ಇಂದಿನ(ಜೂನ್ 19) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ರಬ್ಬರ್ ಬೆಲೆಯಲ್ಲಿ ಸತತ ಎರಡನೇ ದಿನವೂ ಕುಸಿತ – ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 19 ಜೂನ್ 2026
ವಾರ : ಶುಕ್ರವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಜೂನ್ 19) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 390 ರಿಂದ 470
ಹಳೆ ಅಡಿಕೆ : 390 ರಿಂದ 550
ಡಬಲ್ ಚೋಲ್ : 390 ರಿಂದ 550
ಫಟೋರಾ : 335 ರಿಂದ 382
ಉಳ್ಳಿಗಡ್ಡೆ : 265 ರಿಂದ 285
ಕರಿಗೋಟು : 245 ರಿಂದ 270
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಇಂದು(ಜೂನ್ 19) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಅಡಿಕೆ, ಹಳೆ ಅಡಿಕೆ ಸೇರಿದಂತೆ ಪ್ರಮುಖ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಸ್ಥಿರವಾಗಿದ್ದ ಉಪ ಉತ್ಪನ್ನವಾದ ಕರಿಗೋಟು ಧಾರಣೆಯಲ್ಲಿ ಇಂದು ಕೊಂಚ ಇಳಿಮುಖ ಕಂಡುಬಂದಿದೆ.
ಭದ್ರವಾಗಿ ನಿಂತ ಪ್ರಮುಖ ದರಗಳು : ಹೊಸ ಅಡಿಕೆ ಗರಿಷ್ಠ ₹470 ಹಾಗೂ ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳು ಪ್ರತಿ ಕೆಜಿಗೆ ಗರಿಷ್ಠ ₹550 ರ ಮಟ್ಟದಲ್ಲೇ ಮುಂದುವರಿದು ಮಾರುಕಟ್ಟೆಯಲ್ಲಿ ತಮ್ಮ ದೃಢತೆಯನ್ನು ಕಾಯ್ದುಕೊಂಡಿವೆ.
ಕರಿಗೋಟು ಮಾರುಕಟ್ಟೆಯಲ್ಲಿ ಕುಸಿತ : ನಿನ್ನೆ ಗರಿಷ್ಠ ₹275 ರಷ್ಟಿದ್ದ ಕರಿಗೋಟು ಧಾರಣೆ ಇಂದು ಪ್ರತಿ ಕೆಜಿಗೆ ₹5 ಇಳಿಕೆಯಾಗಿ ಗರಿಷ್ಠ ₹270 ಕ್ಕೆ ತಲುಪಿದೆ.
ಉಳಿದ ಉಪ ಉತ್ಪನ್ನಗಳು ಸ್ಥಿರ : ಫಟೋರಾ(ಗರಿಷ್ಠ ₹382) ಮತ್ತು ಉಳ್ಳಿಗಡ್ಡೆ(ಗರಿಷ್ಠ ₹285) ವಿಭಾಗಗಳಲ್ಲಿ ಯಾವುದೇ ರೀತಿಯ ಏರಿಳಿತಗಳು ಸಂಭವಿಸದೆ ವಹಿವಾಟು ಯಥಾಸ್ಥಿತಿ ಮುಂದುವರಿದಿದೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 575 ರಿಂದ 665
ಹಸಿ ಕೊಕ್ಕೋ : 70 ರಿಂದ 100
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 120 ರಿಂದ 140
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ಕ್ಯಾಂಪ್ಕೋ ಕೃಷಿ ಮಾರುಕಟ್ಟೆಯಲ್ಲಿ ಇಂದು(ಜೂನ್ 19) ಮಾರುಕಟ್ಟೆ ಸಂಪೂರ್ಣ ಶಾಂತವಾಗಿದ್ದು, ಸ್ಥಿರತೆಯ ಹಾದಿಯಲ್ಲೇ ಸಾಗಿದೆ. ನಿನ್ನೆಯ(ಜೂನ್ 18) ದರಕ್ಕೆ ಹೋಲಿಸಿದರೆ ಇಂದು ಕಾಳುಮೆಣಸು, ಕೊಬ್ಬರಿ ಹಾಗೂ ಕೊಕ್ಕೋ ಸೇರಿದಂತೆ ಯಾವುದೇ ಉತ್ಪನ್ನಗಳ ಬೆಲೆಯಲ್ಲಿ ಬದಲಾವಣೆ ಕಂಡುಬಂದಿಲ್ಲ.
ದೃಢವಾಗಿ ನಿಂತ ಕಾಳುಮೆಣಸು : ಕಾಳುಮೆಣಸು ಮಾರುಕಟ್ಟೆಯಲ್ಲಿ ನಿನ್ನೆಯ ದರವೇ ಮುಂದುವರಿದಿದ್ದು, ಪ್ರತಿ ಕೆಜಿಗೆ ಕನಿಷ್ಠ ₹575 ರಿಂದ ಗರಿಷ್ಠ ₹665 ರ ದರವನ್ನು ಕಾಯ್ದುಕೊಳ್ಳುವ ಮೂಲಕ ಸ್ಥಿರತೆ ಪ್ರದರ್ಶಿಸಿವೆ.
ಕೊಬ್ಬರಿ ಮಾರುಕಟ್ಟೆ ಯಥಾಸ್ಥಿತಿ : ಕೊಬ್ಬರಿ ಧಾರಣೆಯು ಯಾವುದೇ ಏರಿಳಿತ ಕಾಣದೆ ಎಂದಿನಂತೆ ಕನಿಷ್ಠ ₹120 ಹಾಗೂ ಗರಿಷ್ಠ ₹140 ರ ಮಟ್ಟದಲ್ಲೇ ವ್ಯವಹಾರ ಮುಗಿಸಿದೆ.
ಕೊಕ್ಕೋ ವಹಿವಾಟು ಭದ್ರ : ಕೊಕ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೋ ಗರಿಷ್ಠ ₹100 ಹಾಗೂ ಒಣ ಕೊಕ್ಕೋ ಗರಿಷ್ಠ ₹320 ರ ದರವನ್ನು ಕಾಯ್ದುಕೊಳ್ಳುವ ಮೂಲಕ ಸ್ಥಿರತೆ ಪ್ರದರ್ಶಿಸಿವೆ.

ರಬ್ಬರ್ ಧಾರಣೆ
ಗ್ರೇಡ್ : 269
ಲಾಟ್ : 229
ಸ್ಕ್ರ್ಯಾಪ್ ಪ್ರಥಮ ದರ್ಜೆ : 155
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 146.5
ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಇಳಿಕೆಯ ಟ್ರೆಂಡ್ ಮುಂದುವರಿದಿದೆ. ನಿನ್ನೆಯ(ಜೂನ್ 18) ಅಲ್ಪ ಇಳಿತದ ಬೆನ್ನಲ್ಲೇ, ಇಂದು(ಜೂನ್ 19) ಕೂಡ ಎಲ್ಲಾ ವಿಭಾಗಗಳ ರಬ್ಬರ್ ಧಾರಣೆಯಲ್ಲಿ ಮತ್ತಷ್ಟು ಕುಸಿತ ದಾಖಲಾಗಿದ್ದು, ಕೊಂಚ ಆತಂಕ ಮೂಡಿಸಿದೆ.
ಗ್ರೇಡ್ ಮತ್ತು ಲಾಟ್‌ನಲ್ಲಿ ಇಳಿಕೆ : ನಿನ್ನೆ ₹271 ರಷ್ಟಿದ್ದ ಗ್ರೇಡ್ ರಬ್ಬರ್ ಇಂದು ₹2 ರಷ್ಟು ಇಳಿಕೆ ಕಂಡು ₹269 ಕ್ಕೆ ತಲುಪಿದೆ. ಇನ್ನು ನಿನ್ನೆ ಭದ್ರವಾಗಿದ್ದ ಲಾಟ್ ರಬ್ಬರ್ ಕೂಡ ಇಂದು ಪ್ರತಿ ಕೆಜಿಗೆ ₹1 ಇಳಿದು ₹229 ಕ್ಕೆ ವ್ಯವಹಾರ ಮುಗಿಸಿದೆ.
ಸ್ಕ್ರ್ಯಾಪ್ ವಿಭಾಗದಲ್ಲೂ ನಿರಾಸೆ : ಸ್ಕ್ರ್ಯಾಪ್ ರಬ್ಬರ್ ಬೆಲೆಗಳು ಸತತ ಎರಡನೇ ದಿನವೂ ಇಳಿಮುಖ ಹಾದಿ ಹಿಡಿದಿವೆ. ಪ್ರಥಮ ದರ್ಜೆ ಸ್ಕ್ರ್ಯಾಪ್ ₹1 ಇಳಿದು ₹155 ಕ್ಕೆ ಬಂದರೆ, ದ್ವಿತೀಯ ದರ್ಜೆ ಸ್ಕ್ರ್ಯಾಪ್ ರಬ್ಬರ್ ಪ್ರತಿ ಕೆಜಿಗೆ 50 ಪೈಸೆ ಇಳಿಕೆಯಾಗಿ ₹146.50 ಕ್ಕೆ ತಲುಪಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading