾಧ್ಯಕ್ಷರಾದ ಮಾಯಿಲಪ್ಪ ಸಂಕೇಶ ಮತ್ತು ಆಯುಶ್ಮಾನ್ ಆರೋಗ್ಯ ಮಿತ್ರ ಮುರಳಿ ನಳಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಂಕೇತಿಕವಾಗಿ ಕಾರ್ಡುಗಳನ್ನು ಅತಿಥಿಗಳಿಂದ ವಿತರಿಸಲಾಯಿತು. ಸಹಕಾರ ನೀಡಿದ ವೀರ ವನಿತೆ ಕ್ರೀಡಾ & ಕಲಾ ಸಂಘ ಮಂಡೆಕೋಲು ಮತ್ತು ಮಯೂರಿ ಯುವತಿ ಮಂಡಲ ಚೊಕ್ಕಾಡಿ ಇವರುಗಳನ್ನು ಗೌರವಿಸಲಾಯಿತು. ಶಂಕರ್ ಪೆರಾಜೆ ಸ್ವಾಗತಿಸಿ ವಿಜಯಕುಮಾರ್ ಉಬರಡ್ಕ ವಂದಿಸಿದರು. ದಯಾನಂದ ಕೇರ್ಪಳ ನಿರೂಪಿಸಿದರು