ಅಜ್ಜಾವರ ತಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಬಿ.ಎಲ್.ಎ-2 ಮತ್ತು ಕಾರ್ಯಕರ್ತರಿಗೆ ಎಸ್.ಐ.ಆರ್. ತರಬೇತಿ ಕಾರ್ಯಾಗಾರ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಜ್ಜಾವರ ತಾಲೂಕು ಪಂಚಾಯತ್ ವ್ಯಾಪ್ತಿಗೆ ಒಳಪಡುವ ಮಂಡೆಕೋಲು ಮತ್ತು ಅಜ್ಜಾವರ ಗ್ರಾಮಗಳ ಬಿ.ಎಲ್.ಎ2 ಹಾಗೂ ಪಕ್ಷದ ಮುಖಂಡರುಗಳು, ಕಾರ್ಯಕರ್ತರಿಗೆ ಎಸ್.ಐ.ಆರ್ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಾಗಾರ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಅಜ್ಜಾವರದ ಮೇನಾಲದಲ್ಲಿರುವ ಅಂಬೇಡ್ಕರ್ ಸಭಾಂಗಣದಲ್ಲಿ ಜೂ. 15ರಂದು ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಹಾಗೂ ಬಿ.ಎಲ್.ಎ2ಗಳನ್ನು ಒಳಪಡಿಸಿ ತರಬೇತಿ ನೀಡಲಾಯಿತು.
ಮುಖ್ಯ ತರಬೇತುದಾರರಾಗಿ ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ. ಹಾಗೂ ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿ ಶಂಕರ್ ಕಲ್ಮಡ್ಕ ಎಸ್.ಐ.ಆರ್. ಕುರಿತು ಪೂರ್ವ ಸಿದ್ಧತೆಗಳ ಕುರಿತು ತರಬೇತಿ ಹಾಗೂ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ದಕ್ಷಿಣ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ,  ಸಭೆಯಲ್ಲಿ ಸುಳ್ಯ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರು, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸದಸ್ಯ ನಂಜರಾಜ ಸಂಕೇಶ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸಾದ್ ರೈ ಮೇನಾಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಹುಲ್ ಅಡ್ಪಂಗಾಯ, ಸುಳ್ಯ ವಿಧಾನಸಭಾ ಕ್ಷೇತ್ರ ಎನ್.ಎಸ್.ಯು.ಐ. ಅಧ್ಯಕ್ಷ ಧನುಶ್ ಕುಕ್ಕೆಟ್ಟಿ, ಸುಳ್ಯ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ರಂಜಿತ್ ರೈ ಮೇನಾಲ, ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಶೇಖರ್ ಮಣಿಯಾಣಿ, ವಿಶ್ವನಾಥ್ ಮುಳ್ಯ, ಅಬ್ದುಲ್ ಕುಂಞಿ ಅಜ್ಜಾವರ, ಬಿ.ಎಲ್.ಎ2ಗಳಾದ ಶುಭಕರ ಬೊಳುಗಲ್ಲು, ಶೇಖರ್ ಮಣಿಯಾಣಿ, ಪೋಖರೆ ಕುಂಞಿ ಮಂಡೆಕೋಲು, ಧನುಷ್, ಅಬ್ಬಾಸ್ ಎ.ಬಿ., ಶ್ರೀಧರ್, ರಾಘವ ಅಟ್ಲೂರು, ಸುಂದರ ನೆಹರೂನಗರ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶರವಣ ಕುಮಾರ್ ಮೇದಿನಡ್ಕ, ಅಬ್ದುಲ್ಲ ಜಿ., ಕರುಣಾಕರ ಅಡ್ಪಂಗಾಯ, ಹಸೈನಾರ್ ಹಾಜಿ ಗೋರಡ್ಕ, ಮಹಮ್ಮದ್ ಬಿ.ಎ., ವಿನೀತ್ ಬಾರ್ಪಣೆ ಮತ್ತಿತರರು ಉಪಸ್ಥಿತರಿದ್ದು ಮಾಹಿತಿ ಪಡೆದುಕೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading