ಸುಳ್ಯ : ಮಕ್ಕಳೇ ರಚಿಸಿದ ಗಣಪನಿಗೆ ಮಕ್ಕಳಿಂದಲೇ ಆರಾಧನೆ – ಮಕ್ಕಳ ಸಂಭ್ರಮ ಹೇಗಿತ್ತು ನೋಡಿ

ರಾಜೇಶ್ ಶೆಟ್ಟಿ ಮೇನಾಲ ಅವರ ಮನೆಯಲ್ಲಿ ಸಂಭ್ರಮದ ಗಣೇಶ ಚೌತಿ ನಡೆಯಿತು. ವಿಶೇಷತೆ ಏನಂದರೇ ಮಕ್ಕಳೇ ತಯಾರಿಸಿದ ಮಣ್ಣಿನ ಗಣಪ, ಅವಲಕ್ಕಿ ಪ್ರಸಾದ, ದೀಪ, ದೂಪದ ಆರತಿ ಎಲ್ಲಾ ನೇತೃತ್ವ ಮಕ್ಕಳದ್ದೇ. ಇದಕ್ಕಾಗಿ ಒಂದು ವಾರದ ತಯಾರಿ ಮಣ್ಣು ತಂದು ಹದಗೊಳಿಸಿ ಗಣಪತಿ ಮೂರ್ತಿ ತಯಾರಿಸಿ, ಅದನ್ನು ನೆರಳಲ್ಲಿ ಒಣಗಿಸಿ ಜೆಲ್ ಪೆನ್ನಿಂದ ಕಣ್ಣು ಬಿಡಿಸಿ ವೈಟ್ನೆರ್ನಿಂದ ಸಣ್ಣಕ್ಕೆ ಮೂರು ಗೆರೆ ಬಿಟ್ಟರೆ ಬೇರೆ ಯಾವುದೇ ಕೆಮಿಕಲ್ ಉಪಯೋಗಿಸದೆ ತಯಾರಿಸಿದ ಪರಿಸರ ಸ್ತೇಹಿ ಗಣಪ. ಮುಂಜಾನೆ ಎದ್ದು ಸ್ನಾನ ಮುಗಿಸಿ ಹೂ, ತುಳಸಿ ಗರಿಕೆ, ಕಾಯಿ ತಂದು,ತಾವು ತಯಾರಿಸಿದ ಗಣಪನನ್ನು ಪ್ರತಿಷ್ಠಾಪಿಸಿ ಅಲಂಕಾರ ಮಾಡಿ ಗಣಪತಿಗೆ ಪಂಚಕಜ್ಜಾಯ ತಯಾರಿಸಿ ಗಣಪತಿ ಮುಂದೆ ಪ್ರಸಾದ ಸಮರ್ಪಣೆ ಮಾಡಿ, ಕರ್ಪೂರ ಆರತಿ ಬಳಿಕ ಮೆರವಣಿಗೆ ತೆರಳಿ ಗೋವಿಂದ ನಾಮದೊಂದಿಗೆ ಪಕ್ಕದ ತೋಡಿನಲ್ಲಿ ಜಲ ವಿಸರ್ಜನೆ ಮಾಡುವಲ್ಲಿಗೆ ಸಂಭ್ರಮದ ಗಣಪತಿ ಹಬ್ಬ ತೆರೆ ಕಂಡಿತು.

. . . . . . . . .

. . . . . . .

ಈ ಬಗ್ಗೆ ಅಮರ ಸುದ್ದಿ ಜತೆ ಮಾತನಾಡಿದ ರಾಜೇಶ್ ಮೇನಾಲ ಮಕ್ಕಳಾಟಿಗೆಯ ಇಂತ ಆಚರಣೆಗಳು ಆಟಗಳು ಚೇಷ್ಟೆಗಳು ಮುಂದೆ ಪ್ರೌಢವಸ್ಥೆಗೆ ಬಂದಾಗ ಸವಿ ನೆನಪಾಗುತ್ತದೆ. ಇಲ್ಲವಾದರೆ ಮುಂದೆ ಮೊಬೈಲ್ ಗೇಮ್ಸ್, ಕಂಪ್ಯೂಟರ್, ಪುಸ್ತಕದ ಬದನೇಕಾಯಿ ಬಿಟ್ಟರೆ ಬೇರೆ ಏನು ಸವಿ ನೆನಪು ಇಲ್ಲಾನಮ್ಮ ಮಕ್ಕಳನ್ನು ಬಾಲ್ಯವನ್ನು ನೆನಪಿಸಿಕೊಳ್ಳಲು ನಮಗೂ ನಮ್ಮ ಬಾಲ್ಯದ ಚಪ್ಪರ,ದೊಂಪ ಮದುವೆ, ಅಂಗಡಿ, ಬೊತಾಕೋಲ, ಸೈಕಲ್ ಬ್ಯಾಲೆನ್ಸ್, ಜೋಕಾಲಿ, ಭಜನೆ,ಪ್ರಸಾದ ಇಂತ ಆಟಗಳು ಒಟ್ಟಾಗಿ ಸಂಭ್ರಮಿಸಿದ್ದು ನೆನಪಾಗುತ್ತದೆ ಅಲ್ಲವೇ ಎಂದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading