ಸುಬ್ರಹ್ಮಣ್ಯ : ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣಾ ಕಾರ್ಯಕ್ರಮ

ಸುಬ್ರಹ್ಮಣ್ಯ ಜೂನ್ 09 : ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್, ರೋಟರಿ ಕ್ಲಬ್ ಸುಬ್ರಹ್ಮಣ್ಯ ಹಾಗೂ ಟೀಂ ಈಶ್ವರ್ ಮಲ್ಪೆ ಇವರುಗಳ ಸಹಯೋಗದೊಂದಿಗೆ ಜೂ.09 ರಂದು ಶ್ರೀಮಠದ ಆವರಣದಲ್ಲಿ ಉಚಿತ ಕಿವಿಯ ಶ್ರವಣ ತಪಾಸಣಾ ಶಿಬಿರ ಹಾಗೂ ಶ್ರವಣ ಯಂತ್ರಕ್ಕೆ ಸಹಾಯಧನ ಹಾಗೂ ವಿತರಣೆ ಕಾರ್ಯಕ್ರಮ ನಡೆಯಿತು.
ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತ ಅಧಿಕಾರಿಗಳಾದ ಸುದರ್ಶನ ಜೋಯಿಸ್ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ “ಕಣ್ಣು ಕಿವಿ, ಗಂಟಲು ಇದು ಮನುಷ್ಯನ ದೇಹದ ಅಂಗಗಳಲ್ಲಿ ಬಹಳ ಪ್ರಾಮುಖ್ಯವಾದದ್ದು. ಕಿವಿ ಕೇಳದಿದ್ದಲ್ಲಿ ಅನುಭವಿಸುವ ತೊಂದರೆ ಅದರ ನೋವು ಹೇಳತಿರದು. ಆದ್ದರಿಂದ ಕಿವಿಯ ಸುರಕ್ಷತೆ ಬಗ್ಗೆ ಹಾಗೂ ಅದರ ತಪಾಸಣೆ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ” ಎಂದರು.
ಟೀಮ್ ಈಶ್ವರ್ ಮಲ್ಪೆ ಇದರ ಸಂಚಾಲಕರಾದ ಲವ ಬಂಗೇರ ಅವರು ಶಿಬಿರದ ಉದ್ದೇಶ ಹಾಗೂ ಸಹಾಯಧನ ಯಂತ್ರದ ಬಗ್ಗೆ ಮಾಹಿತಿ ನೀಡಿದರು. ಶಿಬಿರದ ವೈದ್ಯಾಧಿಕಾರಿ ಡಾ. ಪವನ್ ಅವರು ಕಿವಿ ಶ್ರವಣದ ತೊಂದರೆ ಅದರ ಸುರಕ್ಷತೆ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ನಿಯೋಜಿತ ಅಧ್ಯಕ್ಷರಾದ ರೋಹಿತ್ ಬಿ.ಬಿ ಉಪಸ್ಥಿತರಿದ್ದರು. 
ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷರಾದ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷರು ಹಾಗೂ ಶಿಬಿರದ ಸಂಚಾಲಕರಾದ ಲೋಕೇಶ್ ಬಿ.ಎನ್, ಗೋಪಾಲ ಎಣ್ಣೆಮಜಲು, ಡಾ. ರವಿ ಕಕ್ಕೆಪದವು, ಚಂದ್ರಶೇಖರ ನಾಯರ್, ಶ್ರೀಮಠದ ಮೇಲ್ವಿಚಾರಕರಾದ ರವೀಂದ್ರ ಭಟ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ನ ಶಿವ ಭಟ್, ಸಂತೋಷ್ ನೂಚಿಲ ಹಾಗೂ ಪ್ರಕಾಶ ಸುಬ್ರಹ್ಮಣ್ಯ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಿವಿ ಶ್ರವಣ ತಪಾಸಣೆಗೈದ ಹಲವು ಮಂದಿಗೆ ಸಹಾಯಧನದ ಯಂತ್ರಗಳನ್ನು ವಿತರಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading