Ad Widget

ಡಾ. ಅನುರಾಧಾ ಕುರುಂಜಿಯವರಿಗೆ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿ  ಪ್ರದಾನ

ಸುಳ್ಯದ  ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರಿಗೆ ಬೆಂಗಳೂರಿನ ವಿಶ್ವ ಕನ್ನಡ ಸಂಸ್ಥೆಯವರು  ಕೊಡ ಮಾಡುವ  ಶಿವಶರಣೆ ನೀಲಾಂಬಿಕೆ  ಪ್ರಶಸ್ತಿಯನ್ನು ಮಾರ್ಚ್ 29, 2024 ರಂದು ಬೆಂಗಳೂರಿನ ಬಾಗಲಕುಂಟೆ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ  ನಡೆದ ವಿಶ್ವ ಕನ್ನಡ ರಾಜ್ಯ ಮಟ್ಟದ  ಪ್ರಥಮ ಮಹಿಳಾ ಸಮ್ಮೇಳನದಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ...

ಸುಳ್ಯ : ಕಾರ್ಯಕರ್ತರ ಸಮಾವೇಶದಲ್ಲಿ ಘಟಾನುಘಟಿ ನಾಯಕರು ಭಾಗಿ : ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ – ಕಟೀಲ್

ಸುಳ್ಯ ಜಿಲ್ಲೆಗೆ ಪ್ರೇರಣಾದಾಯಿ ಕ್ಷೇತ್ರ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಸುಳ್ಯದಲ್ಲಿಂದು ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.‌ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಮತ್ತು ಲೋಕಸಭಾ ಸದಸ್ಯ ಸ್ಥಾನದ ಅಭ್ಯರ್ಥಿಯನ್ನಾಗಿಸಿ ಬೆಳೆಸಿದ ಪಕ್ಷವಿದ್ದರೆ ಅದು ಭಾರತೀಯ ಜನತಾ ಪಕ್ಷ ಎಂದು ಹೇಳಿದರು. ತಮ್ಮ ಜಿಲ್ಲೆಗೆ ಮೋದಿಯವರ ಅವಧಿಯಲ್ಲಿ 1 ಲಕ್ಷದ...
Ad Widget

ಎಲಿಮಲೆ : ಹರ್ಷ ಗಾರ್ಮೆಂಟ್ಸ್ ಶುಭಾರಂಭ

ಎಲಿಮಲೆಯ ಪಾರೆಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಹರಿಶ್ಚಂದ್ರ ಪಟ್ಟೆ ಮಾಲಕತ್ವದ ಹರ್ಷ ಗಾರ್ಮೆಂಟ್ಸ್ ಮಾ.21 ರಂದು ಶುಭಾರಂಭಗೊಂಡಿತು. ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಭಟ್ ತಳೂರು, ಉದಯಕುಮಾರ್ ಎಂ., ಎ.ವಿ.ತೀರ್ಥರಾಮ , ಶೈಲೇಶ್ ಅಂಬೆಕಲ್ಲು, ಗೋಪಿನಾಥ್ ಮೆತ್ತಡ್ಕ, ನಿತ್ಯಾನಂದ ಪಾರೆಪ್ಪಾಡಿ, ರಾಧಾಕೃಷ್ಣ ಶ್ರೀ ಕಟೀಲ್, ಗದಾಧರ ಬಾಳುಗೋಡು,...

ಏ.06: ಸ್ನೇಹ ಶಾಲೆಯಲ್ಲಿ ಸಾಹಿತಿ ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಹಾಗೂ ಅಗ್ನಿಹೋತ್ರದ ಮಹತ್ವದ ಬಗ್ಗೆ ಉಪನ್ಯಾಸ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಜನ್ಮಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆ ಹಾಗೂ ಅಗ್ನಿಹೋತ್ರ ದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಶಾಲೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ...

ಏ.06: ಸ್ನೇಹ ಶಾಲೆಯಲ್ಲಿ ಸಾಹಿತಿ ಎಲ್.ಎಸ್.ಎಸ್. ಜನ್ಮ ಶತಮಾನೋತ್ಸವ ಹಾಗೂ ಅಗ್ನಿ ಹೋತ್ರದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಎಪ್ರಿಲ್ 6 ರಂದು ಕನ್ನಡದ ಖ್ಯಾತ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ ಜನ್ಮಶತಮಾನೋತ್ಸವದ ಆಚರಣೆ ಹಾಗೂ ವಿದ್ಯಾನಿಧಿಯ ಸ್ಥಾಪನೆ ಹಾಗೂ ಅಗ್ನಿಹೋತ್ರ ದ ಮಹತ್ವದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಸ್ನೇಹ ಶಾಲೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ...

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಕಾರ್ಯಕರ್ತರ ಸಮಾವೇಶ  ಕಿಕ್ಕಿರಿದು ಸೇರಿದ ಕಾರ್ಯಕರ್ತರು

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ವತಿಯಿಂದ ಕಾರ್ಯಕರ್ತರ ಸಮಾವೇಶವು ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಮಾ. 29 ರಂದು ನಡೆಯುತ್ತಿದ್ದು ಈ ಸಭೆಯಲ್ಲಿ ಕಾರ್ಯಕರ್ತರು ಕಿಕ್ಕಿರಿದು ಭಾಗವಹಿಸಿದ್ದಾರೆ. ಈ ಕಾರ್ಯಕರ್ತರ ಸಮಾವೇಶದ ವೇದಿಕೆಯಲ್ಲಿ ಜಿಲ್ಲಾಧ್ಯಕ್ಷರಾದ ಸತೀಶ್ ಕುಂಪಲ, ಬಿಜೆಪಿ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಎಸ್ ಅಂಗಾರ, ಭಾಗೀರಥಿ ಮುರುಳ್ಯ, ಪರಿಷತ್ ಸದಸ್ಯರಾದ...

ಪಂಜ : ಮಹಿಳೆಯ ಕುತ್ತಿಗೆಯಿಂದ ಸರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು- ಆರೋಪಿಗಳು ವಶಕ್ಕೆ!

ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಡಬ್ಬಲ್ ಕಟ್ಟೆಯ ಸಮೀಪ ಮಾ.4 ರಂದು ಮಹಿಳೆಯೋರ್ವರ ಚಿನ್ನದ ಸರ ಕಸಿದು ಕಳ್ಳರು ಪರಾಯಾಗಿದ್ದರು. ಬೈಕ್ ನಲ್ಲಿ ಬಂದ ಇಬ್ಬರು ಕಳ್ಳರು ಕಳ್ಳತನ ಮಾಡಿದ್ದರು. ಇದೀಗ ಪೊಲೀಸರು ಕಳ್ಳತನ ಮಾಡಿದ ಚಿತ್ರದುರ್ಗ ಹಾಗೂ ಬೇಲೂರು ಮೂಲದ ಆರೋಪಿಗಳನ್ನು ದಸ್ತಗಿರಿ ಮಾಡಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ

ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.28 ಮತ್ತು 29ರಂದು ನಡೆಯಿತು. ಸಾವಿರಾರು ಭಕ್ತರು ಶ್ರೀ ವಿಷ್ಣುಮೂರ್ತಿ ದೈವದ ದರ್ಶನ ಪಡೆದರು. ಮಾ.27ರಂದು ಬೆಳಿಗ್ಗೆ ಗಣಹೋಮವು ದೈವಸ್ಥಾನದ ಸನ್ನಿಧಿಯಲ್ಲಿ  ನಡೆಯಿತು. ಮಾ.28ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತಂದು, ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು.ರಾತ್ರಿ...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ  ‘ A ‘ ಗ್ರೇಡ್ ಮಾನ್ಯತೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀನ ಕೊಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯಕ್ಕೆ 2024ನೇ ಮಾರ್ಚ್ 13 ಮತ್ತು 14 ರಂದು ರಾಷ್ಟ್ರೀಯ ಮೌಲ್ಯಮಾಪನ ಮತ್ತು  ಮಾನ್ಯತೆ ಮಂಡಳಿಯ ( NAAC)   ತಂಡವು ಭೇಟಿ ನೀಡಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಿರುತ್ತದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ  ನಿಯಮಾನುಸಾರ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರತಿ ಐದು ವರ್ಷಗಳಿಗೊಮ್ಮೆ...

ಶಾಂತಿನಗರದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಆರೋಪಿಗಳ ಸಹಿತ ಸ್ವತ್ತುಗಳು ವಶಕ್ಕೆ!

ದಿನಾಂಕ 28.03.2024 ರಂದು ಸುಳ್ಯ ಕಸಬಾ ಗ್ರಾಮದ ಶಾಂತಿನಗರ ಎಂಬಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಇದೀಗ ವರದಿಯಾಗಿದೆ. ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯಾದ ಸೌಮ್ಯ ಪಿ. ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದು ಅಕ್ರಮ ಮರ ಸಾಗಾಟ...
Loading posts...

All posts loaded

No more posts

error: Content is protected !!