ಬೆಳ್ಳಾರೆ : ಪಳ್ಳಿಮಜಲಿನಲ್ಲಿ ಈದ್ಮೀಲಾದ್ ಅಂಗವಾಗಿ ಮೆಹ್ಫಿಲೆ ತ್ವಯಿಬಾ 2026

ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಅಬೂಬಖರ್ ಸ್ವಿದ್ದೀಖ್(ರ)ಜುಮುಅ: ಮಸೀದಿಯಲ್ಲಿ ಈದ್ ಮೀಲಾದ್ ಅಂಗವಾಗಿ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಕೆಂಡರಿ ಮದರಸ ವಿದ್ಯಾರ್ಥಿಗಳ ಧಾರ್ಮಿಕ ಕಲಾ‌ ಸಾಂಸ್ಕೃತಿಕ ಕಾರ್ಯಕ್ರಮ ಮಸೀದಿ ವಠಾರದಲ್ಲಿ ಸೆ 6ರಂದು ನಡೆಯಿತು.

. . . . . . . . .

ಈ ಮದರಸದ ಮೆಹ್ಫಿಲೆ ತ್ವಯಿಬಾ ಸ್ಪರ್ಧಾ ಕಾರ್ಯಕ್ರಮದ ಕಲಾ ತಂಡಗಳಾದ ತಸ್ವಿಯಾ ಮತ್ತು ತರ್ಖಿಯಾ ತಂಡಗಳ ನಡುವೆ ತರಾತುರಿಯ ಸ್ಪರ್ಧೆ ನಡೆಯಿತು. ಖಿರಾಅತ್,ಮತಪ್ರಸಂಗ,ಹಾಡು,ಬುರ್ದಾ,ಕವ್ವಾಲಿ ವಿಭಾಗಗಳ ಒಂಟಿ ಮತ್ತು ಗುಂಪುಗಳ ನಡುವೆ ಬಿರುಸಿನ ಸ್ಪರ್ಧೆ ಕಂಡು ಬಂತು.ಅಂತಿಮವಾಗಿ ತರ್ಖಿಯಾ ತಂಡ ಪ್ರಥಮ ಸ್ಥಾನ‌
ಪಡೆಯಿತು. ತಸ್ವಿಯಾ ತಂಡ ದ್ವಿತೀಯ ಸ್ಥಾನಿಯಾಯಿತು. ಅತಿಥಿಗಳು ವಿಜೇತರಿಗೆ ಟ್ರೋಫಿ ವಿತರಿಸಿದರು.

. . . . . . .

ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಸುಳ್ಯ ತಾಲೂಕು ಎಸ್ಎಸ್ಎಫ್ ಮಾಜಿ ಅಧ್ಯಕ್ಷ ಹಸನ್ ಸಖಾಫಿ ಬೆಳ್ಳಾರೆ,ಪಳ್ಳಿಮಜಲು ಮದರಸದ ಪೂರ್ವ ಮುಖ್ಯ ಶಿಕ್ಷಕ ಕೆ. ಎಂ. ಹೆಚ್ ಝುಹುರಿ ಕೊಂಬಾಳಿ,ಪಳ್ಳಿಮಜಲು ಖತೀಬ್ ಮುಹಮ್ಮದ್ ಸವಾದ್ ಮದನಿ,ಪಳ್ಳಿಮಜಲು ಮದರಸ ಮುಅಲ್ಲಿಂ ಹಬೀಬುರ್ರಹ್ಮಾನ್ ಹಿಮಮಿ,ಪಳ್ಳಿಮಜಲು ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಹನೀಫ್ ಸಲಾಲಹ್,ಪಳ್ಳಿಮಜಲು ಮಸೀದಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಬೀಡು,ಜಮಾಅತ್ ಕಮಿಟಿ ಸದಸ್ಯರಾದ ಮುಹಮ್ಮದ್ ಪಿ.ಹೆಚ್,ಸ್ವುಹುಫಿ ಬೀಡು, ಮೆಹ್ಫಿಲೆ ತ್ವಯಿಬಾ ಸ್ವಾಗತ ಸಮಿತಿ ಅಧ್ಯಕ್ಷ ಅಶ್ರಫ್ ನೇಲ್ಯಮಜಲು,ಸ್ಥಳೀಯರಾದ ಇಬ್ರಾಹಿಂ ಬೆಳ್ಳಾರೆ,ಸಮೀರ್ ಕಾವಿನಮೂಲೆ ಉಪಸ್ಥಿತರಿದ್ದರು.

