*30ನೇ ವರ್ಷದ ಅರ್ಧ ಏಕಾಹ ಭಜನಾ ಮಂಗಳೋತ್ಸವ, 34ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ*
ಎಣ್ಮೂರು ಕೋಟಿ ಚೆನ್ನಯ ನಗರದ ಶ್ರೀ ಸೀತಾರಾಮಾಂಜನೇಯ ಭಾರತೀ ಮಂದಿರದಲ್ಲಿ ಶ್ರೀ ಕೆ ಪ್ರಸಾದ ಕೆದಿಲಾಯರ ಹಿರಿತನದಲ್ಲಿ ಶ್ರೀ ರಾಮನವಮಿ ಉತ್ಸವವು ಇಂದು(ಎ.17) ಆರಂಭಗೊಂಡಿತು. ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ಎ.17 ಹಾಗೂ ಎ.18ರಂದು 30ನೇ ವರ್ಷದ ಅರ್ಧ ಏಕಾಹ ಭಜನಾ ಮಂಗಳೋತ್ಸವ, 34ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ದೇವರ ಪೂಜೆ ಹಾಗೂ ಶ್ರೀ ರಾಮ ತಾರಕ ಹೋಮ ಹಾಗೂ ನವಕಕಲಶೋತ್ಸವ ನಡೆಯಲಿದೆ. ಇಂದು ಪ್ರಾತಃಕಾಲ ದೇವರಿಗೆ ಮಹಾಪೂಜೆ ನಡೆದು ಧ್ವಜಾರೋಹಣ ನೆರವೇರಿಸಲಾಯಿತು. ಶ್ರೀ ಗಣೇಶ್ ಫ್ರೆಂಡ್ಸ್ ಸರ್ಕಲ್ ಸ್ಥಾಪಕಾಧ್ಯಕ್ಷರಾದ ರಾಮಚಂದ್ರ ರೈ ಕಲ್ಲೇರಿ ಧ್ವಜಾರೋಹಣಗೈದರು. ಬಳಿಕ ವೈದಿಕ ವಿಧಿ ವಿಧಾನಗಳೊಂದಿಗೆ ಗಂಗಾ ಪ್ರತಿಷ್ಠೆ, ಕಲಶ, ಪ್ರಾರ್ಥನೆ, ಗಣಪತಿ ಹವನ, ನವಕ ಕಲಶಾಭಿಷೇಕ, ಶ್ರೀ ರಾಮ ತಾರಕ ಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಮಧ್ಯಾಹ್ನ ದೇವರಿಗೆ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿತರಣೆ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು.
ಇಂದು ಸಂಜೆ 6.18ಕ್ಕೆ ದೀಪ ಪ್ರಜಲ್ವನೆ ಬಳಿಕ ಅರ್ಧ ಏಕಾಹ ಭಜನೆ ಪ್ರಾರಂಭಗೊಳ್ಳಲಿದೆ. ಎ.18ರಂದು ಬೆಳಗ್ಗೆ 6.18ಕ್ಕೆ ಭಜನಾ ಮಂಗಳೋತ್ಸವ, ಧ್ವಜ ಅವತರಣ ನಡೆಯಲಿದೆ.