Ad Widget

ಕಿಡ್ನಿಯಲ್ಲಿರುವ ಕಲ್ಲನ್ನು  ಕರಗಿಸುವ ಬಾಳೆದಿಂಡಿನ ರಸ (ಜ್ಯೂಸ್)

ಕಲ್ಪವೃಕ್ಷ ಎಂದಾಕ್ಷಣ ತೆಂಗು ಎಂದು ನಮಗೆ ನೆನಪಿಗೆ ಬರುತ್ತದೆ ಆದರೆ ಇದೀಗ ಬಾಳೆಯು ಕಲ್ಪವೃಕ್ಷವೇ ಇದರ ಎಲ್ಲಾ ಭಾಗಗಳು ಉಪಯುಕ್ತವೇ ಬಾಳೆಗೊನೆ ಮೋತೆ ದಿಂಡು ಉತ್ತಮ ಔಷಧಿಯ ಗುಣಗಳನ್ನು ಹೊಂದಿದ್ದು  ಬಹಳ ಉಪಯುಕ್ತ ಪೇಟೆ ಪಟ್ಟಣಗಳಲ್ಲಿ ಇದೀಗ ಒಂದು ಅಡಿ ಉದ್ದದ ದಿಂಡಿಗೂ ಬಹಳ ಡಿಮಾಂಡ್  ಇದರಲ್ಲಿ ಚಟ್ನಿ, ಸಾಸಿವೆ, ಸಾಂಬಾರ್, ಪಲ್ಯಾ ದಿಂಡಿನ ಪಕೋಡ,...

ಜೋಡುಪಾಲ : ಪ್ರಪಾತಕ್ಕುರುಳಿದ ಲಾರಿ – ಚಾಲಕ ಅಪಾಯದಿಂದ ಪಾರು

ಎಮ್ಮೆಮಾಡಿನಿಂದ ಮಂಗಳೂರು ಕಡೆಗೆ ಜ್ಯೂಸ್ ಸಾಗಾಟ ಮಾಡುತ್ತಿದ್ದ ಲಾರಿ ಜೋಡುಪಾಲ ಬಳಿ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಘಟನೆ ಇಂದು ಮುಂಜಾನೆ ನಡೆದಿದೆ.  ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Ad Widget

ಸೋಣಂಗೇರಿ : ಹೆಸರು ಹೊಂದಾಣಿಕೆ ಇದ್ದರು ಮತ ಚಲಾಯಿಸಲು ನಿರಾಕರಣೆ – ರಾಜಕೀಯ ಪಕ್ಷಗಳ ಏಜೆಂಟರುಗಳಿಂದ ಸೆಕ್ಟರ್ ಆಫೀಸರ್ ಗೆ ದೂರು

ಸೋಣಂಗೇರಿ ಮತಗಟ್ಟೆಯಲ್ಲಿ ಮಹಿಳೆಯೋರ್ವರ ಆಧಾರ್ ಮತ್ತು ಚುನಾವಣಾ ಗುರುತಿನಲ್ಲಿ ಜೆರಾಕ್ಸ್ ಇದ್ದರೂ, ರಾಜಕೀಯ ಪಕ್ಷಗಳ ಏಜೆಂಟರಿಗೂ ವ್ಯಕ್ತಿ ಇವರೇ ಎಂದು ಖಚಿತ ಪಡಿಸಿದ್ದರು ಪೋಲಿಂಗ್ ಆಫೀಸ್ ಮಾತ್ರ ಮತಚಲಾವಣೆ ಮಾಡಲು ಅವಕಾಶ ನೀಡದ ಘಟನೆ ವರದಿಯಾಗಿದೆ. ಮತದಾನದಿಂದ ವಂಚಿತರಾಗಿ ಮಹಿಳೆ ತೆರಳಿದ್ದು ಈ ರೀತಿಯಲ್ಲಿ ಹಕ್ಕನ್ನು ಕಸಿದುಕೊಳ್ಳುವುದು ಯಾವ ನ್ಯಾಯ ಎಂದು ಏಜೆಂಟರು ಬೇಸರ ವ್ಯಕ್ತಪಡಿಸಿದ್ದಾರೆ....

ಸಖಿ ಮತಗಟ್ಟೆಯಲ್ಲಿ ಸುಡುಬಿಸಿಲಿಗೆ ಖಾಲಿ ಖಾಲಿ

ಸುಳ್ಯ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 155 ಸಖಿ ಮತಗಟ್ಟೆಯಾಗಿದ್ದು ಮುಂಜಾನೆ ಬಿರುಸಿನಿಂದ ಮತದಾನ ನಡೆದಿದ್ದು ಇದೀಗ ಮಧ್ಯಾಹ್ನದ ಸಂದರ್ಭದಲ್ಲಿ ಮತಗಟ್ಟೆಯು ಖಾಲಿ ಖಾಲಿಯಾಗಿದೆ . ಸುಮಾರು ನಿಮಿಷಗಳಿಗೆ ಒಂದರಂತೆ ಮತಗಳು ಇದೀಗ ಚಲಾವಣೆ ಆಗುತ್ತಿದ್ದು ಸಂಜೆಯ ವೇಳೆಗೆ ಮತ್ತೆ ಜನರ ಕ್ಯೂ ಹೆಚ್ಚಾಗಲಿದೆ . ಬಿರು ಬಿಸಿಲನ್ನು ಲೆಕ್ಕಿಸದೇ ಮತ ಕೇಂದ್ರದಲ್ಲಿ ನೆರೆದ ಕುಕ್ಕುಜಡ್ಕ...

