ಕಾಲಿಗೆ ಗಾಯಗೊಂಡು ನಡೆದಾಡಲು ಕಷ್ಟವಾಗಿದ್ದ ಹೋರಿಯೊಂದಕ್ಕೆ ಮೆಸ್ಕಾಂ ಸಿಬ್ಬಂದಿಗಳು, ಸ್ಥಳೀಯರು ಚಿಕಿತ್ಸೆ ನೀಡಿ ವಿಶ್ವ ಹಿಂದೂ ಪರಿಷದ್ ನೇತೃತ್ವದಲ್ಲಿ ಗೋಶಾಲೆಗೆ ತಲುಪಿಸಿದ್ದಾರೆ. ಸುಳ್ಯದ ಮೆಸ್ಕಾಂ ಆವರಣದಲ್ಲಿ ಕಾಲಿನ ಪಾದದ ಭಾಗ ತುಂಡಾಗಿ ನಡೆದಾಡಲು ಸಂಕಟ ಪಡುತ್ತಿದ್ದ ಹೋರಿಗೆ ಮೆಸ್ಕಾಂ ನ ಕೆಲವು ಸಿಬ್ಬಂದಿಗಳು ಮತ್ತು ಸ್ಥಳೀಯ ನಾಗರಿಕರು ಸೇರಿ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿ, ಆಹಾರ ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾರೆ. ಗುಣಮುಖವಾದ ಬಳಿಕ ಹೋರಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಪುಣ್ಯ ಕೋಟಿ ಗೋ ಶಾಲೆಗೆ ವಿ.ಹಿ.ಪ, ಭಜರಂಗ ದಳದ ಗೊರಕ್ಷ ಪ್ರಮುಖ್ ನವೀನ್ ಎಲಿಮಲೆ ಮತ್ತು ಭಜರಂಗದಳ ಜಿಲ್ಲಾ ಸಹ ಸಂಚಾಲಕ ಲತೀಶ್ ಗುಂಡ್ಯ ನೇತೃತ್ವದಲ್ಲಿ ಫೆ 6 ರಂದು ಸಾಗಿಸಲಾಯಿತು. ಪಿಕಪ್ ವಾಹನವನ್ನು ವಿದ್ಯುತ್ ಗುತ್ತಿಗೆದಾರ ಸೋಮಶೇಖರ ಪೈಕ ಹಾಗೂ ಸಾಗಾಟದ ವೆಚ್ಚವನ್ನು ಮೆಸ್ಕಾಂ ಸಿಬ್ಬಂದಿಗಳು, ಸ್ಥಳೀಯರು ನೀಡಿ ಸಹಕರಿಸಿದ್ದಾರೆ.
- Friday
- November 22nd, 2024