ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮದಲ್ಲಿ ಜಿಯೋ ಕೇಬಲ್ ಅಳವಡಿಸುವ ಸಂದರ್ಭದಲ್ಲಿ ಬಿ.ಎಸ್.ಎನ್.ಎಲ್ ಕೇಬಲ್ ಕಟ್ ಮಾಡಿದ್ದರು. ಇದರಿಂದಾಗಿ ಬಿ.ಎಸ್.ಎನ್.ಎಲ್. ಲ್ಯಾಂಡ್ ಲೈನ್ ಸಂಪರ್ಕ ಸರಿಯಾಗಿ ಇರಲಿಲ್ಲ. ಇದನ್ನು ಸ್ಥಳೀಯರೇ ಸೇರಿ ಹಳೆಯ ಕೇಬಲ್ ಗಳನ್ನೇ ಸರಿಪಡಿಸಿ ಲ್ಯಾಂಡ್ ಲೈನ್ ಸಂಪರ್ಕವನ್ನು ಸರಿಪಡಿಸಿದ್ದರು. ಆದರೆ ಕೆಲವರಿಗೆ ಇಂಟರ್ನೆಟ್ ಸಂಪರ್ಕ ಸಿಗುತ್ತಿರಲಿಲ್ಲ ಹಾಗೂ ಫೋನ್ ನಲ್ಲಿ ಮಾತನಾಡುವ ಸಂದರ್ಭದಲ್ಲಿ ಆಡಚಣೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಶವ ಕಟ್ಟ ಹಾಗೂ ಸ್ಥಳೀಯರು ಸೇರಿ ಬಿ.ಎಸ್.ಎನ್.ಎಲ್ ನ ಜನರಲ್ ಮೆನೇಜರ್ ರಿಗೆ ಹೊಸ ಕೇಬಲ್ ಬೇಕೆಂದು ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ ಅವರು 1 ಕಿಲೋಮೀಟರ್ ಉದ್ದದ ಕೇಬಲ್ ಅನ್ನು ನೀಡಿದ್ದಾರೆ. ಆದರೆ ಬಿ.ಎಸ್.ಎನ್.ಎಲ್ ರವರು ಕೇಬಲ್ ಅನ್ನು ಕೊಟ್ಟರೂ ಸಹ ಕೇಬಲ್ ಅನ್ನು ಸ್ಥಳೀಯರೇ ಸಾಗಾಟದ ವೆಚ್ಚ ಭರಿಸಿ ಮಂಗಳೂರಿನಿಂದ ತಂದು ತಮ್ಮ ಸ್ವಂತ ಖರ್ಚಿನಿಂದ ಕೇಬಲ್ ಅನ್ನು ಅಳವಡಿಸುತ್ತಿದ್ದಾರೆ. ಇದಕ್ಕೆ ಅಂದಾಜು 20,000 ಖರ್ಚು ಆಗಬಹುದು. ಈ ಎಲ್ಲಾ ಖರ್ಚನ್ನು ಇಲ್ಲಿನ ಕೆಲ ಸ್ಥಳೀಯರೇ ಭರಿಸುತ್ತಿದ್ದಾರೆ. ಇಲಾಖೆ ಕೇವಲ ಕೇಬಲ್ ಮಾತ್ರ ನೀಡಿದೆ. ಉಳಿದ ಎಲ್ಲಾ ಕೆಲಸಗಳನ್ನು ಸ್ಥಳಿಯರೇ ತಮ್ಮ ಸ್ವಂತ ಖರ್ಚಿನಿಂದ ಮಾಡುತ್ತಿದ್ದಾರೆ. ಕೇಬಲ್ ಮಂಗಳೂರಿನಿಂದ ತರಲು ನಿಶಾಂತ್ ಕಟ್ಟ ಪ್ರಮುಖ ಪಾತ್ರ ವಹಿಸಿದ್ದಾರೆ.
- Monday
- November 25th, 2024