ಎಸ್ ಡಿ ಪಿ ಐ ಸುಳ್ಯ ಅಸೆಂಬ್ಲಿ ಪ್ರತಿನಿಧಿ ಸಭೆ – ಸುಳ್ಯ ಕ್ಷೇತ್ರಾಧ್ಯಕ್ಷರಾಗಿ ಮಿರಾಝ್ ಸುಳ್ಯ ಪುನರಾಯ್ಕೆ

. . . . . . . . .

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ (SDPI) ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಧ್ಯಂತರ ಪ್ರತಿನಿಧಿ ಸಭೆಯು ಸುಳ್ಯದ ಪಿ ಆರ್ ಗೇಟ್ ಹಾಲ್ ನಲ್ಲಿ ಕ್ಷೇತ್ರಾಧ್ಯಕ್ಷರಾದ ಮಿರಾಝ್ ಸುಳ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.

. . . . . . .

ಕ್ಷೇತ್ರಾಧ್ಯಕ್ಷರಾದ ಮಿರಾಝ್ ಸುಳ್ಯರವರು ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರುರವರು ಸಮಕಾಲೀನ ರಾಜಕೀಯ ಪರಿಸ್ಥಿತಿ, ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆ ಹಾಗೂ ಜನಪರ ಹೋರಾಟಗಳ ಅಗತ್ಯತೆಯ ಕುರಿತು ವಿವರಿಸಿದರು.

SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಸದಸ್ಯರಾದ ಅಬ್ದುಲ್ ಕಲಾಂ ಸುಳ್ಯರವರು ಮಾತನಾಡಿ, ಪ್ರಸಕ್ತ ಸುಳ್ಯದ ರಾಜಕೀಯದ ವಿಶ್ಲೇಷಣೆ ಮಾಡಿ, ಪಕ್ಷದ ಅಗತ್ಯತೆ ಸಮಾಜಕ್ಕೆ ಯಾವ ರೀತಿಯಲ್ಲಿ ಅಗತ್ಯತೆ ಇದೆ ಎಂಬುದನ್ನು ವಿವರಿಸಿದರು.

SDPI ಸುಳ್ಯ ಕ್ಷೇತ್ರ ಕಾರ್ಯದರ್ಶಿ ರಫೀಕ್ ಎಂ.ಎಸ್ ಹಾಗೂ ಸಮಿತಿ ಸದಸ್ಯರಾದ ಸುಹೈಲ್ ಸುಳ್ಯ ರವರು ಮಧ್ಯಂತರ ಅವಧಿಯ ವರದಿಗಳನ್ನು ಮಂಡಿಸಿದರು.

SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ರವರು “ಪರಿಣಾಮಕಾರಿ ಆಡಳಿತಾತ್ಮಕ ನಿರ್ವಹಣೆ” ಎಂಬ ವಿಷಯದಲ್ಲಿ ವಿಶೇಷ ನಾಯಕತ್ವ ತರಬೇತಿಯನ್ನು ನೀಡಿದರು.

ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷರಾಗಿ ಮಿರಾಝ್ ಸುಳ್ಯ ಪುನರಾಯ್ಕೆಯಾಗಿದ್ದು, ಉಪಾಧ್ಯಕ್ಷರುಗಳಾಗಿ ಬಾಬು ಎನ್. ಸವಣೂರು ಹಾಗೂ ನ್ಯಾಯವಾದಿ ಅಬ್ದುಲ್ ರಶೀದ್ ಸುಳ್ಯ, ಕಾರ್ಯದರ್ಶಿಯಾಗಿ ಆರಿಫ್ ಅಂಕತಡ್ಕ, ಜತೆ ಕಾರ್ಯದರ್ಶಿಗಳಾಗಿ ಸಿದ್ದೀಕ್ ಕೋಡಿಯಮ್ಮೆ ಮತ್ತು ಶರೀಫ್ ನಿಂತ್ತಿಕಲ್, ಕೋಶಾಧಿಕಾರಿಯಾಗಿ ಅಬ್ದುಲ್ ರಹ್ಮಾನ್ ಬೆಳ್ಳಾರೆ ಆಯ್ಕೆಯಾಗಿದ್ದಾರೆ. ಅಬ್ದುಲ್ ರಝಕ್ ಕೆನರಾ, MS ರಫೀಕ್, ಕಲಂದರ್ ಅರಂಬೂರು ಮತ್ತು ಎ.ಎಸ್ ರಜಾಕ್ ಅಂಕತಡ್ಕ ಅವರನ್ನು ಕ್ಷೇತ್ರ ಸಮಿತಿ ಸದಸ್ಯರಾಗಿ ನೇಮಕ ಮಾಡಲಾಯಿತು.

SDPI ಮಂಗಳೂರು ಗ್ರಾಮಾಂತರ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿಯವರು ಸಮಾರೋಪ ಭಾಷಣ ಮಾಡಿದರು.

ಬೆಳ್ಳಾರೆ ಬ್ಲಾಕ್ ಸಮಿತಿ ಅಧ್ಯಕ್ಷರಾದ ರಫೀಕ್ ಎಂ ಎ ಸವಣೂರು ಹಾಗೂ ಅಸೆಂಬ್ಲಿ ಸಮಿತಿಯ ಕಾರ್ಯದರ್ಶಿ ಶರೀಫ್ ನಿಂತಿಕಲ್ ಕಾರ್ಯಕ್ರಮ ನಿರೂಪಿಸಿದರು.

ಸಭೆಯಲ್ಲಿ ಅಸೆಂಬ್ಲಿ ಸಮಿತಿ ಸದಸ್ಯರು, ಅಸೆಂಬ್ಲಿಯ ವಿವಿಧ ಬ್ಲಾಕ್ ಸಮಿತಿಯ ಪದಾಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading