ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆ(ಜೂ.20) ಉತ್ಸವಾದಿಗಳಿಗೆ ತೆರೆ

ಸುಬ್ರಹ್ಮಣ್ಯ : ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಳೆ ಜೂ.20 ಶನಿವಾರದಿಂದ ಈ ವರ್ಷದ ಉತ್ಸವದಿಗಳಿಗೆ ತೆರೆ ಬೀಳಲಿದೆ. ಶನಿವಾರ ಬೆಳಗ್ಗೆ ಪುರುಷರಾಯ ದೈವದ ಕೋಲ ನಡೆಯಲಿರುವುದು. ಮಧ್ಯಾಹ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ ಇರುವುದು. ರಾತ್ರಿಯ ಮಹಾಪೂಜೆ ನಂತರ ಶ್ರೀ ದೇವಳದ ಹೊರಾಂಗಣದಲ್ಲಿ ಪಾಲಕ್ಕಿ ಉತ್ಸವದೊಂದಿಗೆ ಬಂಡಿ ಉತ್ಸವ ನೆರವೇರಲಿದೆ. ತದನಂತರ ದೇವರು ಒಳಗಾಗುವ ಪ್ರತಿತಿ. ರಾತ್ರಿ ಪುರುಷರಾಯ ಬೆಟ್ಟದಲ್ಲಿ ಪರಿವಾರ ದೈವಗಳಿಗೆ ಗುಡ್ಡೆ ನಡಾವಳಿ ನಡೆಯಲಿರುವುದು. ರಾತ್ರಿಯಿಂದ ಆರಂಭವಾದ ಕೋಲಗಳು ಬೆಳಗ್ಗೆವರೆಗೂ ನಡೆಯಲಿದೆ. ಶನಿವಾರ ಶುದ್ಧ ಷಷ್ಟಿ ಹಾಗೂ ದೇವರು ಒಳಗಾಗುವುದು ಎರಡು ಒಂದೇ ದಿನವಾದರಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ. ಇನ್ನು ಮುಂದಿನ ದೀಪಾವಳಿಗೆ ಶ್ರೀ ದೇವರು ಹೊರಗೆ ಬರುವ ಕಾರಣ ಅಲ್ಲಿಯವರೆಗೆ ಯಾವುದೇ ಹೊರಾಂಗಣ ಉತ್ಸವವಾಗಲಿ, ಬೀದಿ ಉತ್ಸವವಾಗಲಿ ಇರುವುದಿಲ್ಲ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading