ಕಂದ್ರಪ್ಪಾಡಿಯಲ್ಲಿ ₹66 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಸಂಸದರಿಂದ ಗುದ್ದಲಿ ಪೂಜೆ

ಗ್ರಾಮೀಣ ಭಾಗದ ಜನರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಸೆ.13ರಂದು ಕಂದ್ರಪ್ಪಾಡಿಯಲ್ಲಿ ಗುದ್ದಲಿ ಪೂಜೆ ನೆರವೇರಿತು. ಸುಮಾರು ₹66 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಗುದ್ದಲಿ ಪೂಜೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ...

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಮಾರಸ್ವಾಮಿ ಪಿ.ಯು ಕಾಲೇಜಿನ ಎರಡು ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸುಬ್ರಹ್ಮಣ್ಯ, ಸೆ. 12: ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ), ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕುಮಾರಸ್ವಾಮಿ ಪಿ.ಯು. ಕಾಲೇಜು, ಸುಬ್ರಹ್ಮಣ್ಯ ಇವರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ–2026 ಅನ್ನು ಸೆಪ್ಟೆಂಬರ್ 12ರಂದು ಕುಮಾರಸ್ವಾಮಿ ಪಿ.ಯು. ಕಾಲೇಜು, ಸುಬ್ರಹ್ಮಣ್ಯದಲ್ಲಿ ಆಯೋಜಿಸಲಾಯಿತು. ಕಡಬ ತಾಲೂಕಿನ ವಿವಿಧ ಪದವಿಪೂರ್ವ ಕಾಲೇಜುಗಳ ಬಾಲಕ ಮತ್ತು ಬಾಲಕಿಯರ...
Ad Widget

ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಆಗ್ರಹಿಸಿ ಸೆ.16ರಂದು ಗ್ರಾಮ ಪಂಚಾಯತ್ ಗಳ ಎದುರು ಧರಣಿ

ಸುಳ್ಯ: ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಂತೆ ಹಾಗೂ ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಗಳ ನಡುವೆ ಸ್ಪಷ್ಟ ಗಡಿ ಗುರುತಿಸಿ ಶೂನ್ಯ (0) ಬಫರ್‌ಝೋನ್ ಘೋಷಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಗಳ ಎದುರು ಸೆ.16ರಂದು ಧರಣಿ ಸತ್ಯಾಗ್ರಹ ನಡೆಸಲು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಕರೆ ನೀಡಿದೆ. ಸೆ.16ರಂದು ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಮಲೆನಾಡು...

ಸುಳ್ಯ : ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಕಬಡ್ಡಿ ಪಂದ್ಯಾಟ

ಸುಳ್ಯ ತಾಲೂಕು ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವನ್ನು ರೋಟರಿ ಪ್ರಾಥಮಿಕ ಶಾಲೆ ರಥಬೀದಿಯಲ್ಲಿ ಆಯೋಜಿಸಲಾಗಿತ್ತು.ಉದ್ಘಾಟನಾ ಸಮಾರಂಭದಲ್ಲಿ ರೋಟರಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೊ. ಪಿ.ಪಿ ಎಂ.ಪಿ.ಹೆಚ್.ಎಫ್ ಪ್ರಭಾಕರನ್ ನಾಯರ್ ರವರು ದೀಪ ಬೆಳಗಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ರೊ. ಮೇಜರ್ ಡೋನರ್ ಲತಾ ಮಧುಸೂದನ್ ಇವರು ವಹಿಸಿದ್ದರು.ವೇದಿಕೆಯಲ್ಲಿ...

ಸುಳ್ಯ ಎನ್.ಎಂ.ಪಿಯುಸಿ ಬಾಲಕರ ಕಬಡ್ಡಿ ತಂಡ ಚಾಂಪಿಯನ್

ಶಾಲಾ ಶಿಕ್ಷಣ ಇಲಾಖೆ(ಪ.ಪೂ) ಮತ್ತು ರೋಟರಿ ಪಿಯು ಕಾಲೇಜು ಮಿತ್ತಡ್ಕ ಸುಳ್ಯ ಇದರ ಸಹಯೋಗದಲ್ಲಿ ಸುಳ್ಯದ ರೋಟರಿ ಶಾಲೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಪ.ಪೂ ಬಾಲಕರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸುಳ್ಯ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ಹುಡುಗರ ತಂಡ ಈ ಬಾರಿಯೂ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಜಿಲ್ಲಾ ಮಟ್ಟಕ್ಕೆ...

