ಕಾಯರ್ತೋಡಿ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ|ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತರಲು ಪ್ರಯತ್ನ: ಭಾಗೀರಥಿ ಮುರುಳ್ಯ

ಸುಳ್ಯ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಲಾಗುವುದು ಎಂದು ಸುಳ್ಯದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಅವರು ಹೇಳಿದರು.
ಶಾಸಕರ ಅನುದಾನದ 20 ಲಕ್ಷ ರೂ. ಹಾಗೂ ಸ್ಥಳೀಯ ನಗರ ಪಂಚಾಯತ್ನ ನಿಕಟಪೂರ್ವ ಸದಸ್ಯೆ ಪ್ರವಿತಾ ಪ್ರಶಾಂತ್ ಅವರ 4 ಲಕ್ಷ ರೂ. ಸಹಾಯಧನದಲ್ಲಿ ನಿರ್ಮಿಸಲಾದ ಕಾಯರ್ತೋಡಿ ದೇವಸ್ಥಾನದ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

. . . . . . . . .

ಈ ಬಾರಿ ಸುಳ್ಯ ನಗರದ ನಾಲ್ಕು ರಸ್ತೆಗಳಿಗೆ ತಲಾ 20 ಲಕ್ಷ ರೂ.ಗಳಂತೆ ಒಟ್ಟು 80 ಲಕ್ಷ ರೂ. ಅನುದಾನ ನೀಡಲಾಗಿದೆ. ಇದನ್ನು ಸೇರಿಸಿ ನಗರಕ್ಕೆ ಇದುವರೆಗೆ ಸುಮಾರು 2.25 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ನಗರ ಪಂಚಾಯತ್ ನಿಕಟಪೂರ್ವ ಸದಸ್ಯ ಪವಿತ್ರ ಪ್ರಶಾಂತ್, ಮಾಜಿ ಅಧ್ಯಕ್ಷ ಎನ್.ಏ. ರಾಮಚಂದ್ರ, ಕಾಯರ್ತೋಡಿ ದೇವಸ್ಥಾನದ ನಿಕಟಪೂರ್ವ ಆಡಳಿತ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣ ಕಾಮತ್, ರಸ್ತೆಗೆ ಈ ಹಿಂದೆ ಸ್ಥಳ ದಾನ ಮಾಡಿದ ದೆಂಗೋಡಿ ಕುಟುಂಬಸ್ಥರು ಮತ್ತು ಅಳಿಕೆ ಮಜಲು ಕುಟುಂಬಸ್ಥರು, ಕಾಯರ್ತೋಡಿ ದೇವಸ್ಥಾನದ ಈಗಿನ ಆಡಳಿತ ಸಮಿತಿ ಸದಸ್ಯರು, ಚಂದ್ರಶೇಖರ ಅಡ್ಪಂಗಾಯ, ಡಿ.ಎಸ್. ಗೋಪಾಲ್, ನಾರಾಯಣ ಶಾಂತಿನಗರ, ರಂಜಿತ್ ನೆಡ್ಚಿಲ್, ಸುನಿಲ್ ಕೇರ್ಪಳ, ಚಿದಾನಂದ ಕಾಯರ್ತೋಡಿ, ವಿಠಲ ಸರ್ವೆಯರ್, ಕಿಶೋರ್ ಕಾಯರ್ತೋಡಿ, ವಿಜಯ ದೆಂಗೋಡಿ, ಸಚಿನ್ ದೇಂಗೋಡಿ, ಸೀನಪ್ಪ ಪಡ್ರೆ, ಬಾಲರಾಜ್ ದೇಂಗೋಡಿ, ಕೃಷ್ಣ ಬೆಟ್ಟ, ಜಿನ್ನಪ್ಪ ಪೂಜಾರಿ ಹಾಗೂ ಊರವರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು.
ನವೀನ್ ಕೆದ್ಪಾಜೆ ಸ್ವಾಗತಿಸಿ, ದೇವಿ ಪ್ರಸಾದ್ ವಂದಿಸಿ, ಕುಸುಮಾಧರ ಏ ಟಿ ಕಾರ್ಯಕ್ರಮ ನಿರೂಪಿಸಿದರು.

. . . . . . .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading