ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ವತಿಯಿಂದ ಶೈಕ್ಷಣಿಕ ಸಾಧಕರಿಗೆ ಸನ್ಮಾನ

ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಸುಳ್ಯ ವತಿಯಿಂದ 10ನೇ ತರಗತಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಹಾಗೂ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ 11ನೇ ಸ್ಥಾನವನ್ನು ತನ್ನದಾಗಿಸಿಕೊಂಡ ಪ್ರತಿಭಾನ್ವಿತ ವಿಧ್ಯಾರ್ಥಿನಿಯರನ್ನು ಗುರುತಿಸಿ ಸನ್ಮಾನಿಸಲಾಯಿತು.

. . . . . . . . .

ಸುಳ್ಯ ನಾಲ್ಕೂರು ಗ್ರಾಮ ಅಂಜೇರಿ ಸುಬ್ಬ ಪಾಟಾಳಿ ಹಾಗೂ ವೇದಾವತಿ ದಂಪತಿಗಳ ಪುತ್ರಿ ಪ್ರಗತಿಪರ ಕೃಷಿಕ ಮೋಹನ ಅಂಜೇರಿ ಸೊಸೆ ಕು. ಸುಶ್ಮಿತಾ 2025 -26ನೇ ಸಾಲಿನಲ್ಲಿ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ 625 ಅಂಕಗಳಲ್ಲಿ 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 2ನೇ ಸ್ಥಾನವನ್ನು ಹಾಗೂ ಕನಕಮಜಲು ಗ್ರಾಮದ ಗಣೇಶ ಕೊಲ್ಲಮೊಗ್ರ ಹಾಗೂ ಮಮತಾ ದಂಪತಿಗಳ ಪುತ್ರಿ ಕು. ಶರಣ್ಯಾ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ 600 ಅಂಕಗಳಲ್ಲಿ 590 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 11ನೇ ಸ್ಥಾನವನ್ನು ಗಳಿಸಿ ಶೈಕ್ಷಣಿಕ ಸಾಧನೆಗೈದ ವಿಧ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

. . . . . . .

ಈ ಸಂಧರ್ಭದಲ್ಲಿ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕರ್ಲಪ್ಪಾಡಿ, ಕಾರ್ಯದರ್ಶಿ ಗೋಪಾಲಕೃಷ್ಣ ಮೊರಂಗಲ್ಲು, ಕೋಶಾಧಿಕಾರಿ ರಾಧಾಕೃಷ್ಣ ಬೇರ್ಪಡ್ಕ, ಆಂತರಿಕ ಲೆಕ್ಕ ಪರಿಶೋಧಕ ಮಹಾಲಿಂಗನ್ ಬಾಜರ್ತೊಟ್ಟಿ ಉಪಾಧ್ಯಕ್ಷೆ ಹೇಮಲತಾ ಕಲ್ಲುಗುಂಡಿ, ಗ್ರಾಮವಾರು ಸಮಿತಿ ಸಂಚಾಲಕ ಉದಯರವಿ ಕಲ್ಚಾರು ಕಾರ್ಯಕಾರಿ ಸದಸ್ಯರುಗಳಾದ ಕೇಶವ ಮೊರಂಗಲ್ಲು, ಪ್ರವೀಣ್ ಕುಮಾರ್ ಜಯನಗರ, ಸತ್ಯಾ ಕೊಲ್ಲಮೊಗ್ರ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading