- Wednesday
- September 16th, 2026
ನಿಂತಿಕಲ್ಲು : ಸುಳ್ಯ ತಾಲೂಕಿನ ನಿಂತಿಕಲ್ಲು ವಲಯದ ಎಣ್ಮೂರು ಅಲೆಂಗಾರ ಶ್ರೀ ಉಳ್ಳಾಕುಲು, ಚಾಮುಂಡಿ ದೈವ ಹಾಗೂ ಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂ.1 ಲಕ್ಷ ಮೊತ್ತದ ಡಿ.ಡಿ.ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಅವರು ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು. ಈ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರಾದ ಕೊಮೋಡೋ ವೀಲ್ ಚೇರನ್ನು ನಿಂತಕಲ್ಲು ವಲಯದ ಎಣ್ಮೂರಿನ ಬಾಬು ರವರಿಗೆ ತಾಲೂಕು ಯೋಜನಾಧಿಕಾರಿ ಮಾಧವ ರವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರಾದ ಸುಧಾಕರ ರೈ, ಜನಜಾಗೃತಿ ವೇದಿಕೆ ಸದಸ್ಯರಾದ ಉಮೇಶ್ ರೈ ಹಾಗೂ ವಲಯ ಅಧ್ಯಕ್ಷರಾದ ವಸಂತ ಮತ್ತು ಮೇಲ್ವಿಚಾರಕರು ಉಪಸ್ಥಿತರಿದ್ದರು.
ಶಿಕ್ಷಕ ವೃತ್ತಿ ಎಂದರೆ ಗೌರವದ ಕೆಲಸ. ಒಂದು ವರ್ಷದ ತರಬೇತಿ ಪಡೆದು ಶಿಕ್ಷಕಿಯರಾಗಿ ವೃತ್ತಿ ಬಂದು ರೂಪಿಸಿಕೊಳ್ಳಲು ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಕಳೆದ 9 ವರ್ಷಗಳಿಂದ ತರಬೇತಿ ನೀಡುತ್ತಿದೆ. ಇಲ್ಲಿ ತರಬೇತು ಪಡೆದ ನೂರಾರು ಮಂದಿ ಶಿಕ್ಷಕಿಯರಾಗಿ ವೃತ್ತಿ ಬದುಕು ರೂಪಿಸಿಕೊಡಿದ್ದಾರೆ. ಪ್ರತಿ ವರ್ಷವೂ ಶೇ. 100 ಫಲಿತಾಂಶ ಪಡೆಯುವುದರೊಂದಿಗೆ ಶೇ....
ಸೆ.11 ರಂದು ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ನವೋದಯ ಒಕ್ಕೂಟ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕೊಲ್ಲೂರಮ್ಮ ನವೋದಯ ಗುಂಪಿನ ಸದಸ್ಯರಾದ ಮೋಹನ್ ರವರು ವಹಿಸಿದ್ದರು. ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ಬೊಳುಗಲ್ಲು ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್, ನವೋದಯ ಪ್ರೇರಕಿ ಶ್ರೀಮತಿ ಚಂಚಲಾಕ್ಷಿ, ಒಕ್ಕೂಟ ಕಾರ್ಯದರ್ಶಿ ಪುಷ್ಪಾವತಿ ಎಂ,...
ಅರಂತೋಡು : ಶ್ರೀ ದುರ್ಗಾಮಾತಾ ಭಜನಾ ಮಂದಿರ ಹಾಗೂ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ(ರಿ.) ವತಿಯಿಂದ 36ನೇ ವರ್ಷದ ಗಣೇಶೋತ್ಸವ ಸೆ.14ರಂದು ಸೋಮವಾರ ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅಂದು ಬೆಳಿಗ್ಗೆ 5:00 ಗಂಟೆಗೆ ಗಣಪತಿ ಹೋಮ, 7:00 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠೆ, 7:30ರಿಂದ 8:30ರವರೆಗೆ ಭಜನೆ ಹಾಗೂ ಮಧ್ಯಾಹ್ನ 12:00ಗಂಟೆಗೆ...