ಪಳ್ಳಿಮಜಲು ಮಸೀದಿಯ ಕಾರ್ಯಗಳಿಗೆ ಸಹಕಾರ ನೀಡಿದ ಅಂದುಞ ಬೀಡು,ಸ್ವಿದ್ದೀಖ್ ಜನಪ್ರಿಯ,ಅಬ್ದುಲ್ಲಾಹ್ ನೆಟ್ಟಾರು,ಪಳ್ಳಿಮಜಲು ಬುಖಾರ ಯೂತ್ ವಿಂಗ್ ನ ಅಧ್ಯಕ್ಷ ನೌಫಲ್ ಪಳ್ಳಿಮಜಲು ಅವರನ್ನು ಸನ್ಮಾನಿಸಲಾಯಿತು.5 ಮತ್ತು 7 ನೇ ತರಗತಿಯ ಪಬ್ಲಿಖ್ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದ ಪಳ್ಳಿಮಜಲು ಮದರಸದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಪಳ್ಳಿಮಜಲು ಮದರಸದ ಸರ್ವ ವಿದ್ಯಾರ್ಥಿ, ವಿದ್ಯಾರ್ಥಿನಿಗಳಿಗೆ ವೈಯಕ್ತಿಕ ಸನ್ಮಾನ ನೀಡಲಾಯಿತು.ಪಳ್ಳಿಮಜಲಿನ ಬುಖಾರ ಯೂತ್ ವಿಂಗ್ ನವರು ಕರಿದ ತಿಂಡಿಗಳು ಮತ್ತು ಚಹಾದ ಲೈವ್ ವ್ಯವಸ್ಥೆಯನ್ನು ಏರ್ಪಡಿಸಿದ್ದರು.ಬೆಳ್ಳಾರೆ ಟೌನ್ ರೋಟರಿ ಕ್ಲಬ್ ನವರು ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ್ದರು.ಬೆಳ್ಳಾರೆ ರೋಟರಿ ಅಧ್ಯಕ್ಷ ಆರೀಫ್ ಬೆಳ್ಳಾರೆಯವರಿಗೆ ಪಳ್ಳಿಮಜಲು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹನೀಫ್ ಸಲಾಲಹ್ ಸ್ಮರಣಿಕೆ ನೀಡಿ ಗೌರವಿಸಿದರು. ಬೆಳ್ಳಾರೆಯ ತಂಬಿನಮಕ್ಕಿ ದಾರುಲ್ ಹುದಾ ಮ್ಯಾನೇಜರ್ ಇಬ್ರಾಹಿಂ ಖಲೀಲ್ ಹಿಮಮಿ ಪ್ರಾರ್ಥನೆ ನಡೆಸಿದರು.ಸ್ಪರ್ಧೆಗಳ ಜಡ್ಜ್ ಗಳಾಗಿ ಕಬೀರ್ ಹಿಮಮಿ ಸಖಾಫಿ ಮೇನಾಲ,ಶಿಹಾಬುದ್ದೀನ್ ಹಿಮಮಿ ಸಖಾಫಿ ಕಾಸರಗೋಡು ಸಹಕರಿಸಿದರು. ಮುಖ್ತಾರ್ ಹಿಮಮಿ ಸಖಾಫಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಪಳ್ಳಿಮಜಲು ಖತೀಬ್ ಮುಹಮ್ಮದ್ ಸವಾದ್ ಮದನಿ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

ವರದಿ-ಎಂ. ಎ. ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading