ಸುಳ್ಯದಲ್ಲಿ ಪ್ರಥಮಬಾರಿಗೆ “ಗೃಹಶೋಭೆ” ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳ ಫೆಬ್ರವರಿ 12 ರಿಂದ 21 ರವರೆಗೆ ನಡೆಯಲಿದೆ. ಗೃಹಪಯೋಗಿ ಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಗಾಂಧಿನಗರ ಶಾಲಾ ಮೈದಾನದಲ್ಲಿ ಫೆಬ್ರವರಿ 12 ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.
ಕರ್ನಾಟಕ ಸರ್ಕಾರದ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲಸಾರಿಗೆ ನೂತನ ಸಚಿವರಾದ ಎಸ್ ಅಂಗಾರ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ನಗರ ಪಂಚಾಯತ್ ಸದಸ್ಯರಾದ ಕಂಠಿ, ನ.ಪಂ.ಸದಸ್ಯೆ ಪ್ರವಿತಾ, ಜಿಲ್ಲಾ ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಹರಿಣಿ ಸದಾಶಿವ ಭಾಗವಹಿಸಲಿದ್ದಾರೆ
ಈ ಮಳಿಗೆಯಲ್ಲಿ ವಿವಿಧ ಕಂಪನಿಗಳ ಗೃಹೋಪಯೋಗಿ ವಸ್ತು, ವಾಹನಗಳು ಸೇರಿದಂತೆ ನೂರಕ್ಕೂ ಅಧಿಕ ಮಳಿಗೆಗಳೊಂದಿಗೆ ಮಾರಾಟ ಮೇಳ ರಾರಾಜಿಸಲಿದೆ.