ಕೊಲ್ಲಮೊಗ್ರು : ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರ ರಚನೆ

ಕೊಲ್ಲಮೊಗ್ರದ ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯಲ್ಲಿ ಜೂ.18 ರಂದು ಶಾಲಾ ವಿದ್ಯಾರ್ಥಿ ಸರ್ಕಾರದ ರಚನೆಯು ಚುನಾವಣೆಯ ಮೂಲಕ ನಡೆಯಿತು. ಶಾಲಾ ನಾಯಕನಾಗಿ 10ನೇ ತರಗತಿಯ ಪುನೀತ್ ರಾಜ್.ಎಸ್, ಉಪ ನಾಯಕನಾಗಿ 8ನೇ ತರಗತಿಯ ಅಮೋಘ್.ಕೆ.ಎಲ್, ಕಾರ್ಯದರ್ಶಿಯಾಗಿ 8ನೇ ತರಗತಿಯ ಹವೀಶ್.ಸಿ, ಕ್ರೀಡಾಮಂತ್ರಿಯಾಗಿ 10ನೇ ತರಗತಿಯ ಬೃಂಧನ್, ಸ್ವಚ್ಚತಾ ಮಂತ್ರಿಯಾಗಿ 8ನೇ ತರಗತಿಯ ಕ್ಷಮಾ, ನೀರಾವರಿ ಮಂತ್ರಿಯಾಗಿ 10ನೇ ತರಗತಿಯ ಲೇಖನ್.ಸಿ, ಕೃಷಿ ಮಂತ್ರಿಯಾಗಿ 10ನೇ ತರಗತಿಯ ಸ್ಕಂದ.ಎಂ.ಯು, ಸಾಂಸ್ಕೃತಿಕ ಮಂತ್ರಿಯಾಗಿ 9ನೇ ತರಗತಿಯ ಕೀರ್ತಿ, ಶಿಸ್ತು ಮಂತ್ರಿಯಾಗಿ 9ನೇ ತರಗತಿಯ ಆರಾಧ್ಯ.ಕೆ ಇವರುಗಳು ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಸುರೇಶ್.ಪಿ.ಕೆ, ಸಹಶಿಕ್ಷಕರಾದ ಲೋಕನಾಥ್ ಗೌಡ, ಶ್ರೀಮತಿ ಸಂಧ್ಯಾರಾಣಿ, ರಾಜೇಶ್ ಹಾಗೂ ಚಂದ್ರು ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ಗೌಡ.ಎನ್ ರವರ ಮಾರ್ಗದರ್ಶನದಲ್ಲಿ ಚುನಾವಣಾ ಕಾರ್ಯ ನಡೆಯಿತು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading