ಬೆಳ್ಳಾರೆ: ಪಾಠಾಜೆಯಲ್ಲಿ ಮಕ್ಕಳಿಗೆ ಸಮವಸ್ತ್ರ ಮತ್ತು ಪುಸ್ತಕ ವಿತರಣೆ

ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ಗರಡಿಯ ವತಿಯಿಂದ ಪಾಠಾಜೆ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪುಸ್ತಕವನ್ನು ವಿತರಿಸಲಾಯಿತು.

. . . . . . . . .

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ. ಭಟ್ ಕುರುಂಬುಡೇಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಂತರ ಅತಿಥಿಗಳು ಪಾಠಾಜೆಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.
ದಿಲೀಪ್ ಗಟ್ಟಿಗಾರು, ಪ್ರಕಾಶ್ ದಾಸನಮಜಲು ಶುಭಹಾರೈಸಿದರು. ಪಾಠಾಜೆ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಅಂಗನವಾಡಿ ಶಿಕ್ಷಕಿ ವಾರಿಜ ಕೆ. ಪ್ರಾಸ್ತಾವಿಕ ಮಾತನ್ನಾಡಿದರು. ಮುಖ್ಯ ಶಿಕ್ಷಕಿ ಪಾರ್ವತಿ ಸಭಾಧ್ಯಕ್ಷತೆ ವಹಿಸಿದ ಶುಭಹಾರೈಸಿದರು.
ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಪ್ರಧಾನ ಅರ್ಚಕ ಚೋಮ ಪಾಠಾಜೆ, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಹೇಮಾವತಿ, ಶಾಲಾ ಅಡುಗೆ ಸಿಬ್ಬಂದಿ ಮುಮ್ತಾಝ್, ಗಾಯತ್ರಿ, ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಗರಡಿಯ ಖಜಾಂಜಿ ಸಂಜೀವ ಕಲಾಯಿ, ಸಮಿತಿ ಸದಸ್ಯ ವಸಂತ ಬೂಡು, ಭವಿತ್ ಬೂಡು, ಪಾಠಾಜೆ ಅಂಗನವಾಡಿ ಹಾಗೂ ಶಾಲಾ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಸಿ, ವಿಜಯ ಪಾಠಾಜೆ ಸ್ವಾಗತಿಸಿ, ವಂದಿಸಿದರು. ಚೈತ್ರ ಪುಡ್ಕಜೆ ಕಾರ್ಯಕ್ರಮ ನಿರೂಪಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading