Ad Widget

ಕವನ : ಎಲುಬಿಲ್ಲದ ನಾಲಿಗೆ – ✍️ಉಲ್ಲಾಸ್ ಕಜ್ಜೋಡಿ

ಮಾತಿನಿಂದಲೇ ಗೆಲ್ಲಬಹುದು ಮನವ, ಆ ಮಾತಿನಿಂದಲೇ ಕೊಲ್ಲಬಹುದು ಮನವ…
ಮಾತಿನಿಂದಲೇ ತರಿಸಬಹುದು ನಗುವ, ಆ ಮಾತಿನಿಂದಲೇ ನೀಡಬಹುದು ನೋವ…
ಮಾತಿನಿಂದಲೇ ಉಳಿಸಬಹುದು ಸಂಬಂಧವ, ಆ ಮಾತಿನಿಂದಲೇ ಅಳಿಸಬಹುದು ಅನುಬಂಧವ…
ಮಾತಿನಿಂದಲೇ ಕಲಿಸಬಹುದು ಒಳ್ಳೆಯ ಗುಣವ, ಆ ಮಾತಿನಿಂದಲೇ ತುಂಬಬಹುದು ಇತರರ ಮನದಲ್ಲಿ ವಿಷವ…
ಎಲುಬಿಲ್ಲದ ನಾಲಿಗೆಯಿದು ನಮ್ಮಿಚ್ಛೆಯಂತೆ ಆಡುವುದು, ಒಳಿತು-ಕೆಡುಕು ನಮ್ಮಿಚ್ಛೆಯಲ್ಲೇ ಇರುವುದು, ನಾವಾಡಿಸಿದಂತೆ ನಮ್ಮ ನಾಲಿಗೆಯು ಆಡುವುದು, ಅಳಿವು-ಉಳಿವು ಎಲ್ಲವೂ ನಮ್ಮ ಮಾತಿನಲ್ಲೇ ಇರುವುದು…
ಅದಕ್ಕಾಗಿಯೇ ಹಿರಿಯರು ಹೇಳಿರುವುದು “ಅಳಿಸುವುದಿದ್ದರೆ ನಿನ್ನ ಮಾತಿನಿಂದ ನೀ ಇತರರ ಬದುಕಿನ ನೋವನ್ನು ಅಳಿಸು, ನೀಡುವುದಿದ್ದರೆ ನಿನ್ನ ಮಾತಿನಿಂದ ನೀ ಇತರರ ಬದುಕಿಗೆ ಖುಷಿಯನ್ನು ನೀಡು, ಕಲಿಸುವುದಿದ್ದರೆ ನಿನ್ನ ಮಾತಿನಿಂದ ನೀ ಇತರರಿಗೆ ಒಳ್ಳೆಯದನ್ನು ಕಲಿಸು, ಮಾತನಾಡುವುದಿದ್ದರೆ ನೀ ಕೆಡುಕನ್ನು ಬಿಟ್ಟು ಬರೀ ಒಳ್ಳೆಯ ಮಾತುಗಳನ್ನೇ ಆಡು, ಇಲ್ಲದಿದ್ದರೆ ನೀ ಮಾತನಾಡುವುದನ್ನೇ ಬಿಡು…”✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading