Ad Widget

ಮೈಲುತುತ್ತು ಸೇವಿಸಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು.

ಸಂಪಾಜೆ ಕಲ್ಲುಗುಂಡಿ ಚೆಂಬು ಮೂಲದ ಆನಂದ ಯು ಪಿ ಎಂಬುವವರು ಮಂಗಳವಾರ ರಾತ್ರಿ ಮೈಲು ತ್ತುತ್ತು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅವರನ್ನು ಮನೆಯವರು ತಕ್ಷಣವೇ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರನಿಘ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದರು ಆದರೆ ಇಂದು ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವಿನ್ನಪ್ಪಿರುವುದಾಗಿ ತಿಳಿದು ಬಂದಿದೆ ಮೃತರು ಮಗ , ಸೊಸೆ ಮತ್ತು...

ಪಂಜ : ರಂಗಸ್ಥಳ ಚಲನಚಿತ್ರಕ್ಕೆ ಮುಹೂರ್ತ

"ರಂಗಸ್ಥಳ"ಚಲನಚಿತ್ರ ಮುಹೂರ್ತ ಕಾರ್ಯಕ್ರಮವು ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಜರುಗಿತು.‌ ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಇವರು  ಪಂಚಲಿಂಗೇಶ್ವರ ದೇವರಿಗೆ ಮಂಗಳಾರತಿ ಮಾಡಿ ಪ್ರಾರ್ಥನೆ ಮಾಡಿ ಪ್ರಸಾದವನ್ನು ಕ್ಯಾಮರಾ ಗೆ ಹಾಕಿದರು.‌ ಚಲನಚಿತ್ರ ದ ನಿರ್ಮಾಪಕರಾದ ರೇವಣ್ಣ ಮಂಡ್ಯ ರವರು ಮುಹೂರ್ತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಚಲನಚಿತ್ರದ...
Ad Widget

ಐನೆಕಿದು ನಕ್ಸಲರು ಪ್ರತ್ಯಕ್ಷ – ಮನೆಯವರ ಜತೆ ನಕ್ಸಲರು ಏನು ಮಾತನಾಡಿದ್ದಾರೆ – ಅವರ ಉದ್ದೇಶವೇನು? – ಇಲ್ಲಿದೆ ಮಾತುಕತೆ ವಿವರ

ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ್ ಮನೆ ಬಳಿ ಮಾ.23 ರಂದು ನಕ್ಸಲರು ಪ್ರತ್ಯಕ್ಷವಾಗಿದ್ದರು. ಮನೆಯವರ ಬಳಿ ಏನು ಬಳಿ ನಕ್ಸಲರು ಏನೆಲ್ಲಾ ಮಾತನಾಡಿದ್ದಾರೆ, ಅವರ ಉದ್ದೇಶವೇನು ಎಂದು ಅಮರ ಸುದ್ದಿಗೆ ಅಶೋಕ್ ವಿವರಿಸಿದ್ದಾರೆ. ಮನೆ ಬಳಿ ಬಂದ ನಕ್ಸಲರು ನಾವು ಯಾರು ಗೊತ್ತಾಯಿತಾ, ನಮಗೆ ಅರ್ಜೆಂಟ್ ಅಕ್ಕಿ, ದಿನಸಿ ಬೇಕು ಕೊಡಿ ಎಂದು ಕೇಳಿದ್ದಾರೆ....

ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪೋಲಿಸ್ ಮತ್ತು ಸಿ ಆರ್ ಪಿ ಎಫ್ ಯೋಧರಿಂದ ಪಥಸಂಚಲನ.

ಕೇಂದ್ರ ಲೋಕಸಭೆ ಸಂಸದರ ಆಯ್ಕೆ ನಡೆಸುವ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭದ್ರತೆ ಮತ್ತು ಸುಗಮ ಮತದಾನ ನಡೆಸುವ ದೃಷ್ಟಿಯಿಂದ ಸುಳ್ಯದ ಮುಖ್ಯ ರಸ್ತೆಗಳಲ್ಲಿ ಪೋಲಿಸ್ ಮತ್ತು ಸಿ ಆರ್ ಪಿ ಎಫ್‌ಯೋಧರಿಂದ ಪಥ ಸಂಚಲನ ನಡೆಯಿತು. https://youtu.be/hNPwH60-Ft0?si=dhmkThraNMdR0ACY

ಐನೆಕಿದು : ಮನೆಯೊಂದಕ್ಕೆ ನಕ್ಸಲರ ಭೇಟಿ – ಊಟ ಹಾಗೂ ಅಕ್ಕಿ ಕೇಳಿ ಕೊಂಡೊಯ್ದ ನಕ್ಸಲರು

ಐನೆಕಿದು ಗ್ರಾಮದ ಕೋಟೆ ತೋಟದಮಜಲು ಅಶೋಕ ಎಂಬವರ ಮನೆಗೆ ಮಾ.23ರಂದು ಸಂಜೆ ನಾಲ್ವರು ನಕ್ಸಲರು ಬಂದು ಊಟ ಹಾಗೂ ಅಕ್ಕಿ ಕೇಳಿ ಪಡೆದುಕೊಂಡು ಹೋದರೆಂದು ತಿಳಿದುಬಂದಿದೆ. ಇದೀಗ ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಶೋಕ ಎಂಬವರ ಮನೆಗೆ ಬಂದ ಅವರು ನಾವು ಯಾರು ಗೊತ್ತಾಯಿತ ಎಂದು ಕೇಳಿ, ಮನೆಯಲ್ಲಿ ಸುಮಾರು ಒಂದು ಗಂಟೆಗಳ...

ಐನೆಕಿದು : ಮನೆಗೆ ಬಂದ ಅಪರಿಚಿತರು ನಕ್ಸಲರೇ ? – ಕೂಂಬಿಂಗ್ ಆರಂಭ

ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಮಾ.23ರಂದು ಸಂಜೆ ಮೂರು ಮಂದಿ ಅಪರಿಚಿತರು ಬಂದು ಹೋಗಿದ್ದಾರೆನ್ನಲಾಗಿದ್ದು, ನಕ್ಸಲರಿರಬಹುದೇ ಎಂಬ ಅನುಮಾನ ಕಾಡಿದೆ. ಅರಣ್ಯದ ಸಮೀಪದ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಅಶೋಕ್ ಎಂಬವರ ಮನೆಗೆ ಬಂದಿರುವ ಅವರು ಸುಮಾರು ಒಂದು ಗಂಟೆಗಳ ಕಾಲ ಅಲ್ಲಿ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಮೊಬೈಲ್...

ಮಂಗಳೂರಿನಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಮಯೂರಿ

ಮಾರ್ಚ್ 22 ಮತ್ತು 23 ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ನಲ್ಲಿ ನಡೆದ ಮ್ಯಾನೇಜ್ಮೆಂಟ್ ಫೆಸ್ಟಿನಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ದ್ವಿತೀಯ ಬಿಕಾo ನ ವಿದ್ಯಾರ್ಥಿನಿ ಮಯೂರಿ ಇವರು ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ವಿಜೇತರನ್ನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ ಟಿ ಇವರು ಅಭಿನಂದಿಸಿದ್ದಾರೆ.

ನಿದ್ರೆಗೆ ಜಾರಿದ ಚಾಲಕ – ಮೋರಿಗೆ ಗುದ್ದಿದ ಕಾರು

ಚಾಲಕನಿಗೆ ನಿದ್ರೆ ಜಾರಿದ್ದರಿಂದ ಇನ್ನೋವ ಕಾರು ನಿಯಂತ್ರಣ ತಪ್ಪಿ ಗೂನಡ್ಕದಲ್ಲಿ ಮೋರಿಗೆ ಢಿಕ್ಕಿಯಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.  ಕಾರು ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದು,  ಗೂನಡ್ಕದ ಶಿರಾಡಿ ದೈವಸ್ಥಾನದ ದ್ವಾರದ ಬಳಿ ಮೋರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.

ಕೇರಳದಲ್ಲಿ 7.25 ಕೋಟಿ ಖೋಟಾ ನೋಟು ಪತ್ತೆ – ಸುಳ್ಯದ ಸುಲೈಮಾನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಜಾಕ್ ಪೊಲೀಸರ ವಶಕ್ಕೆ

2 ಸಾವಿರ ಮುಖಬೆಲೆಯ 7.25 ಕೋಟಿ ರೂ ಪತ್ತೆಯಾದ ಘಟನೆ ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ಸಮೀಪ ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ. ತನಿಖೆಯ ವೇಳೆ ಇವೆಲ್ಲವೂ ಖೋಟಾ ನೋಟುಗಳು ಎಂದು ಹೇಳಲಾಗುತ್ತಿದೆ. ಸುಳ್ಯ ನಿವಾಸಿ ಸುಲೈಮಾನ್ ಸಹಿತ ಹಾಗೂ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ. ಅಂಬಲತರ ಠಾಣಾ ವ್ಯಾಪ್ತಿಯ ಪೊಲೀಸರು ಈ...

ಸುಳ್ಯ : ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾಕೂಟ : ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧ್ಯ- ರಾಮಚಂದ್ರ ಕೆ

ಪುಸ್ತಕದಲ್ಲಿರುವ ವಿಷಯಗಳನ್ನು ಮಾತ್ರವಲ್ಲದೆ ನಿಜ ಜೀವನದಲ್ಲಿ ಸಿಗುವ ಕೆಲವೊಂದು ಮೌಲ್ಯಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ಸಮಾಜದ ಉತ್ತಮ ವ್ಯಕಿಗಳ ಆದರ್ಶ ಗುಣಗಳನ್ನು ತಿಳಿದುಕೊಂಡು ಆದರ್ಶ ವ್ಯಕ್ತಿಗಳಾಗಿ, ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಬದುಕಿದಾಗ ಬದುಕು ಸಾರ್ಥಕವಾಗಲು ಸಾಧ್ಯ ಎಂದು ಬೆಳ್ಳಾರೆ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೆಶಕರಾದ ಡಾ ರಾಮಚಂದ್ರ ಕೆ ಹೇಳಿದರು.ಅವರು...
Loading posts...

All posts loaded

No more posts

error: Content is protected !!