ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಜಂಟಿಯಾಗಿ ನನ್ನ ಹಾಡು ನನ್ನದು ಸಂಗೀತ ಸ್ಪರ್ಧೆ ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಇತ್ತೀಚಿಗೆ ಜರುಗಿತು . ಚಂದನ ಸಾಹಿತ್ಯ ವೇದಿಕೆಯ ದಶಮಾನೋತ್ಸವ ಮತ್ತು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಸಂಗೀತ ಸ್ಪರ್ಧೆಯನ್ನು ಸಮಾಜ ಸೇವಕರಾದ ಮಂಜು ಮೇಸ್ತ್ರಿ ಉದ್ಘಾಟಿಸಿದರು. ಖ್ಯಾತ ಸ್ತ್ರೀ ರೋಗ ತಜ್ಞರಾದ ಡಾ. ವೀಣಾ ಎನ್ ರವರು ಅಧ್ಯಕ್ಷತೆ ವಹಿಸಿದ್ದರು . ಗಾಯಕರಾದ ಎಚ್ .ನಾಗೇಶ್ ವಾಷ್ಠರ್ ಮತ್ತು ಪೆರುಮಾಳ್ ಲಕ್ಷ್ಮಣ ಐವರ್ನಾಡು ಮುಖ್ಯ ಅತಿಥಿಗಳಾಗಿದ್ದರು . ಸಂಗೀತ ಸ್ಪರ್ಧೆಯ ನಿರ್ಣಾಯಕರಾದ ಖ್ಯಾತ ಗಾಯಕಿ ಶೀಲಾ ಪಡೀಲ್ ಮತ್ತು ಖ್ಯಾತ ಗಾಯಕ ಕಿಶನ್ ಕೆ ಕುಳಾಯಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು . ಸಂಗೀತ ಸ್ಪರ್ಧೆಯಲ್ಲಿ ಚೇತನಾ ಹೇಮಳ , ವಿಶ್ವದೀಪ್ ಕುಂದಲ್ಪಾಡಿ , ಶ್ರೀಲಯ ಇ , ಕನಕರಾಜ್ , ಪ್ರದೀಪ್ , ಜೀವನ್ ಪುಣಚ , ಯತೀಶ್ ಎನ್ , ಪ್ರಮೀಳಾರಾಜ್ ಐವರ್ನಾಡು, ಪೆರುಮಾಳ್ , ಅರುಣ್ ರಾವ್ ಜಾಧವ್ , ಗಣೇಶ್ ಚರಣ್ , ಗಾಯನ ಭಾಗವಹಿಸಿದ್ದರು .ಎಲ್ಲರಿಗೂ ನೆನಪಿನ ಕಾಣಿಕೆ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಸಂಗೀತ ಸ್ಪರ್ಧೆಯಲ್ಲಿ ಹರ್ಷಿತಾ ಕೆ ಎಸ್ ಸುಳ್ಯ , ಪ್ರಥಮ , ಸುನೀಶ್ ಕಾಸರಗೋಡು ದ್ವಿತೀಯ , ಪ್ರಜ್ವಲ್ ಡಿ ಕಿನ್ನಿಗೋಳಿ ತೃತೀಯ ಬಹುಮಾನಕ್ಕೆ ಆಯ್ಕೆ ಆದರು. ಎರಡು ಸಮಾಧಾನಕರ ಬಹುಮಾನಗಳಿಗೆ ಹರಿಪ್ರಸಾದ್ ಸುಳ್ಯ ಮತ್ತು ಸಾಹಿತ್ಯ ಕೆ ಪಿ ಸುಳ್ಯ ಆಯ್ಕೆ ಆದರು. ಸ್ಪರ್ಧೆಯಲ್ಲಿ ವಿಜೇತರಾದ ಗಾಯಕರಿಗೆ ಫೆಬ್ರುವರಿ 14 ರಂದು ಸುಳ್ಯದ ಎ ಪಿ ಎಮ್ ಸಿ ಸಭಾಂಗಣದಲ್ಲಿ ನಡೆಯುವ ಚಂದನ ಸಾಹಿತ್ಯ ಸಂಗೀತ ಸಮಾರಂಭದಲ್ಲಿ ಗಣ್ಯರ ಸಮಕ್ಷಮ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವದು . ಕೃಷ್ಣಪ್ಪಗೌಡ , ಮತ್ತು ಶ್ರೀಮತಿ ಸುಜಯ ಕೃಷ್ಣಪ್ಪ ಸಹಕರಿಸಿದರು . ಅರುಣ್ ರಾವ್ ಪ್ರಾರ್ಥನೆ ಹಾಡಿದರು . ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ನಿರ್ದೇಶಕರಾದ ಎಚ್ . ಭೀಮರಾವ್ ವಾಷ್ಠರ್ ರವರು ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿದರು . ಚಂದ್ರಮೌಳಿ ಕಡಂದೇಲು ವಂದಿಸಿದರು. ಶಿಕ್ಷಕಿ ಮತ್ತು ಗಾಯಕಿ ಪ್ರಮೀಳಾ ರಾಜ್ ಐವರ್ನಾಡು ನಿರೂಪಿಸಿದರು .
- Friday
- November 22nd, 2024