ಬೊಳುಬೈಲು : ಚುನಾವಣಾ ಸಿಬ್ಬಂದಿಯಿಂದ ಪಕ್ಷದೊಂದರ ಪರ ಮತ ಹಾಕಲು ಸೂಚನೆ ಆರೋಪ – ದೂರು ದಾಖಲು – ಸಿಬ್ಬಂದಿಯನ್ನು ಹೊರಹಾಕಿದ ಪೋಲೀಸರು

ಬೊಳುಬೈಲು ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರತ ಸಂಜೀವಿನಿ ಒಕ್ಕೂಟದ ಸದಸ್ಯೆ ಹಾಗೂ ಸ್ಥಳೀಯ ಗ್ರಾ.ಪಂ. ಸದಸ್ಯರೊರ್ವರ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದು, ಸ್ಥಳಕ್ಕೆ ಪೊಲೀಸರು ಆಗಮಿಸಿ, ಸಂಜೀವಿನಿ ಒಕ್ಕೂಟದ ಮಹಿಳೆಯನ್ನು ಮತದಾನ ಕೇಂದ್ರದಿಂದ ಹೊರಗೆ ಕಳುಹಿಸಿದ ಘಟನೆ ನಡೆದಿದೆ. ಜಾಲ್ಸೂರು ಗ್ರಾಮ ಪಂಚಾಯತಿಯ ಶ್ರೀ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವೇದಾ ಶೆಟ್ಟಿ...

ನಡುಗಲ್ಲು : ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು

ನಡುಗಲ್ಲು ಮತಗಟ್ಟೆ ಬಳಿ ಸುಮಾರು ನೂರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಪರ ಮತಯಾಚನೆ ಮಾಡಿದರು.

ದೊಡ್ಡಡ್ಕ : ಕಾರು – ಬೈಕ್ ಡಿಕ್ಕಿ , ಬೈಕ್ ಸವಾರ ಮೃತ್ಯು

ಬೈಕು ಹಾಗೂ ಕಾರು ನಡುವೆ ಭೀಕರ ಅಪಘಾತ ನಡೆದು ಹಿಂಬದಿ ಬೈಕ್ ಸವಾರ ಮೃತಪಟ್ಟ ಘಟನೆ ಕಲ್ಲುಗುಂಡಿ ಸಮೀಪದ ದೊಡ್ಡಡ್ಕದಲ್ಲಿ  ಕಳೆದ ರಾತ್ರಿ ನಡೆದಿದೆ.ಮತಹಾಕಲು ಬೆಂಗಳೂರಿನಿಂದ ಅರಂತೋಡಿಗೆ ಬರುತ್ತಿದ್ದ ಯುವಕ ಮೃತ ಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕ್ ರೈಡ್ ಮಾಡುತ್ತಿದ್ದ ಯುವಕ ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ.

ಸುಳ್ಯ : ತಹಶೀಲ್ದಾರ್ ಗೆ ದೂರವಾಣಿ ಕರೆ ಮಾಡಿ ನಿಂದನೆ – ದೂರು ದಾಖಲು – ಕ್ಷಮೆಯಾಚನೆ ಬಳಿಕ ಪ್ರಕರಣ ಇತ್ಯರ್ಥ

ಸುಳ್ಯ ತಾಲೂಕು ದಂಡಾಧಿಕಾರಿಗಳಾದ ಜಿ ಮಂಜುನಾಥ್ ರವರಿಗೆ ಸಂಪಾಜೆ ಮೂಲದ ವ್ಯಕ್ತಿಯೋರ್ವರು ದೂರವಾಣಿ ಮೂಲಕ ಅವಾಚ್ಯಾ ಶಬ್ದಗಳಿಂದ ನಿಂದನೆ ಮಾಡಿ ಪೋಲಿಸ್ ಇಲಾಖೆಗೆ ದೂರು ನೀಡಿದ ಪ್ರಕರಣ ಠಾಣೆಯಲ್ಲೆ ಇತ್ಯರ್ಥವಾದ ಘಟನೆ ವರದಿಯಾಗಿದೆ. ಸಂಪಾಜೆ ಮೂಲದ ಧೀರಜ್ ಎಂಬುವ ವ್ಯಕ್ತಿಯವರು ತಮ್ಮ ಜಮೀನಿನ ಕುರಿತಾದ ವಿಚಾರದಲ್ಲಿ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳು...

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಡ್ಕಾರ್ ಬೂತ್ ಗೆ ಭೇಟಿ .

ಸುಳ್ಯ : ಅಡ್ಕಾರ್ ಬೂತ್ ಸಂಖ್ಯೆ ೧೮೫ ಕ್ಕೆ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ಭೇಟಿ ನೀಡಿ ಮತದಾರರನ್ನು ಮತ್ತು ಸಮಗ್ರವಾಗಿ ಚುನಾವಣೆ ನಡೆಯುತ್ತಿರುವ ಬಗ್ಗೆ ವೀಕ್ಷಣೆ ನಡೆಸಿದರು.

ನವ ಶಕ್ತಿ ನಾರಿಯರಿಂದ ಮತದಾನ

ಸುಳ್ಯ: ಪ್ರತಿ ಚುನಾವಣಾ ಬೂತ್ ಗಳಲ್ಲಿ ನವ ಶಕ್ತಿ ನಾರಿಯರು ಎಂಬ ಪರಿಕಲ್ಪನೆಯಡಿಯಲ್ಲಿ ಮತಚಲಾವಣೆ ಮಾಡಿದರು . ಶಾಸಕಿ ಕು.ಭಾಗೀರಥಿ ಮುರುಳ್ಯ ಮತ್ತು ತಂಡ. ಪುಸ್ಪಾ ಮೇದಪ್ಪ ಮತ್ತು ತಂಡ. ಸತ್ಯವತಿ ಬಸವನಪಾದೆ ಮತ್ತು ತಂಡ .
Loading posts...

All posts loaded

No more posts

error: Content is protected !!