Ad Widget

ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿಸ್ಕೌಟ್ಸ್ ಗೈಡ್ ಮಕ್ಕಳ ಬೇಸಿಗೆ ಶಿಬಿರ

ಸುಳ್ಯ ಸಂತ ಜೋಸೆಫ್ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ ಮಕ್ಕಳ ಬೇಸಿಗೆ ಶಿಬಿರವು ಎ.1ರಂದು ಉದ್ಘಾಟಿಸಲಾಯಿತು.

ಸುಳ್ಯ  ಸಂತ ಜೋಸೆಫ್ ಶಾಲೆಯಲ್ಲಿ ಸ್ಕೌಟ್ ಗೈಡ್ ಮಕ್ಕಳ ಬೇಸಿಗೆ ಶಿಬಿರವನ್ನು ಶಾಲಾ ಸಂಚಾಲಕ ರೆ ಫಾ ವಿಕ್ಟರ್ ಡಿಸೋಜಾರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಲಾ ಪೋಷಕ ಸಮಿತಿಯ ಅಧ್ಯಕ್ಷ ಜೆಕೆರೈ, ಗುರುಸ್ವಾಮಿ, ಸ್ಕೌಟ್ ಸಮಿತಿಯ ಅಧ್ಯಕ್ಷ ಶಶಿಧರ ಎಂ, ಪ್ರೇಮ, ಚರ್ಚ್ ಪಾಲನ ಸಮಿತಿಯ ನವಿನ್ ಮಚದೋ, ಮುಖ್ಯ ಶಿಕ್ಷೆಕಿ ಬಿನೋಮ್ ಮತ್ತಿತರರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸುಳ್ಯ ಅಪರಾಧ ಪತ್ತೆ ವಿಭಾಗದ ಸಬ್ಇನ್ಸ್ಪೆಕ್ಟರ್ ಸರಸ್ವತಿ ಬಿ ಟಿ ಫೋಕ್ಸೋ ಕಾಯಿದೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು, ಸುಳ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ಸುರಕ್ಷತೆಯ ಮಾಹಿತಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ ಶಿಕ್ಷಕ ಭಾನುಪ್ರಕಾಶ್ ಸ್ವಾಗತಿಸಿದರು, ಮಮತಾ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಅನಿತಾ ಮಸ್ಕರೇನಿಯಸ್ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!