ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ರಿಲ್ ಮೊದಲ ವಾರದಲ್ಲಿ ಚಿಣ್ಣರ ಅಂಗಳ ಬೇಸಿಗೆ ಶಿಬಿರ ನಡೆಯಿತು. ಶಾಲಾ ಹಿರಿಯ ವಿದ್ಯಾರ್ಥಿ ಮಹೇಶ್ ಕಾಂಚೋಡು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ರಾವ್ ಯು, ಸಂಚಾಲಕರಾದ ಶ್ರೀ ಪಿ.ಜಿ.ಎಸ್.ಎನ್ ಪ್ರಸಾದ್, ಆಡಳಿತ ಮಂಡಳಿ ಸದಸ್ಯರಾದ ಎನ್ ಗೋವಿಂದ ಭಟ್, ಎಸ್ಡಿಎಂಸಿ ಅಧ್ಯಕ್ಷರಾದ ಶ್ರೀ ರುಕ್ಮಯ್ಯ ನಾಯ್ಕ, ಉಪಾಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು.
ಒಂದು ವಾರ ನಡೆದ ಶಿಬಿರದಲ್ಲಿ ಗೃಹಾಲಂಕಾರ, ಭಾಷಣಕಲೆ, ಗೆರಟೆ ಕಲೆ, ಕಸದಿಂದ ರಸ, ಮನೆ ಮದ್ದು, ಸೋಪು ತಯಾರಿ, ಫಿನಾಯಿಲ್, ಕ್ಯಾಂಡಲ್ ತಯಾರಿ, ಹೂ ಕಟ್ಟುವ ವಿಧಾನ ಇತ್ಯಾದಿ ಕಲಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅಶ್ವಿನಿ ಕೋಡಿಬೈಲು, ಲಕ್ಷ್ಮೀನಾರಾಯಣ ಕಾಯರ್ತೋಡಿ, ತ್ರಿವೇಣಿ ವಿಶ್ವೇಶ್ವರ ಬಾಳಿಲ, ಮೌನೇಶ್ ಬಾಳಿಲ, ರೋಹಿತ್ ಚೀಮುಳ್ಳು, ಭವಾನಿ ಕಾಂಚನ, ಉದಯ ಭಾಸ್ಕರ್ ಸುಳ್ಯ, ಶಿಲ್ಪಾ ಎಡಮಂಗಲ, ಭಾಗವಹಿಸಿದರು. ಶಿಬಿರದ ಕೊನೆಯ ದಿನ ಮಕ್ಕಳ ಜಾತ್ರೆ ಏರ್ಪಡಿಸಲಾಯಿತು. ವಿದ್ಯಾರ್ಥಿಗಳೇ ವ್ಯಾಪಾರಿಗಳಾದರು, ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ಬೆಳ್ಳಾರೆ ಶಾಲೆಗೆ ಭೇಟಿ ನೀಡಿ ಸಿಹಿ ತಿಂಡಿ ಹಂಚಿದರು ಹಾಗೂ ಶಾಲೆಗೆ ಡಯಾಸ್ ಕೊಡುಗೆಯಾಗಿ ನೀಡಿದರು.
ಸಮಾರೋಪ ಸಮಾರಂಭದಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢ ಶಾಲೆಯ ಸಹ ಶಿಕ್ಷಕ ಶ್ರೀ ಉದಯ ಕುಮಾರ್ ರೈ ಯವರು ಸಮಾರೋಪ ಭಾಷಣ ಮಾಡಿದರು. ಶಾಲಾ ಮುಖ್ಯ ಗುರುಗಳಾದ ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿದ್ಯಾರ್ಥಿಗಳೇ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ಶಿವಪ್ರಸಾದ್ ಕಾರ್ಯಕ್ರಮ ಸಂಘಟಿಸಿದ್ದರು. ಎಲ್ಲಾ ಅಧ್ಯಾಪಕ ವೃಂದದವರು, ಎಸ್ಡಿಎಂಸಿ ಸದಸ್ಯರು, ಪೋಷಕರೂ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.