Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಪ್ರೊಫೆಷನಲ್ ಕೋರ್ಸ್ಗಳ ಬಗ್ಗೆ ಮಾಹಿತಿ ಕಾರ್ಯಗಾರ



ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಹಾಗೂ ಉದ್ಯಮ ಆಡಳಿತ ವಿಭಾಗ ಮತ್ತು ಐಕ್ಯುಎಸಿ ಯ ಜಂಟಿ ಆಶ್ರಯದಲ್ಲಿ ಅಂತಿಮ ಪದವಿಯ ವಿದ್ಯಾರ್ಥಿಗಳಿಗೆ ಪ್ರೊಫೆಷನಲ್ ಕೋರ್ಸ್ ಗಳ ಬಗ್ಗೆ ಮಾಹಿತಿ ಕಾರ್ಯಗಾರವು ಏಪ್ರಿಲ್ 18ರಂದು ನಡೆಯಿತು. ಮಂಗಳೂರಿನ ಕೆರಿಯರ್ ಗೈಡೆನ್ಸ್ ಹಾಗೂ ಮೋಟಿವೇಷನಲ್ ಸ್ಪೀಕರ್ ಗಳಾದ ವರ್ಷಿತ  ಹಾಗೂ   ಧೀರಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ. ಪಿ.ಟಿ., ಐ ಕ್ಯೂ ಎ ಸಿ ಕೋ-ಆರ್ಡಿನೇಟರ್ ಹಾಗೂ ವಾಣಿಜ್ಯ ಹಾಗೂ ಉದ್ಯಮ ಆಡಳಿತ ವಿಭಾಗದ ಮುಖ್ಯಸ್ಥರಾದ ಪ್ರೊ. ಲತಾ ಬಿ.ಟಿ. ಉಪಸ್ಥಿತರಿದ್ದರು. ವಾಣಿಜ್ಯ ಹಾಗೂ ಉದ್ಯಮ ಆಡಳಿತ ವಿಭಾಗದ ಉಪನ್ಯಾಸಕರುಗಳಾದ ಶ್ರೀಮತಿ ಮಧುರ ಕೆ ಹಾಗೂ ಶ್ರೀಮತಿ ಕೃತಿಕಾ ಪಿ ಎಸ್ ಕಾರ್ಯಕ್ರಮವನ್ನು ಸಂಯೋಜಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!