ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ. 11 ರಿಂದ ಫೆ. 14 ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಫೆ. 04 ರಂದು ಶ್ರೀ ದೇವರಲ್ಲಿ ಪ್ರಾರ್ಥನೆ, ಗೊನೆ ಕಡಿಯುವುದು ನಡೆಯಲಿದೆ.
ಫೆ. 11 ರಂದು ಸಂಜೆ ಗಂಟೆ 4.30 ಕ್ಕೆ ತಂತ್ರಿಗಳ ಆಗಮನ, ಸಂಜೆ ಗಂಟೆ 5 ಕ್ಕೆ ಊರ ಭಕ್ತರಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ, ರಾತ್ರಿ ಗಂಟೆ 7 ರಿಂದ ಕೋಟೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವತಿಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ, ರಾತ್ರಿ ಗಂಟೆ 7. 30 ರಿಂದ ಬಿಂಬಶುದ್ಧಿ, ವಾಸ್ತುಪೂಜೆ, ವಾಸ್ತು ರಕ್ಷೋಘ್ನ ಹೋಮ ನಡೆಯಲಿದೆ.
ಫೆ. 12 ರಂದು ಬೆಳಗ್ಗೆ 7.30 ರಿಂದ ಗಣಪತಿ ಹವನ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ 12.30 ರಿಂದ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6.00 ರಿಂದ 6.30 ತಾಯಂಬಕಂ, ರಾತ್ರಿ 7.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ ಗಂಟೆ 8.30 ರಿಂದ ಶ್ರೀ ಮಂಜುನಾಥೇಶ್ವರ ಸ್ವಾಮಿ ಹಾಗೂ ಅಮ್ಮನವರ ಬಲಿ ಉತ್ಸವ, ಶ್ರೀ ದೇವರ ಗಂಧ ಪ್ರಸಾದ ವಿತರಣೆ ನಡೆಯಲಿದೆ.
ಫೆ. 13 ರಂದು ಬೆಳಗ್ಗೆ 7.30 ರಿಂದ ಗಣಪತಿ ಹವನ, ಬೆಳಗಿನ ಪೂಜೆ, ಬೆಳಗ್ಗೆ 10 ರಿಂದ ಶ್ರೀ ದೇವರ ಹಾಗೂ ಅಮ್ಮನವರ ದರ್ಶನ ಬಲಿ ಉತ್ಸವ, ಶ್ರೀ ದೇವರ ಗಂಧಪ್ರಸಾದ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಸಂಜೆ ಗಂಟೆ 4 ಕ್ಕೆ ಧರ್ಮದೈವಗಳಾದ ಕಾಳರಾಹು, ಕಾಳರ್ಕಾಯಿ, ಕುಮಾರಸ್ವಾಮಿ ಹಾಗೂ ಕನ್ಯಾಕುಮಾರಿ ದೈವಗಳ ಭಂಡಾರ ತೆಗೆಯುವುದು, ಸಂಜೆ 6 ರಿಂದ ರಾತ್ರಿಪೂಜೆ, ಪ್ರಸಾದ ಭೋಜನ ಬಳಿಕ, ರಾತ್ರಿ ಗಂಟೆ 9 ರಿಂದ ಅಣ್ಣಪ್ಪ ಮಾಡದಲ್ಲಿ ಧರ್ಮದೈವಗಳ ನೇಮ, ಕಾಣಿಕೆ, ಪ್ರಸಾದ ವಿತರಣೆ ನಡೆಯಲಿದೆ.
ಫೆ. 14 ರಂದು ಬೆಳಗ್ಗೆ 6 ರಿಂದ ಬೆಳಗ್ಗಿನ ಪೂಜೆ, ಬೆಳಗ್ಗೆ 10 ರಿಂದ ಶ್ರೀ ದೇವಳದಲ್ಲಿ ರುದ್ರಾಭಿಷೇಕ, ಬೆಳಗ್ಗೆ 12 ರಿಂದ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು ಕಾಯಾರ ಮಾಡದಲ್ಲಿ ನೇಮೋತ್ಸವ, ಸಂಜೆ ಗಂಟೆ 6 ರಿಂದ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆಯುವುದು, ರಾತ್ರಿ ಗಂಟೆ 8.30 ರಿಂದ ರಂಗಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ರಾತ್ರಿ ಗಂಟೆ 10 ರಿಂದ ಅಣ್ಣಪ್ಪ ಸ್ವಾಮಿ ಮಾಡದಲ್ಲಿ ಅಣ್ಣಪ್ಪ ಸ್ವಾಮಿ, ಪಂಜುರ್ಲಿ ದೈವಗಳ ನೇಮ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆದು, ಬೆಳಗ್ಗಿನ ಜಾವ ದೇವಾಲಯದ ವಠಾರದಲ್ಲಿ ಶ್ರೀ ಗುಳಿಗ ದೈವದ ನೇಮ, ಕಾಣಿಕೆ, ಪ್ರಸಾದ ವಿತರಣೆ, ಬಲಿ ನಡೆಯಲಿರುವುದು.
ಮಾ. 11 ರಂದು ಮಹಾಶಿವರಾತ್ರಿ ಉತ್ಸವದ ಅಂಗವಾಗಿ ದೇವಾಲಯದಲ್ಲಿ ಸಂಜೆ ಗಂಟೆ 6 ರಿಂದ ಶತರುದ್ರಾಭಿಷೇಕ, ರಂಗಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಧರ್ಮದರ್ಶಿಗಳಾದ ಯಸ್. ಬಿ.ದಳ ರವರು ತಿಳಿಸಿದ್ದಾರೆ.