ಬಾಳುಗೋಡು : ಪದಕ ನೂತನ ಸೇತುವೆ ನಿರ್ಮಾಣಕ್ಕೆ ಗುದ್ದಲಿ ಪೂಜೆ “ಕಾಂಗ್ರೆಸ್ ಆಡಳಿತದಲ್ಲಿ ನಿರಂತರ ಅಭಿವೃದ್ಧಿ” – ಭರತ್ ಮುಂಡೋಡಿ

ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಪದಕ ಮುಳುಗು ಸೇತುವೆ ಇದ್ದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ ಕರ್ನಾಟಕ ಘನ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರು 1.75ಕೋಟಿ ಅನುದಾನ ಬಿಡುಗಡೆಗೊಳಿಸಿದ್ದು, ಈ ಸೇತುವೆ ನಿರ್ಮಾಣಕ್ಕಾಗಿ ಬಾಳುಗೋಡು ಗ್ರಾಮ ಕಾಂಗ್ರೆಸ್ ಕಾರ್ಯಕರ್ತರ ಬೇಡಿಕೆಯ ಮೇರೆಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ ರಾಮಕುಂಜ ನಿರಂತರ ಪ್ರಯತ್ನ ನಡೆಸಿದ್ದರು.

. . . . . . . . .

ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿಯವರು ಗುದ್ದಲಿಪೂಜೆ ನೆರವೇರಿಸಿ, “ಇಲ್ಲಿ ಮುಳುಗು ಸೇತುವೆ ಮಳೆಗಾಲದಲ್ಲಿ ಮುಳುಗಿ ಸುಗಮ ಸಂಚಾರಕ್ಕೆ ಕಷ್ಟವಾಗುತ್ತಿತ್ತು ಹಾಗೂ ಸೇತುವೆ ಸಂಪೂರ್ಣ ಹಾನಿಯಾಗಿತ್ತು. ಕಾಂಗ್ರೆಸ್ ಪಕ್ಷದ ವಿಧಾನಸಭಾ ಅಭ್ಯರ್ಥಿ ಕೃಷ್ಣಪ್ಪರ ಪ್ರಯತ್ನದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಯು.ಟಿ ಖಾದರ್ ಅವರ ಪತ್ರದ ಮುಖೇನ ಕರ್ನಾಟಕ ರಾಜ್ಯ ಸರ್ಕಾರದ ಲೋಕೋಪಯೋಗಿ ಸಚಿವ ಶ್ರೀ ಸತೀಶ್ ಜಾರಕಿಹೊಳಿ ಅವರ ಅನುಮೋದನೆಯೊಂದಿಗೆ ಮುಖ್ಯಮಂತ್ರಿ ಶ್ರೀ ಡಿ.ಕೆ ಶಿವಕುಮಾರ್ ನೇತೃತ್ವದ ಸರ್ಕಾರ ಅನುದಾನ ಬಿಡುಗಡೆಗೊಳಿಸಿದ್ದು” ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಸರ್ಕಾರಕ್ಕೆ ಹಾಗೂ ಈ ಸೇತುವೆಗಾಗಿ ಶ್ರಮಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

. . . . . . .

ಈ ಸಂದರ್ಭದಲ್ಲಿ ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಯಾನಂದ ಕಟ್ಟೆಮನೆ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚೇತನ್ ಕಜೆಗದ್ದೆ, ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯ ಪ್ರಮುಖರಾದ ಶೈಲೇಶ್ ಕಟ್ಟೆಮನೆ, ಸದಾನಂದ ಬಾಳುಗೋಡು, ಆನಂದ ಬೆದ್ರುಪಣೆ, ದೇವಿದಾಸ ಕೊತ್ನಡ್ಕ, ಮಂಜುನಾಥ ಕಿರಿಭಾಗ, ಯುವ ಕಾಂಗ್ರೆಸ್ ಕಾರ್ಯದರ್ಶಿ ಜೀವನ್ ಮಿತ್ತಡ್ಕ, ಯುವ ಕಾಂಗ್ರೆಸ್ ಪ್ರಮುಖರಾದ ಪ್ರಮೋದ್ ಬಾಳುಗೋಡು, ಪ್ರಧಾನ್ ಕೂಜುಗೋಡು ಕಟ್ಟೆಮನೆ, ನವೀನ್ ವಾಡ್ಯಪ್ಪನಮನೆ, ಅಖಿನ್ ಬಾಳುಗೋಡು, ನಿರಣ್ ಬಾಳುಗೋಡು, ವಿಶ್ವನಾಥ ಪುಣೇರಿ,

ಪುಟ್ಟಣ್ಣ ಪುಣೇರಿ, ಉದಯ ಕುಮಾರ್ ಪುಣೇರಿ, ಸುಕೇಶ್ ಬೆಟ್ಟುಮುಖಿ, ಜಾಣಪ್ಪ ಪುಣೇರಿ, ಗಣೇಶ್ ಪುಣೇರಿ, ಎಲ್ಲಪ್ಪ ಮುಂಡೋಕಜೆ, ರಾಮಚಂದ್ರ ಬೆಟ್ಟುಮುಖಿ, ಪುರುಷೋತ್ತಮ ಮಾನಡ್ಕ, ಭುವನಾ ವಿಶ್ವನಾಥ ಪುಣೇರಿ ಹಾಗೂ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು.

ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿ ಜೀವನ್ ಮಿತ್ತಡ್ಕ ಧನ್ಯವಾದ ಸಮರ್ಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading