ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಎ.08ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪ್ರಥಮವಾಗಿ 1 ರಿಂದ 7ನೇ ತರಗತಿ ಮಕ್ಕಳ ಫಲಿತಾಂಶವನ್ನು ಪ್ರಕಟನಾ ಫಲಕದಲ್ಲಿ ಪೂರ್ವಾಹ್ನ 9 ಗಂಟೆಗೆ ಪ್ರಕಟಿಸಿ ಘೋಷಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಉತ್ತೀರ್ಣಗೊಂಡರು. ಬಳಿಕ ಸಮುದಾಯದತ್ತ ಶಾಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದವು. ಈ ಸಂದರ್ಭದಲ್ಲಿ ಪೋಷಕರಿಗೆ 2023- 24ನೇ ಶೈಕ್ಷಣಿಕ ಅವಧಿಯ ಕೃತಿ ಸಂಪುಟವನ್ನು ನೀಡಿ ಪ್ರಗತಿ ಪರಿಶೀಲಿಸಲು ಅವಕಾಶ ಕಲ್ಪಿಸಲಾಯಿತು. ಎಸ್ ಡಿ ಎಂ ಸಿ, ಪೋಷಕರ ಜಂಟಿ ಸಭೆ ಆಯೋಜಿಸಿ ದತ್ತಿನಿದಿಯ ಬಡ್ಡಿಯ ಹಣವನ್ನು 74 ವಿದ್ಯಾರ್ಥಿಗಳಿಗೆ ಪ್ರಧಾನ ಮಾಡಲಾಯಿತು. ನೂತನವಾಗಿ ಸೇರ್ಪಡೆಗೊಂಡ ಶಿಕ್ಷಕ ಮಹೇಶ್ ಇವರನ್ನು ಗುಲಾಬಿ ಹೂ ನೀಡಿ ಗೌರವಿಸಿ ಸ್ವಾಗತಿಸಲಾಯಿತು. ಯೇನೆಕಲ್ಲು ಶಾಲೆಗೆ ವರ್ಗಾವಣೆಗೊಂಡ ಶ್ರೀಮತಿ ಮಿಶ್ರಿಯ ಇವರನ್ನು ಸನ್ಮಾನಿಸಲಾಯಿತು. ಅಂತೆಯೇ ನಿರ್ಗಮಿತ 7ನೇ ತರಗತಿಯ ವಿದ್ಯಾರ್ಥಿಗಳನ್ನು, ಪೋಷಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಯುತ ಧೀರೇನ್ ಪರಮಲೆ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಲಘು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರು ಉಪಸ್ಥಿತರಿದ್ದು ಶುಭಹಾರೈಸಿದರು.
ಶ್ರೀ ಕುಸುಮಾಧರ ಮತ್ತು ಶ್ರೀ ಪ್ರಶಾಂತ್ ನೆಲ್ಲಿಪುಣಿ ಇವರುಗಳ ತಂದೆ ತಾಯಿಗಳ ಹಾಗೂ ಸಹೋದರನ ಸ್ಮರಣಾರ್ಥವಾಗಿ ₹15,000/- ದತ್ತಿನಿಧಿಯನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಿದರು. ಏಳನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಕಾರದೊಂದಿಗೆ 10 ಚಯರುಗಳನ್ನು ಶಾಲೆಗೆ ನೀಡಿದರು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ ಪಾರೆಪ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಮತಿ ಮೋಕ್ಷ & ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಈ ದಿನ ಎಲ್ಲರಿಗೂ ಶ್ರೀಯುತ ದೀರೇನ್ ಪರಮಲೆ, ಶ್ರೀಯುತ ಕುಶಾಲಪ್ಪ ಮಾಸ್ಟರ್ ಐಸ್ ಕ್ರೀಮ್ ವ್ಯವಸ್ಥೆ ಮಾಡಿದರು. ಅಲ್ಲದೆ ಕುಶಾಲಪ್ಪ ಮಾಸ್ಟರ್ ಬಿಸಿಯೂಟದೊಂದಿಗೆ ಪಾಯಸದ ವ್ಯವಸ್ಥೆಯನ್ನು ಮಾಡಿದರು. ಸಮುದಾಯದ ಶಾಲಾ ಕಾರ್ಯಕ್ರಮವು ಅರ್ಥವತ್ತಾಗಿ ಯಶಸ್ವಿಯಾಗಿ ಎಲ್ಲರ ಸಹಕಾರ ಸಹಭಾಗಿತ್ವದೊಂದಿಗೆ ನಡೆಯಿತು.