ಲೋಕಸಭಾ ಚುನಾವಣೆಯ ಪ್ರಯುಕ್ತ ಕೊನೆಯ ದಿನವಾದ ಇಂದು ನಗರ ಬಿಜೆಪಿ ವತಿಯಿಂದ ಸುಳ್ಯದಲ್ಲಿ ಬೃಹತ್ ರೋಡ್ ಶೋ ಮೂಲಕ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಪರ ಮತಯಾಚನೆ ನಡೆಯಿತು.
ಸುಳ್ಯ ಜ್ಯೋತಿ ಸರ್ಕಲ್ ನಿಂದ ಆರಂಭಗೊಂಡು ಗಾಂಧಿನಗರದ ಪೆಟ್ರೋಲ್ ಪಂಪು ಬಳಿ ತನಕ ರೋಡ್ ಶೋ ಸಾಗಿತು. ಈ ಸಂದರ್ಭದಲ್ಲಿ ಅಂಗಡಿಗಳಿಗೆ ಮನವಿ ಪತ್ರ ನೀಡುತ್ತಾ ಮತ ಯಾಚನೆ ಮಾಡಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಉಳಿದೊಟ್ಟು, ಮಾಜಿ ಸಚಿವರಾದ ಎಸ್ ಅಂಗಾರ , ಶಾಸಕಿ ಕು.ಭಾಗೀರಥಿ ಮುರುಳ್ಯ ,ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಉಪಾಧ್ಯಕ್ಷ ರವಿಕುಮಾರ್ ಬುಡ್ಲೆಗುತ್ತು, ರಾಮಚಂದ್ರ ಬಳ್ಳಡ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಬಿಜೆಪಿ ಸುಳ್ಯ ಪ್ರಭಾರಿ ಪ್ರಮುಖರಾದ ಎ.ಟಿ. ಕುಸುಮಾಧರ, ಶಂಕರ ಪೆರಾಜೆ, ಜಯರಾಜ್ ಕುಕ್ಕೆಟ್ಟಿ, ಸುಭೋದ್ ಶೆಟ್ಟಿ, ಪಿ.ಕೆ.ಉಮೇಶ್, ವಿನಯ ಕುಮಾರ್ ಕಂದಡ್ಕ, ಚಂದ್ರಜಿತ್ ಮಾವಂಜಿ, ನಾರಾಯಣ ಎಂ.ಎಸ್., ಚೋಮ ನಾವೂರು, ಜಗದೀಶ್ ಡಿ.ಪಿ., ಪಿ.ಕೆ.ಉಮೇಶ್, ಗುಣವತಿ ಕೊಲ್ಲಂತಡ್ಕ, ಶಿಲ್ಪಾ ಸುದೇವ್, ಪ್ರವಿತಾ ಪ್ರಶಾಂತ್, ಚಂದ್ರಶೇಖರ ನಡುಮನೆ, ಬಾಲಗೋಪಾಲ ಸೇರ್ಕಜೆ, ಅಶೋಕ್ ಅಡ್ಕಾರ್, ಶೀನಪ್ಪ ಬಯಂಬು, ಬಾಲಕೃಷ್ಣ ಕೀಲಾಡಿ, ಧನಂಜಯ ನೆಲ್ಲೂರುಕೆಮ್ರಾಜೆ, ಕೇಶವ ಸಿ.ಎ., ಬುದ್ದ ನಾಯ್ಕ, ಜಿನ್ನಪ್ಪ ಪೂಜಾರಿ, ನವೀನ ಸಾರಕೆರೆ, ಹೇಮಂತ ಮಠ, ಹರೀಶ್ ಬೂಡುಪನ್ನೆ , ಚಂದ್ರಶೇಖರ ಸೇರಿದಂತೆ ನೂರಾರು ನಗರ ಬಿಜೆಪಿ ಮತ್ತು ಗ್ರಾಮ ಸಮಿತಿಯ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.