- Thursday
- November 21st, 2024
ಗುತ್ತಿಗಾರು ಗ್ರಾಮದ ವಳಲಂಬೆ ದಂಬೆಕೋಡಿ ನಿವಾಸಿ ರಾಘವ ಗೌಡರು ಅಲ್ಪಕಾಲದ ಅಸೌಖ್ಯದಿಂದ ಎ.22ರಂದು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಯಶೋಧಾ, ಪುತ್ರ ಜೀವನ್, ಪುತ್ರಿಯರಾದ ಪ್ರೀತಿಕಾ, ಜಶ್ಮಿ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ನಿನ್ನೆ ಬೀಸಿದ ಗಾಳಿಮಳೆಗೆ ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ತಲೆಪಳ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಅಪಾರ ಹಾನಿಯುಂಟಾದ ಘಟನೆ ನಡೆದಿದೆ. ಆನಂದ ನಾಯ್ಕರವರ ಮನೆಯಲ್ಲಿ ಮರ ಬೀಳುವ ಸಂದರ್ಭದಲ್ಲಿ ಯಾರು ಇಲ್ಲದೆ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತೆರಳಿದ ಆಲೆಟ್ಟಿ ಪಂಚಾಯತ್ ಸದಸ್ಯಸತ್ಯಕುಮಾರ್ ಆಡಿಂಜ ಹಾಗೂ ಸ್ಥಳೀಯರು ಸೇರಿ ಮರ ತೆರವುಗೊಳಿಸುವಲ್ಲಿ ಪ್ರಯತ್ನಿಸಿದರು.
ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಎ.12ರಂದು ಮಕ್ಕಳ ಬೇಸಿಗೆ ಶಿಬಿರವನ್ನು ಅಮರಮಡ್ನೂರು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪವಾಣಿ ಉದ್ಘಾಟಿಸಿದರು. ಎ. 22ವರೆಗೆ ಲತಾಮಧುಸೂದನ್ ರವರ ಮುಖೇನ ಶಿಬಿರವು ಸಂಪನ್ನಗೊಂಡಿತು.ಶಿಬಿರದಲ್ಲಿ ವಿವಿಧ ಚಟುವಟಿಕೆಗಳಾದ ಯೋಗ ,ಧ್ಯಾನ, ಕ್ರಾಪ್ಟ್ , ಕಸದಿಂದ ರಸ, ಹಸಿರು ಎಲೆಗಳಿಂದ ಚಿತ್ರಗಳ ರಚನೆ ವ್ಯಕ್ತಿತ್ವ ವಿಕಸನ ಇಂಗ್ಲಿಷ್ ಸ್ಪೋಕನ್ ಕ್ಲಾಸ್ ಸ್ಕಿಲ್ ಡೆವಲವ್...
ಸುಳ್ಯ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಎಂ ವೆಂಕಪ್ಪ ಗೌಡ ಹಾಗೂ ನಗರ ಪಂಚಾಯತ್ ಸದಸ್ಯರು, ನಗರ ಕಾಂಗ್ರೆಸ್ ಅಧ್ಯಕ್ಷರು, ಹಾಗೂ ನಗರದ ಪ್ರಮುಖರು ಸೇರಿ ಸುಳ್ಯ ನಗರದಲ್ಲಿ ಅಂಗಡಿ ಮುಂಗಟ್ಟುಗಳಿಗೆ ತೆರಳಿ ಮತಯಾಚನೆ ಮಾಡಿದರು.