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ ಯೋಜನೆಯಡಿ, ರಾಜ್ಯ ಸರಕಾರದ ಸಹಯೋಗದೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಸುಳ್ಯ ಹಾಗೂ ಕಡಬ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 23 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ವಿವಿಧ ಕಾಮಗಾರಿಗಳಿಗೆ ಶೀಘ್ರದಲ್ಲೇ ಚಾಲನೆ ದೊರೆಯಲಿದೆ.ಇದರ ಭಾಗವಾಗಿ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಹಾಗೂ ಆಲೆಟ್ಟಿ...
ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವತಿಯಿಂದ ಅಕ್ಟೋಬರ್ 2ರ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 5ರಂದು ಸುಳ್ಯದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕಾರ್ಯಕ್ರಮದ ಪೂರ್ವಭಾವಿ ಸಭೆ ಸೆ.8ರಂದು ಸುಳ್ಯ ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ. ಜಿಲ್ಲೆ–2ರ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎನ್.ಎ....
ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮೂರು ದಿನಗಳ ಪಿಸಿಬಿ ವಿನ್ಯಾಸ, ತಯಾರಿಕೆ ಮತ್ತು ಪರೀಕ್ಷಾ ಕಾರ್ಯಾಗಾರಕ್ಕೆ ಸೆ.10ರಂದು ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ ವಿ. ಅವರು ಪ್ರಸ್ತುತ ತಾಂತ್ರಿಕ ಕ್ಷೇತ್ರದಲ್ಲಿ ಪ್ರಾಯೋಗಿಕ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಹೈಕೋರ್ಟ್ ವಕೀಲ ಹಾಗೂ ಕಳೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್.ಆರ್ ಪೂಜಾರಿ ಅವರನ್ನು ಎಐಸಿಸಿ ಹೈಕಮಾಂಡ್ ನೇಮಕ ಮಾಡಿದೆ.ಪಕ್ಷ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಇತ್ತೀಚೆಗೆ 'ಸಂಘಟನ್, ಸಮರ್ಥನ್, ಸೃಜನ್' ಅಭಿಯಾನವನ್ನು ನಡೆಸಿತ್ತು. ಈ ಅಭಿಯಾನದ ಭಾಗವಾಗಿ ಎಐಸಿಸಿ ನಿಯೋಜಿಸಿದ್ದ ವೀಕ್ಷಕರ...
ಈ ವರ್ಷ ಸುಳ್ಯ ತಾಲೂಕಿನಿಂದ ಸುಮಾರು 40 ಕ್ಕೂ ಮಿಕ್ಕಿದ ಯಾತ್ರಿಕರು ಪವಿತ್ರ ಹಜ್ ಯಾತ್ರೆ ಯನ್ನು ಕೈ ಗೊಳ್ಳುತ್ತಿದ್ದು, ಎಲ್ಲರಿಗೂ ವೈದ್ಯಕೀಯ ತಪಾಸಣೆ ನಡೆಸಿ ಫಿಟ್ ನೆಸ್ ಸರ್ಟಿಫಿಕೇಟ್ ನ್ನು ಅಪ್ ಲೋಡ್ ಮಾಡಬೇಕಾಗಿದೆ ಈ ಹಿಂದೆ ಯಾತ್ರಾರ್ಥಿಗಳು ಮಂಗಳೂರಿನ ಜಿಲ್ಲಾ ಆಸ್ಪತ್ರೆಗೆ ಹೋಗಿ ಡಿಸ್ಟ್ರಿಕ್ ಸರ್ಜನ್ ರವರಿಂದ ಮೆಡಿಕಲ್ ಸರ್ಟಿಫಿಕೇಟ್ ಪಡಯಬೇಕಾಗಿತ್ತು. ಕಳೆದ...
Loading posts...
All posts loaded
No more posts
