Ad Widget

ಕೃಷಿ ಮಸೂದೆಗಳನ್ನು ವಿರೋಧಿಸಿ ಸುಳ್ಯದಲ್ಲಿ ಕರವೇ ಸಾಂಕೇತಿಕ ಪ್ರತಿಭಟನೆ

ಕೃಷಿ ಮಸೂದೆಗಳನ್ನು ವಿರೋಧಿಸಿ ಕರ್ನಾಟಕದಾದ್ಯಂತ ಇಂದು ರೈತ ಸಂಘಟನೆಗಳು ಕರೆ ನೀಡಿರುವ ಬಂದ್​​ ಹಿನ್ನೆಲೆಯನ್ನು ಬೆಂಬಲಿಸಿ ಸಾಂಕೇತಿಕವಾಗಿ ಸುಳ್ಯದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ಕರವೇ ಕಾರ್ಯಕರ್ತರು ಇಂದು ಸುಳ್ಯ ತಾಲೂಕು ಕನ್ನಡ ರಕ್ಷಣಾ ವೇದಿಕೆ ಗೌರವ ಅದ್ಯಕ್ಷ ಅಶೋಕ್ ಕುಮಾರ್ ಮುಂದಾಳತ್ವದಲ್ಲಿ ಕೇರಳ-ಕರ್ನಾಟಕ ರಾಜ್ಯ ಹೆದ್ದಾರಿಯನ್ನು ಕ್ಷಣ ಕಾಲ ತಡೆದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ನಂತರ ಸುಳ್ಯ ತಾಲೂಕು ಕಚೇರಿ ತೆರಳಿ ಕೇಂದ್ರ ಸರ್ಕಾರಕ್ಕೆ ಸುಳ್ಯ ಉಪತಹಶೀಲ್ದಾರ್ ಮುಖಾಂತರ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭ ಕರವೇ ಸದಸ್ಯರಾದ ಧನಂಜಯ ಪಲ್ಲತಡ್ಕ, ಗಣೇಶ್ ಪಲ್ಲತಡ್ಕ, ಮೋಹನ್ ಕಲ್ಲಗುಡ್ಡೆ, ಗಿರೀಶ್ ಕಲ್ಲಗುಡ್ಡೆ, ಮಂಜುನಾಥ್ ಬಡ್ದಡ್ಕ, ಸತೀಶ್ ನಾಯಕ್, ಸುನಿಲ್ ಕಾಂತಮಂಗಾಲ, ಜಯರಾಜ್ ಕಾಂತಮಂಗಲ, ಅಹಮ್ಮದ್ ಮೇನಾಲ, ಶರೀಫ್ ಮೆನಾಲ, ವಿಜಯ ಕಾಂತಮಂಗಲ, ಯೋಗಿಶ್ ಕಾಂತಮಂಗಲ ಮತ್ತಿತರರು ಉಪಸ್ಥಿತರಿದ್ದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!