ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಣ್ಣಪ್ಪಾದಿ ದೈವಗಳ ನೇಮೋತ್ಸವದ ಅಂಗವಾಗಿ ಇಂದು (ಫೆ. 13) ಬೆಳಗ್ಗೆ ಗಣಪತಿ ಹವನ, ಬೆಳಗಿನ ಪೂಜೆ, ಬೆಳಗ್ಗೆ 10 ರಿಂದ ಶ್ರೀ ದೇವರ ಹಾಗೂ ಅಮ್ಮನವರ ದರ್ಶನ ಬಲಿ ಉತ್ಸವ, ಶ್ರೀ ದೇವರ ಗಂಧಪ್ರಸಾದ, ಬಟ್ಟಲು ಕಾಣಿಕೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ಗಂಟೆ 4 ಕ್ಕೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯುವುದು, ಸಂಜೆ 6 ರಿಂದ ರಾತ್ರಿಪೂಜೆ, ಪ್ರಸಾದ ಭೋಜನ ಬಳಿಕ, ರಾತ್ರಿ ಗಂಟೆ 9 ರಿಂದ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮ, ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ. 14 ರಂದು ಬೆಳಗ್ಗೆ 6 ರಿಂದ ಬೆಳಗ್ಗಿನ ಪೂಜೆ, ಬೆಳಗ್ಗೆ 10 ರಿಂದ ಶ್ರೀ ದೇವಳದಲ್ಲಿ ರುದ್ರಾಭಿಷೇಕ, ಬೆಳಗ್ಗೆ 12 ರಿಂದ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು ಕಾಯಾರ ಮಾಡದಲ್ಲಿ ನೇಮೋತ್ಸವ, ಸಂಜೆ ಗಂಟೆ 6 ರಿಂದ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಗಂಟೆ 8.30 ರಿಂದ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ ಗಂಟೆ 10 ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು, ಬೆಳಗ್ಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಕಾಣಿಕೆ, ಪ್ರಸಾದ ವಿತರಣೆ, ಬಲಿ ನಡೆಯಲಿರುವುದು.