“ಮಾನಸ ಮಹಿಳಾ ಮಂಡಲದ ಕಾರ‍್ಯಚಟುವಟಿಕೆ ಶ್ಲಾಘನೀಯ” : ಚಂದ್ರಾವತಿ ಬಡ್ಡಡ್ಕ

“ಮಾನಸ ಮಹಿಳಾ ಮಂಡಲ(ರಿ.) ಜಟ್ಟಿಪಳ್ಳವೂ ತನ್ನ ಇಪ್ಪತೈದು ವರ್ಷಗಳಿಂದಲೂ ಕ್ರಿಯಾಶೀಲವಾಗಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಮಹಿಳೆಯರ ಹಿಂದಿನ ಸ್ಥಿತಿಗೂ  ಪ್ರಸ್ತುತತೆಗೂ ತೀರಾ ಭಿನ್ನವಾಗಿ ಬೆಳೆದು ಬಂದಿದೆ” ಎಂದು ಮಾನಸ ಮಹಿಳಾ ಮಂಡಲ(ರಿ.)ದ ಬೆಳ್ಳಿಹಬ್ಬ  ಆಚರಣೆಯ ನೆನಪಿಗೆ ಹೊರತಂದ ಸ್ಮರಣಸಂಚಿಕೆ “ಮಾನಿನಿ-೨೦೨೫” ನ್ನು ಬಿಡುಗಡೆಗೊಳಿಸಿ, ಸಾಹಿತಿ-ಬರಹಗಾರರಾದ ಅರೆಭಾಷೆ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಚಂದ್ರಾವತಿ ಬಡ್ಡಡ್ಕರವರು ಹೇಳಿದರು. ಜೂನ್ 07ರಂದು ಜಟ್ಟಿಪಳ್ಳ ಯುವಸದನದಲ್ಲಿ ನಡೆದ ಮಹಿಳಾ ಮಂಡಲದ ವಿಶೇಷ ಸಭೆ ಮತ್ತು ಸ್ಮರಣಸಂಚಿಕೆ ಬಿಡುಗಡೆ ಹಾಗೂ ಕೃತಜ್ಞತೆ ಕಾರ್ಯಕ್ರಮವೂ ನಡೆಯಿತು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ಮಹಿಳಾ ಮಂಡಲ(ರಿ.)ದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿಯವರು ಬೆಳ್ಳಿಹಬ್ಬ ಕಾರ‍್ಯಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಮಂಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬೆಳ್ಳಿಹಬ್ಬ ಆಚರಣಾ ಸಮಿತಿಯ ಅಧ್ಯಕ್ಷೆ ಚಂದ್ರಾಕ್ಷಿ.ಜೆ ರೈ ಯವರು ಬೆಳ್ಳಿಹಬ್ಬ ಆಚರಣೆಯ ಆದಾಯವನ್ನು ಖರ್ಚುಗಳ ವಿವರ ನೀಡಿ ದಾನಿಗಳಾಗಿ ಸಹಕರಿಸಿದವರಿಗೆ ಧನ್ಯವಾದ ಸಲ್ಲಿಸಿದರು. ಮಹಿಳಾ ಮಂಡಲದ ಎಲ್ಲಾ ಸದಸ್ಯರಿಗೆ ಸ್ಮರಣಸಂಚಿಕೆ ಮತ್ತು ಸದಸ್ಯರಿಗೆ ತಂಡದ ಭಾವಚಿತ್ರವನ್ನು ನೀಡಲಾಯಿತು. ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಸರೋಜಿನಿ ಪೆಲ್ತಡ್ಕ, ಮಹಿಳಾ ಮಂಡಲದ ಗೌರವ ಸಲಹೆಗಾರರಾದ ರಮಾನಂದ ರೈ ಜಟ್ಟಿಪಳ್ಳ, ದಿನೇಶ್ ಮಡಪ್ಪಾಡಿ, ರಘುನಾಥ ಜಟ್ಟಿಪಳ್ಳ, ಸಂತೋಷ್ ಕುಮಾರ್ ರೈ ಜಟ್ಟಿಪಳ್ಳ, ಶ್ರೀರಾಮ ಭಜನಾ ¸ ಸೇವಾ ಸಮಿತಿಯ ಅಧ್ಯಕ್ಷರಾದ ಹರಿಶ್ಚಂದ್ರ ಎ.ಆರ್. ರವರುಗಳು ಭಾಗವಹಿಸಿದ್ದರು. ನೆಹರು ಯುವ ಕೇಂದ್ರದಿಂದ ಮಹಿಳಾ ಮಂಡಲಕ್ಕೆ ನೀಡಿದ ಕ್ರೀಡಾಕಿಟ್‌ನ್ನು ಸದಸ್ಯರಿಗೆ ವಿತರಿಸಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಮಾಧವ ಗೌಡ ಮಡಪ್ಪಾಡಿ, ಶುಭಕರ ಆಳ್ವ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಮಹಿಳಾ ಮಂಡಲಕ್ಕೆ 2026-27ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಸವಿತ, ಸತೀಶ್ ಕಾನತ್ತಿಲ, ಕಾರ್ಯದರ್ಶಿ ಶ್ರೀಮತಿ ಸಂಧ್ಯಾ ಜೆ, ಕೋಶಾಧಿಕಾರಿಯಾಗಿ ಶ್ರೀಮತಿ ಸೌಮ್ಯ ಮಹೇಶ್ ರವರುಗಳನ್ನು ಸರ್ವಾನುತದಿಂದ ಆಯ್ಕೆ ಮಾಡಲಾಯಿತು. 
ಶ್ರೀಮತಿ ಸುನೀತ ರಾಮಚಂದ್ರ ಸ್ವಾಗತಿಸಿ, ಶ್ರೀಮತಿ ಸವಿತ ಆಚಾರ್ಯ, ಶ್ರೀಮತಿ ರಂಜನಿ ಸಂಜೀವ ಪ್ರಾರ್ಥಿಸಿ, ಶ್ರೀಮತಿ ವಿಜಯ ಪಾಲಾಕ್ಷ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading