ಗಾಂಧಿನಗರ : “ವಿಶ್ವ ತಂಬಾಕು ವಿರೋಧಿ ದಿನಾಚರಣೆ”

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು ಸುಳ್ಯ ವಲಯದ ಗಾಂಧಿನಗರ ಕಾರ್ಯ ಕ್ಷೇತ್ರದ ಒಕ್ಕೂಟ ಸಭೆಯಲ್ಲಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಆಶ್ರಯದಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ” ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಸುಳ್ಯ ತಾಲೂಕಿನ ಅಧ್ಯಕ್ಷರಾದ ವೆಂಕಪ್ಪ ಗೌಡರವರು ನೆರವೇರಿಸಿ, ಮಾದಕ ವಸ್ತುವಿನಿಂದ ಆಗುವ ದುಷ್ಪರಿಣಾಮಗಳು ಮತ್ತು ಅದನ್ನು ನಾವು ಹೇಗೆ ತಡೆಗಟ್ಟಬಹುದು ಎಂಬುದನ್ನು ತಿಳಿಸಿದರು. “ಯುವ ಪೀಳಿಗೆಯು ಇದಕ್ಕೆ ಅತಿಯಾಗಿ ಬಲಿಯಾಗುವ ಕಾರಣ ನಿಮ್ಮ ಮನೆಯ ಪರಿಸರದಲ್ಲಿರುವ ಎಲ್ಲರಿಗೂ ಈ ಬಗ್ಗೆ ತಿಳಿಸಿ ಮಾದಕ ವಸ್ತುವಿನಿಂದ ಮುಕ್ತರಾಗೋಣ” ಎಂದು ತಿಳಿಸಿದರು.
ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸಂಜೀವಿನಿ ಕ್ಯಾನ್ಸರ್ ಸೆಂಟರಿನ ಮೆಡಿಕಲ್ ಸೋಶಿಯಲ್ ವರ್ಕರ್ ಆಗಿರುವ ಹೇಮಂತ್ ಕುಮಾರ್ ರವರು ಪ್ರೊಜೆಕ್ಟರ್ ಮೂಲಕ “ತಂಬಾಕಿನಿಂದ ಬರುವ ಕಾಯಿಲೆಗಳ ಹಂತಗಳು ಮತ್ತು ತಂಬಾಕು ಸೇವನೆಯಿಂದ ಮುಕ್ತರಾಗಲು ನಾವೇನು ಮಾಡಬೇಕು ಯಾವ ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು” ಎಂದು ಸಂಕ್ಷಿಪ್ತವಾಗಿ ತಿಳಿಸಿದರು. ಇನ್ನೋರ್ವ ಅತಿಥಿಯಾದ MIO ಇದರ PRO ಆಗಿರುವ ರಾಘವೇಂದ್ರ ರವರು ಸ್ವತಃ ತಮ್ಮ ಅನುಭವಗಳನ್ನು ಹಂಚಿಕೊಂಡರು, “ಕ್ಯಾನ್ಸರ್ ಕಾಯಿಲೆ ಬಂದಾಗ ಯಾವುದೇ ರೀತಿಯಲ್ಲಿ ಹೆದರ ಬೇಕಿಲ್ಲ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ಬೇಕಾದ ಚಿಕಿತ್ಸೆ ಮಾಡಿಕೊಳ್ಳಬಹುದು” ಎಂದು ತಿಳಿಸಿದರು, ಸುಳ್ಯ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಿಜಯಕುಮಾರ್ ರವರು “ದುಶ್ಚಟದಿಂದ ಆಗುವ ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಕ್ರಮಗಳು ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಾತ್ರ ಸಿಗುವುದು” ಎಂದು ತಿಳಿಸಿದರು, “ತಾನು ಕೂಡ ಸುಮಾರು ವರ್ಷಗಳಿಂದ ಮಾದಕ ವಸ್ತುಗಳಿಂದ ದೂರ ಇದ್ದೇನೆ” ಎಂದು ಅನಿಸಿಕೆ ವ್ಯಕ್ತಪಡಿಸಿದ್ದರು, ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಮನೋಹರ್ ರವರು “ನಮ್ಮ ಸಮಾಜದಲ್ಲಿ ಮಾದಕ ವಸ್ತುಗಳು ಬ್ಯಾನ್ ಆಗಬೇಕು ಮತ್ತು ಮಾದಕ ವಸ್ತು ಮಾರಾಟವನ್ನು ವಿರೋಧಿಸಲು ನಾವು ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು” ಎಂದು ತಿಳಿಸಿದರು, “ಮಾದಕ ವಸ್ತುಗಳು ಮಾರಾಟವಾಗುವುದು ನಿಷೇಧವಾದಲ್ಲಿ ಮಾರಕ ರೋಗಗಳನ್ನು ತಡೆಗಟ್ಟಬಹುದು” ಎಂದು ಅನಿಸಿಕೆ ವ್ಯಕ್ತಪಡಿಸಿದರು, 
ಈ ಕಾರ್ಯಕ್ರಮದಲ್ಲಿ ಸುಳ್ಯ ಭಜನಾ ಪರಿಷತ್‌ನ ಉಪಾಧ್ಯಕ್ಷರಾದ ಮೋಹನ್ ರವರು ಉಪಸ್ಥಿತರಿದ್ದರು, ವಲಯ ಮೇಲ್ವಿಚಾರಕರಾದ ಶ್ರೀ ದಿನೇಶ್.ಡಿ ರವರು ಎಲ್ಲರನ್ನು ಸ್ವಾಗತಿಸಿದರು, ಒಕ್ಕೂಟದ ಕಾರ್ಯದರ್ಶಿ ಅನಿತಾ ರವರು ಧನ್ಯವಾದ ಸಮರ್ಪಿಸಿದರು, ಸೇವಾ ಪ್ರತಿನಿಧಿ ಸೌಜನ್ಯರವರು ಕಾರ್ಯಕ್ರಮ ನಿರೂಪಿಸಿದರು, ಕಾರ್ಯಕ್ರಮಕ್ಕೆ ಭಾಗವಹಿಸಿದ ಎಲ್ಲಾ ಸಂಘದ ಸರ್ವ ಸದಸ್ಯರಿಗೂ ಸಿಹಿ ತಿಂಡಿ ವಿತರಿಸಿ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading