ಕನಕಮಜಲು : ಶ್ರೀ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕನಕಮಜಲಿನ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ ವತಿಯಿಂದ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವವು ಡಿ.11ರಂದು ಜರುಗಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ನ.18ರಂದು ಬೆಳಿಗ್ಗೆ ಬಿಡುಗಡೆಗೊಳಿಸಲಾಯಿತು.

. . . . . . . . .

ಬೆಳಿಗ್ಗೆ ಮಂದಿರದ ಅರ್ಚಕರಾದ ಗೋಪಾಲಕೃಷ್ಣ ಭಟ್ ವಾರಂಬಳಿತ್ತಾಯರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

. . . . . . .

 ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಕುತ್ಯಾಳ, ಅಧ್ಯಕ್ಷ ರಘುರಾಮ ಮಾಸ್ತರ್ ಬುಡ್ಲೆಗುತ್ತು, ಪ್ರಧಾನ ಕಾರ್ಯದರ್ಶಿ ಲೋಹಿತ್ ಕುಮಾರ್ ಕುದ್ಕುಳಿ, ಕೋಶಾಧಿಕಾರಿ ಜಯಪ್ರಸಾದ್ ಕಾರಿಂಜ, ಸಂಚಾಲಕ ಚಂದ್ರಶೇಖರ ಗುರುಸ್ವಾಮಿ ಕಾರಿಂಜ, ಉಪಾಧ್ಯಕ್ಷ ವಿನಯ್ ಮರಸಂಕ, ಜೊತೆ ಕಾರ್ಯದರ್ಶಿ ಜಯರಾಮ ಗೌಡ ಬಾಳೆಕೋಡಿ, ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ಈಶ್ವರ ಕೊರಂಬಡ್ಕ, ಪ್ರಧಾನ ಅರ್ಚಕರಾದ ಶ್ರೀ ಗೋಪಾಲ ಕೃಷ್ಣ ವಾರಂಬಳಿತ್ತಾಯ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿಯ ಸದಸ್ಯರುಗಳು, ಉಪಸಮಿತಿಯ ಪ್ರಧಾನ ಸಂಚಾಲಕರುಗಳು, ಸಹಸಂಚಾಲಕರುಗಳು, ಸದಸ್ಯರುಗಳು, ಶ್ರೀ ಅಯ್ಯಪ್ಪ ವೃತಧಾರಿಗಳು ಸೇರಿದಂತೆ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading