ಹರಿಹರ ಪಳ್ಳತ್ತಡ್ಕ : ಸಚಿನ್ ಕ್ರೀಡಾ ಸಂಘದ ಸಾರಥ್ಯದಲ್ಲಿ ನಿವೃತ್ತ ಯೋಧರಾದ ಭಾಸ್ಕರ ಕೇಮಟಿ ರವರಿಗೆ ಅಭಿನಂದನಾ ಸಮಾರಂಭ ಹಾಗೂ ಶೈಕ್ಷಣಿಕ ಸಾಧಕಿ ಕು.ಆಶಿಕಾ ಮುಂಡಾಜೆ ರವರಿಗೆ ಸನ್ಮಾನ ಸಮಾರಂಭ

ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇವರ ಸಾರಥ್ಯದಲ್ಲಿ ಜೂ.13 ಶನಿವಾರದಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಿವೃತ್ತ ಯೋಧರಾದ ಭಾಸ್ಕರ ಕೇಮಟಿ ರವರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಕು.ಆಶಿಕಾ ಮುಂಡಾಜೆ ರವರಿಗೆ ಸನ್ಮಾನ ಸಮಾರಂಭ ನಡೆಯಿತು.
ಬೆಳಿಗ್ಗೆ ಹರಿಹರ ಪಳ್ಳತ್ತಡ್ಕ ಮುಖ್ಯ ಪೇಟೆಯಿಂದ ಶ್ರೀ ಹರಿಹರೇಶ್ವರ ದೇವಸ್ಥಾನದ ವರೆಗೆ ಸನ್ಮಾನಿತರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆಯ ಮೂಲಕ ಕರೆತರಲಾಯಿತು. ನಿತ್ಯಾನಂದ ಎಲ್ಲಪ್ಪಡ್ಕ ಮೆರವಣಿಗೆಗೆ ಚಾಲನೆ ನೀಡಿದರು.
ಅಭಿನಂದನಾ ಹಾಗೂ ಸನ್ಮಾನ ಸಮಾರಂಭವನ್ನು ಲೋಕಸಭಾ ಕನ್ಸಲ್ಟೆಂಟ್ ಇಂಟರ್ ಪ್ರೆಟರ್ ಡಾ. ಗೋವಿಂದ.ಎನ್.ಎಸ್ ರವರು ಉದ್ಘಾಟಿಸಿದರು. ಸಂಘದ ಅಧ್ಯಕ್ಷರಾದ ಮನೀಷ್ ಗುಂಡಿಹಿತ್ಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಲೋಕಸಭಾ ಕನ್ಸಲ್ಟೆಂಟ್ ಇಂಟರ್ ಪ್ರೆಟರ್ ಡಾ. ಗೋವಿಂದ.ಎನ್.ಎಸ್, ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಹಿರಿಯ ಸಾಹಿತಿಗಳಾದ ಶ್ರೀಮತಿ ಲಲಿತಾಜ ಮಲ್ಲಾರ ಹಾಗೂ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನಿರ್ದೇಶಕರಾದ ದಿನೇಶ್ ಹಾಲೆಮಜಲು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಭಾಸ್ಕರ ಕೇಮಟಿ ರವರ ಪತ್ನಿ ಭಾರತಿ, ತಂದೆ ಚೆನ್ನಪ್ಪ ಕೇಮಟಿ, ತಾಯಿ ಪದ್ಮಾವತಿ ಹಾಗೂ ಆಶಿಕಾ ಮುಂಡಾಜೆ ರವರ ಅಜ್ಜಿ ಭಾಗೀರಥಿ ಮುಂಡಾಜೆ, ತಾಯಿ ಲತಾ ದಿವಾಕರ ಮುಂಡಾಜೆ ಉಪಸ್ಥಿತರಿದ್ದರು.
ಹರ್ಷಿತಾ ಬಾಲಸುಬ್ರಹ್ಮಣ್ಯ ಹಾಗೂ ಶ್ರೀದೇವಿ ಪ್ರಾರ್ಥಿಸಿದರು. ಪ್ರಿಯ ಕಲ್ಲೇಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅರುಣ್ ಮಿತ್ತಮಜಲು ಹಾಗೂ ಋತು ಎಲ್ಲಪಡ್ಕ ಕಾರ್ಯಕ್ರಮ ನಿರೂಪಿಸಿ ಅರುಣ್ ಮಿತ್ತಮಜಲು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಸನ್ಮಾನಿತರ ಕುಟುಂಬಸ್ಥರು, ಊರಿನ ಗಣ್ಯರು, ಗ್ರಾಮಸ್ಥರು ಹಾಗೂ ಸಚಿನ್ ಕ್ರೀಡಾ ಸಂಘದ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading