ಬೈಕ್ ನಲ್ಲಿ ಸವಾರಿಸುವ ಹಿಂಬದಿ ಸವಾರರು ಕೂಡಾ ಸುಳ್ಯದಲ್ಲಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇಲ್ಲವಾದಲ್ಲಿ ಬೈಕ್ ಚಲಾಯಿಸುವ ಹಾಗೂ ಹಿಂಬದಿ ಕುಳಿತಿರುವ ಇಬ್ಬರಿಗೂ ದಂಡ ವಿಧಿಸಲಾಗುವುದು ಎಂದು ಸುಳ್ಯ ಎಸ್.ಐ. ಹರೀಶ್ ಎಂ.ಆರ್. ತಿಳಿಸಿದ್ದಾರೆ.
ಈ ಆದೇಶ ಕೆಲ ದಿನಗಳಿಂದಲೇ ಜಾರಿಯಲ್ಲಿದೆ. ಸುಳ್ಯದಲ್ಲಿ ಜಾಗೃತಿ ಮೂಡಿಸಲಾಗಿದೆ. ಆದರೂ ಹೆಚ್ಚಿನ ಹಿಂಬದಿ ಸವಾರರು ಹೆಲ್ಮೆಟ್ ಹಾಕದಿರುವುದು ಕಂಡು ಬರುತ್ತಿದೆ. ಆದ್ದರಿಂದ ಇಂದಿನಿಂದ ಹೆಲ್ಮೆಟ್ ಕಡ್ಡಾಯಗೊಳಿಸುತ್ತಿದ್ದೇವೆ. ಚಿಕ್ಕ ಮಕ್ಕಳು ಕೂಡ ಕಾನೂನು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.