ಶೌರ್ಯ ವಿಪತ್ತು ನಿರ್ವಹಣಾ ಘಟಕದ ವಾರ್ಷಿಕೋತ್ಸವ: ಸಮಾಜಸೇವೆಯಲ್ಲಿ ಸದಸ್ಯರ ಕೊಡುಗೆ ಶ್ಲಾಘನೀಯ – ಮಾಧವ ಗೌಡ

ಸುಳ್ಯ, ಜೂ. 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸುಳ್ಯ ವಲಯ ಹಾಗೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದ ವಾರ್ಷಿಕೋತ್ಸವವು ಸುಳ್ಯ ಯೋಜನಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ...

ವಳಲಂಬೆ : ಸಾರ್ವಜನಿಕ ಗಣೇಶೋತ್ಸವದ  ನೂತನ ಸಮಿತಿ ರಚನೆ | ಅಧ್ಯಕ್ಷರಾಗಿ ರವೀಂದ್ರ ಬಲ್ನಾಡು, ಪ್ರದಾನ ಕಾರ್ಯದರ್ಶಿಯಾಗಿ ದಯಾನಂದ ಕನ್ನಡ್ಕ, ಕೋಶಾಧಿಕಾರಿಯಾಗಿ ಮಾಧವ ಮೂಕಮಲೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 23 ನೇ ವರ್ಷದ ಗಣೇಶೋತ್ಸವ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿ ರಚನೆ ಜೂ. 20ರಂದು ದೇವಳದ ವಠಾರದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಅಯ್ಕೆ ನಡೆದು ಅಧ್ಯಕ್ಷರಾಗಿ ರವೀಂದ್ರ ಬಲ್ನಾಡು, ಪ್ರದಾನ ಕಾರ್ಯದರ್ಶಿಯಾಗಿ ದಯಾನಂದ ಕನ್ನಡ್ಕ, ಕೋಶಾಧಿಕಾರಿಯಾಗಿ ಮಾಧವ...
Ad Widget

ಪಂಜ : ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಯೋಗ ದಿನಾಚರಣೆ

ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಯೋಗಭ್ಯಾಸವನ್ನು ಮಾಡಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಹಾಗೂ ಯೋಗ ಶಿಕ್ಷಕಿ ಲೀಲಾ ಕುಮಾರಿ.ಟಿ, ಸಹ ಶಿಕ್ಷಕರಾದ ನೇತ್ರಾವತಿ ಮಂಜುಳಾ, ಕಮಲ, ಚೇತನ, ಮೋಹನ್ ಪ್ರಸಾದ್ ಶಿವಾನಂದ ಹಾಗೂ ವಿನುತ ಉಪಸ್ಥಿತರಿದ್ದರು.

ಗೋವಿಂದನಗರ ಅಂಗನವಾಡಿ ಕೇಂದ್ರಕ್ಕೆ ಸಮವಸ್ತ್ರ ಹಾಗೂ ಚಯರ್ ಕೊಡುಗೆ

ಕಟ್ಟ ಗೋವಿಂದನಗರ ನಗರ ಅಂಗನವಾಡಿ ಪುಟಾಣಿಗಳಿಗೆ ಶ್ರೀಮತಿ ಯಮುನ ರವರ ಪುತ್ರ ಸತೀಶ್ ಮತ್ತು ಪುಷ್ಪಾ ದಂಪತಿಗಳು 12 ಚಯರ್ ಹಾಗೂ ಕಟ್ಟ ಮೈಲ ನಿವಾಸಿಯಾಗಿರುವ ಯತೀಂದ್ರ ಮತ್ತು ಜ್ಯೋತಿ ದಂಪತಿಗಳು ಮತ್ತು ಸತೀಶ್ ಮತ್ತು ಪುಷ್ಪ ದಂಪತಿಗಳು 13 ಜೊತೆ ಸಮವಸ್ತ್ರವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಎ.ಜಿ, ಬಾಲವಿಕಾಸ ಸಮಿತಿಯ...

ಮಂಗಳೂರು : ಪುರಭವನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಅಕ್ಷಯ ಬಾಬ್ಲುಬೆಟ್ಟುಗೆ ಸನ್ಮಾನ

ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ದಕ್ಷಿಣ ಕನ್ನಡ ಇವುಗಳ ಆಶ್ರಯದಲ್ಲಿ ಆಯುಷ್ ಮಹಾವಿದ್ಯಾಲಯಗಳು ಹಾಗೂ ವಿವಿಧ ಯೋಗ ಸಂಘಟನೆಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ ದಕ್ಷಿಣ ಕನ್ನಡ ಇವರ ಸಹಕಾರದೊಂದಿಗೆ ಜೂ.21 ರಂದು ಮಂಗಳೂರಿನ ಪುರಭವನದಲ್ಲಿ ನಡೆದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಯೋಗಪಟು ಅಕ್ಷಯ ಬಾಬ್ಲುಬೆಟ್ಟು ಯೋಗ ಕ್ಷೇತ್ರದಲ್ಲಿ...

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜೂ.21 ರಂದು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾಲೇಜಿನ ಸ್ವಸ್ತವೃತ್ತ ಮತ್ತು ಯೋಗ ವಿಭಾಗ, ಎನ್.ಎಸ್.ಎಸ್ ಘಟಕ ಹಾಗೂ ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ಕಾಲೇಜ್ ಮೂಡುಬಿದಿರೆಯ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ ಯವರು ಅಂತರಾಷ್ಟ್ರೀಯ ಯೋಗ...

ಪಂಜ : ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಕದಿರು ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ

ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಕದಿರು ಗದ್ದೆಯಲ್ಲಿ ಜೆ.ಸಿ.ಐ ಪಂಜ ಪಂಚಶ್ರೀ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಜೂ.20 ರಂದು ನೇಜಿ ನಾಟಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಬೇಸಾಯದ ಪಾಠ ಕಾರ್ಯಕ್ರಮ ನಡೆಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್...
error: Content is protected !!