ಬೊಳುಬೈಲು ನವಚೇತನ ಯುವಕ ಮಂಡಲದ ನೂತನ ಆಡಳಿತ ಮಂಡಳಿಯ ಪದಗ್ರಹಣ ಮತ್ತು ವಾರ್ಷಿಕ ಮಹಾಸಭೆ ಯುವಕ ಮಂಡಲದ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸುಧೀರ್ ನೆಕ್ರಾಜೆ,ಉಪಾಧ್ಯಕ್ಷರಾಗಿ ಪ್ರಸಾದ್ ಕುಂಭರಚೋಡು, ಕಾರ್ಯದರ್ಶಿಯಾಗಿ ಗಣೇಶ್ ಕಾಟೂರು, ಜತೆ ಕಾರ್ಯದರ್ಶಿಯಾಗಿ ಸುಧೀರ್ ರೈ ಕುಕ್ಕಂದೂರು, ಕೋಶಾಧಿಕಾರಿಯಾಗಿ ಪದ್ಮನಾಭ ನೆಕ್ರಾಜೆ, ಕ್ರೀಡಾ ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಕುಂಭರಚೋಡು ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚಿತ್ತರಂಜನ್ ಕಾಟೂರು, ಸಂಘಟನಾ ಕಾರ್ಯದರ್ಶಿಯಾಗಿ ಜಯಂತ್ ಕುಂಭರಚೋಡು, ಮಾಧ್ಯಮ ಕಾರ್ಯದರ್ಶಿಯಾಗಿ ಪ್ರಸಾದ್ ಕಾಟೂರು, ನಿರ್ದೇಶಕರುಗಳಾಗಿ ಭುವನೇಂದ್ರ ಬೊಳುಬೈಲು, ಸಚಿನ್ ರೈ ಕುಕ್ಕಂದೂರು, ವೆಂಕಟೇಶ್ ನಡುಬೆಟ್ಟು, ಭುವನೇಂದ್ರ ಬೊಳುಬೈಲು,ಧರ್ಮೇಶ್ ಕಾಯರಡ್ಕ,ದೀಪಕ್ ಕಾಯರಡ್ಕ, ಪ್ರವೀಣ್ ಕಾಟೂರು, ಪ್ರವೀಣ್ ಹುಲಿಮನೆ, ಗಿರೀಶ್ ಕುಂಭರಚೋಡು ಆಯ್ಕೆಯಾದರು. ನೂತನ ಆಡಳಿತ ಮಂಡಳಿಯವರಿಗೆ ಪ್ರತಿಜ್ಞಾವಿಧಿಯನ್ನು ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ಅನಿಲ್ ಪೂಜಾರಿಮನೆ ಬೋಧಿಸಿ ಸಂಘದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೋಹನ್ ನಂಗಾರು ಕೃಷಿ ಅಧಿಕಾರಿ ಕೃಷಿ ಇಲಾಖೆ ಸುಳ್ಯ ಇವರು ಮಾತನಾಡಿ ಯುವಕ ಮಂಡಲದ ಕಾರ್ಯವೈಖರಿಯನ್ನು ಶ್ಲಾಘಸಿದರು. ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ (ಬಿ.ಎಂ.ಎಸ್.) ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ ಮಾತನಾಡಿ ಯುವಕ ಮಂಡಲವು ತಾಲೂಕಿನ ಉತ್ತಮ ಯುವಕ ಮಂಡಲವಾಗಿದ್ದು ಇನ್ನಷ್ಟು ಯೋಜನೆಯನ್ನು ಅನುಷ್ಠಾನ ಮಾಡಿ ಸಮಾಜಕ್ಕೆ ಅನುಕೂಲ ಆಗುವಂತ ಕೆಲಸ ಮಾಡಿ, ಊರಿನ ಅಭಿವೃದ್ಧಿಯಲ್ಲಿ ಯುವಕ ಮಂಡಲವು ಸಕ್ರಿಯವಾಗಿ ಭಾಗವಹಿಸಿ ಸೇವೆಯನ್ನು ನೀಡುವಂತಾಗಲಿ ಎಂದರು. ಸಭಾಧ್ಯಕ್ಷತೆಯನ್ನು ನಿತಿನ್ ಕುಮಾರ್ ಆರ್ಭಡ್ಕ ವಹಿಸಿದರು.ಲೆಕ್ಕ ಪತ್ರ ಚಿತ್ತರಂಜನ್ ಕಾಟೂರು ಮಂಡಿಸಿದರು. ಜಯಂತ್ ಕುಂಬಾರಚೋಡು ಸ್ವಾಗತಿಸಿ, ಗಣೇಶ್ ಕಾಟೂರು ವಂದಿಸಿದರು. ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.