ದ್ವಾದಶ ರಾಶಿಗಳ ದಿನ ಭವಿಷ್ಯ

ದಿನಾಂಕ:13-09-2026 ಭಾನುವಾರಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197*01,🐏ಮೇಷರಾಶಿ🐏*📃,ನಿಮ್ಮ ಮತ್ತು ನಿಮ್ಮ ಗ್ರಾಹಕರ ನಡುವೆ ಇದ್ದ ಭಿನ್ನಾಭಿಪ್ರಾಯಗಳಿಗೆ ಮುಕ್ತಿ ದೊರೆಯುವುದು. ಈ ಹಿಂದೆ ಮಾಡಿದ ತಪ್ಪನ್ನೇ ಪುನಃ ಮಾಡುವುದು ಬುದ್ಧಿವಂತರ ಲಕ್ಷ ಣವಲ್ಲ, ನಿಮ್ಮ ಆರೋಗ್ಯದ ಕಡೆ ಗಮನವಿರಿಸಿ, ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇತರರನ್ನು ಕುರಡಾಗಿ ನಂಬಬೇಡಿ,ಗಮನಿಸಿ:- ಇಂದು ನಿಮ್ಮ ಗುರು ಹಿರಿಯರ...

“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಸೆ.07)ದಿಂದ ಶನಿವಾರ(ಸೆ.12)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಅಡಿಕೆ, ಕಾಳುಮೆಣಸು, ಕೊಬ್ಬರಿ ಹಾಗೂ ಕೊಕ್ಕೋ ದರ ಸಂಪೂರ್ಣ ಸ್ಥಿರ..! – ರಬ್ಬರ್‌ನ ಎಲ್ಲಾ ವಿಭಾಗಗಳಲ್ಲೂ ಉತ್ತಮ ಏರಿಕೆ..!

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತಿದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಆಯಾ ದಿನಗಳ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್...

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಶನಿಪೂಜೆ ಮತ್ತು ಬಲಿವಾಡು ಕೂಟ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೆ.12 ರಂದು ಸಾಮೂಹಿಕ ಶನಿಪೂಜೆ ಹಾಗೂ ಬಲಿವಾಡು ಕೂಟ ನಡೆಯಿತು. ಶ್ರೀ ಪಂಚಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್ ಬಾಂಜಿಕೋಡಿ ಮತ್ತು ಸದಸ್ಯರು ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಸುಳ್ಯ: ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸುಳ್ಯದ ಕೆ.ಪಿ.ಎಸ್. ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 14ರ ವಯೋಮಾನದ ಬಾಲಕರ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಅಕ್ಷರ್ ಅವರು ಟ್ರೆಡಿಷನಲ್ ಸಿಂಗಲ್ಸ್, ಆರ್ಟಿಸ್ಟಿಕ್ ಡಬಲ್ಸ್ ಹಾಗೂ...

ಸೆ.20ರಂದು ಗುತ್ತಿಗಾರು ವಲಯದ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ – ಇಂದು ಆಮಂತ್ರಣ ಪತ್ರಿಕೆ ಬಿಡುಗಡೆ

ಗುತ್ತಿಗಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಪ್ರಗತಿಬಂಧು–ಸ್ವಸಹಾಯ ಸಂಘಗಳ ಒಕ್ಕೂಟ, ಗುತ್ತಿಗಾರು ವಲಯದ ಆಶ್ರಯದಲ್ಲಿ ವಿವಿಧ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸೆ.20ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಗುತ್ತಿಗಾರು, ವಳಲಂಬೆ, ಕಮಿಲ–ಮೊಗ್ರ–ಬಳ್ಳಕ್ಕ, ಮಾವಿನಕಟ್ಟಿ, ದೇವ, ನಡುಗಲ್ಲು, ಹಾಲೆಮಜಲು, ಮೆಟ್ಟಿನಡ್ಕ, ಕಂದ್ರಪ್ಪಾಡಿ ಹಾಗೂ ಮಡಪ್ಪಾಡಿ ಪ್ರಗತಿಬಂಧು–ಸ್ವಸಹಾಯ...
Loading posts...

All posts loaded

No more posts

error: Content is protected !!