ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜೂ.21 ರಂದು ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕಾಲೇಜಿನ ಸ್ವಸ್ತವೃತ್ತ ಮತ್ತು ಯೋಗ ವಿಭಾಗ, ಎನ್.ಎಸ್.ಎಸ್ ಘಟಕ ಹಾಗೂ ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ಕಾಲೇಜ್ ಮೂಡುಬಿದಿರೆಯ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ ಡಿ.ವಿ ಯವರು ಅಂತರಾಷ್ಟ್ರೀಯ ಯೋಗ ದಿನದ ಪ್ರಾಮುಖ್ಯತೆಯನ್ನು ವಿವರಿಸುತ್ತಾ ಆರೋಗ್ಯವನ್ನು ಕಾಪಾಡಲು ಯೋಗ ಅತ್ಯಮೂಲ್ಯವೆಂದು ತಿಳಿಸಿದರು.

. . . . . . . . .

ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ಯೋಗಾಸನ ಪ್ರದರ್ಶಿಸಿದರು. ಯೋಗ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ಅದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಪ್ರದಾನಿಸಲಾಯಿತು.

. . . . . . .

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು.ಶ್ರಾವಣಿ ಮತ್ತು ಬಳಗ ಪ್ರಾರ್ಥಿಸಿ, ಕು.ವಿದ್ಯಶ್ರೀ ಸ್ವಾಗತಿಸಿ, ಕು.ಮೋನಿಷಾ ವಂದಿಸಿ, ಕು.ತನುಷಾ ಮತ್ತು ಕು.ಪ್ರಿಯಾಂಕ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅಕಾಡೆಮಿಕ್ ಕೊ ಆರ್ಡಿನೇಟರ್ ಆದ ಡಾ. ಕವಿತಾ ಬಿ.ಎಂ, ವಿದ್ಯಾರ್ಥಿ ಕ್ಷೇಮಾಧಿಕಾರಿಯಾದ ಡಾ.ವಿನಯ್ ಶಂಕರ್ ಭಾರಧ್ವಾಜ್.ಬಿ, ಯೋಗ ದಿನಾಚರಣೆಯ ಕೊ-ಆರ್ಡಿನೇಟರ್ ಆದ ಡಾ.ಅವಿನಾಶ್ ಕೆ.ವಿ, ಸ್ವಸ್ತವೃತ್ತ ಮತ್ತು ಯೋಗ ವಿಭಾಗದ ಪ್ರಾದ್ಯಾಪಕರಾದ ಡಾ. ಜಯವಾಣಿ ಎಂ.ಜಿ ಹಾಗೂ ಡಾ. ಶಬೀನಾ ಟಿ.ಟಿ, ಎನ್.ಎಸ್.ಎಸ್ ಘಟಕದ ಕೋ-ಆರ್ಡಿನೇಟರ್ ಡಾ.ಪ್ರಮೋದ್ ಪಿ.ಎ, ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗ ಮೂಡುಬಿದಿರೆಯ ಯೋಗ ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ್.ಕೆ ಹಾಗೂ ಶೆಣೈ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕೋತ್ತರ ವಿದ್ಯಾರ್ಥಿಗಳು, ಕಲಿಕಾ ವೈದ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ತಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading