ದಿನಾಂಕ 28.03.2024 ರಂದು ಸುಳ್ಯ ಕಸಬಾ ಗ್ರಾಮದ ಶಾಂತಿನಗರ ಎಂಬಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಲು ಯತ್ನಿಸಿದ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಇದೀಗ ವರದಿಯಾಗಿದೆ.
ಸುಳ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿಯಾದ ಸೌಮ್ಯ ಪಿ. ಎನ್. ನೇತೃತ್ವದ ತಂಡ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಿ ಕೊಂಡಿದ್ದು ಅಕ್ರಮ ಮರ ಸಾಗಾಟ ಮಾಡಲು ಲಾರಿ ಮತ್ತು ಲಾರಿಗೆ ತುಂಬಲು ಬಳಸಿದ ಕ್ರೇನ್ ಹಾಗೂ 7.946 ಘ. ಮೀ.ಮರ ಹಾಗೂ ಆರೋಪಿಗಳಾದ . ಸ್ಥಳದ ಮಾಲಿಕ ಕೆ. ಕೃಷ್ಣಪ್ಪ ನಾಯ್ಕ ಬಿನ್ ಕೆ.ವೆಂಕಪ್ಪ ನಾಯ್ಕ ಶಾಂತಿನಗರ. ಸುಳ್ಯ , ಮರದ ವ್ಯಾಪಾರಿ ರಿಫಾಯಿ ಬಿನ್ ಕುನ್ಹಿಪ್ಪ . ಹಳೆ ಗೇಟು ಮನೆ, ಸುಳ್ಯ,. ಕ್ರೇನ್ ಚಾಲಕ ಗೋಪಾಲಕೃಷ್ಣ ಬೀನ್ ಈಶ್ವರ್ ನಾಯ್ಕ. ಜಯನಗರ ಮನೆ. ಸುಳ್ಯ. ,ಲಾರಿ ಚಾಲಕ ಜಗದೀಶ್ ಬಿನ್ ಚಂದ್ರೇಗೌಡ, ಶಾಂತಿ ಗ್ರಾಮ, ಹಾಸನ ತಾಲೂಕು, ಇವರನ್ನು ದಸ್ತಗಿರಿ ಮಾಡಲಾಗಿದೆ. ವಾಹನ ಮತ್ತು ಸೊತ್ತುಗಳ ಮೌಲ್ಯ 15 ಲಕ್ಷ ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಮತಿ ಸೌಮ್ಯ. ಪಿ. ಎನ್, ಶ್ರೀ ರಾಘವೇಂದ್ರ ಪ್ರಸಾದ್, ಗಸ್ತು ಅರಣ್ಯ ಪಾಲಕರಾದ ಶ್ರೀಮತಿ ಗೀತಾ, ಶ್ರೀಮತಿ ಪುಷ್ಪಾವತಿ, ಶ್ರೀ ನಿಂಗಪ್ಪ ಕೊಪ್ಪ, ವಾಹನ ಚಾಲಕ ಪುರುಷೋತ್ತಮ್ ಭಾಗವಹಿಸಿದ್ದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಅಂಟೋನಿ ಎಸ್ ಮರಿಯಪ್ಪ ರವರ ನಿರ್ದೇಶನ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಶ್ರೀ ಮಂಜುನಾಥ ಎನ್. ರವರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.