ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯಿಂದ ಪುತ್ತೂರಿನಲ್ಲಿ ಸ್ಥಾಪನೆಯಾಗುತ್ತಿರುವ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕ – 250 ಹುದ್ದೆಗಳಿಗೆ ಮಾ. 10ರಂದು ನೇರ ಸಂದರ್ಶನ

. . . . . . . . .

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯು ಪುತ್ತೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕ ಸ್ಥಾಪಿಸುತ್ತಿದ್ದು, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೃಷಿ ಅಭಿವೃದ್ಧಿ ನಿರ್ವಾಹಕರು ಬೇಕಾಗಿದ್ದಾರೆ. ಕೇಂದ್ರದ ಮಹಿಳಾ ಅಭ್ಯುದಯ ಯೋಜನೆಯಲ್ಲಿ ಕೇವಲ 250 ಹುದ್ದೆಗಳು ಮಂಜೂರಾಗಿದ್ದು ತಿಂಗಳಿಗೆ ರೂ. 25 ಸಾವಿರ ಗಳಿಸುವ ಅವಕಾಶವಿರುತ್ತದೆ. ಮಾ. 10ರಂದು ಬೆಳಗ್ಗೆ 9.30ರಿಂದ ಸಂಜೆ 5.30ರ ತನಕ ನೇರ ಸಂದರ್ಶನವಿರುತ್ತದೆ.

. . . . . . .

ಗ್ರಾಮಜನ್ಯ ರೈತ ಉತ್ಪಾದಕ ಕಂಪನಿಯು ಪುತ್ತೂರಿನಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕ ಸ್ಥಾಪಿಸುತ್ತಿದ್ದು, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೃಷಿ ಅಭಿವೃದ್ಧಿ ನಿರ್ವಾಹಕರು ಬೇಕಾಗಿದ್ದಾರೆ. ಕೇಂದ್ರದ ಮಹಿಳಾ ಅಭ್ಯುದಯ ಯೋಜನೆಯಲ್ಲಿ ಕೇವಲ 250 ಹುದ್ದೆಗಳು ಮಂಜೂರಾಗಿದ್ದು ತಿಂಗಳಿಗೆ ರೂ. 25 ಸಾವಿರ ಗಳಿಸುವ ಅವಕಾಶವಿರುತ್ತದೆ.

ಮಾ. 10ರಂದು ಬೆಳಗ್ಗೆ 9.30ರಿಂದ ಸಂಜೆ 5.30ರ ತನಕ ನೇರ ಸಂದರ್ಶನವಿರುತ್ತದೆ.

ಸಂದರ್ಶನಕ್ಕಾಗಿ ಆಸಕ್ತ ಅಭ್ಯರ್ಥಿಗಳು

Gramajanya Farmers Producer Company Ltd. ಹೆಸರಿನಲ್ಲಿ ರೂ. 250/- ರ ಡಿಮಾಂಡ್‌ ಡ್ರಾಫ್ಟ್ ಹಾಗೂ ಬಯೋಡೇಟಾದ ಜೊತೆಗೆ ಕಾರ್ಪೊರೇಟ್ ಕಚೇರಿ, ರೋಟರಿ ಬ್ಲಡ್ ಬ್ಯಾಂಕ್ ಬಳಿ, ರಾಧಾ ಕೃಷ್ಣ ಬಿಲ್ಡಿಂಗ್, ಪುತ್ತೂರು, ದ.ಕ.574202 ಈ ವಿಳಾಸಕ್ಕೆ ಖುದ್ದಾಗಿ ಹಾಜರಾಗಲು ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಲೀ +91 82514 5043 +91 63601 66490, info@gramajanyafarm.in ಸಂಪರ್ಕಿಸಬಹುದು.

2013ರ ಕಂಪನಿ ಆಕ್ಟ್ ಪ್ರಕಾರ ನೋಂದಣಿಗೊಂಡಿರುವ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯು 2020ರಲ್ಲಿ ಆರಂಭಗೊಂಡಿತ್ತು. ರಾಷ್ಟ್ರೀಯ ಜೇನು ಮಂಡಳಿಯ ಅಧಿಕೃತ ಸದಸ್ಯತ್ವ ಪಡೆದಿದ್ದು. ರಾಷ್ಟ್ರೀಯ ಜೇನು ಮಂಡಳಿ (NBB) ಹಾಗೂ ಸಣ್ಣ ಕೃಷಿಕರ ವ್ಯಾಪಾರ ಒಕ್ಕೂಟ (SFAC) ವತಿಯಿಂದ ಜೇನು ಕೃಷಿಯ ಅಧಿಕೃತ ಮಾನ್ಯತೆ ಪಡೆದ ದಕ್ಷಿಣ ಭಾರತದ ಪ್ರಥಮ ಸಂಸ್ಥೆಯಾಗಿದೆ. ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ ಪರಿಕಲ್ಪನೆಯಲ್ಲಿ ಹುಟ್ಟಿದ ಈ ಸಂಸ್ಥೆಯು ಗುತ್ತಿಗೆ ಆಧಾರದಲ್ಲಿ ಜೇನುಕೃಷಿಯನ್ನು ಗ್ರಾಮೀಣ ಪ್ರದೇಶದಲ್ಲಿ ಮಾಡಿ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ತುಂಬುವ ಕಾರ್ಯ ಮಾಡುತ್ತಿದೆ

ಜೇನು ಮತ್ತು ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಎಂಬಲ್ಲಿ ದಕ್ಷಿಣ ಭಾರತದ ಅತೀ ದೊಡ್ಡ ಜೇನು ಸಂಸ್ಕರಣಾ ಘಟಕವನ್ನು ಈ ಸಂಸ್ಥೆಯು ನಿರ್ಮಿಸುತ್ತಿದೆ. ಇದರ ಒಟ್ಟು ವೆಚ್ಚ 5 ಕೋಟಿ ರೂಪಾಯಿ. ಇದರಲ್ಲಿ 2.22 ಕೋಟಿ ರೂಪಾಯಿ ಕೇಂದ್ರ ಸರಕಾರದ ಅನುದಾನವಿದೆ. ಈ ಘಟಕದಿಂದ ಜೇನು ಮತ್ತು ಹಲಸು ಕೃಷಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ.

ಪ್ರತಿದಿನ 15 ಟನ್‌ ಜೇನುಗಳ ಸಂಸ್ಕರಣೆ ಜೊತೆಗೆ ಸುಮಾರು 30 ಟನ್ ಜೇನು ಸಂಗ್ರಹಿಸುವ ಶೀತಲೀಕರಣ ವ್ಯವಸ್ಥೆಯೂ ಇಲ್ಲಿರಲಿದೆ. ಜೇನಿನ ಮೌಲ್ಯವರ್ಧನೆ ದೃಷ್ಟಿಯಲ್ಲಿ ಜೇನು ಮೇಣದ ಕ್ರೀಮ್, ಕ್ಯಾಂಡಲ್, ನೋವು ನಿವಾರಕ ಬಾಮ್ ಸೇರಿ 20 ಕ್ಕೂ ಮಿಕ್ಕಿ ಉತ್ಪನ್ನಗಳ ಪ್ರಯೋಗ ಮತ್ತು ಅಭಿವೃದ್ಧಿಪಡಿಸಿರುವ ಗ್ರಾಮಜನ್ಯ ಸಂಸ್ಥೆಯು ಈ ಘಟಕದ ಮೂಲಕ ಇನ್ನಷ್ಟು ಕೃಷಿಕರನ್ನು ತಲುಪುವ ಪ್ರಯತ್ನದಲ್ಲಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading