

ಅಯ್ಯನಕಟ್ಟೆಯಲ್ಲಿರುವ ನಮ್ಮ ಆರೋಗ್ಯಧಾಮ ಮಲ್ಟಿಸ್ಪೆಷಾಲಿಟಿ ಮೆಡಿಕಲ್ ಸೆಂಟರ್ ನಲ್ಲಿ ಮಹಿಳೆಯರಿಗೆ ಉಚಿತವಾಗಿ ಕ್ಯಾಲ್ಸಿಯಂ ಹಾಗೂ ಕಬ್ಬಿಣಾಂಶವಿರುವ ಔಷಧಿಗಳ ವಿತರಣೆ ನಡೆಯಿತು. ಈ ಔಷಧಿ ಮಹಿಳೆಯರಿಗೆ ಮೂಳೆಗಳ ಸವೆತ ತಡೆಯಲು ಹಾಗೂ ಹಿಮೋಗ್ಲೋಬಿನ್ ರಕ್ತದಾಂಶ ವೃದ್ಧಿಸಲು ಸಹಕಾರಿಯಾಗಲಿದೆ. ಸುಮಾರು 50ಕ್ಕೂ ಹೆಚ್ಚಿನ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಂಡರು. ಮುಂದಿನ ವಾರ ಮಕ್ಕಳಿಗೆ ವಿಟಮಿನ್ ಡಿ ಹಾಗೂ ಜಂತುಹುಳದ ಔಷಧಿಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ನಡೆಯಲಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮೆಡಿಕಲ್ ಸೆಂಟರ್ ನ ಸರ್ಜನ್ ಮತ್ತು ಆಡಳಿತಾಧಿಕಾರಿಯಾಗಿರುವ ಡಾ|ಕಿಶನ್ ರಾವ್ ಬಾಳಿಲ ತಿಳಿಸಿದ್ದಾರೆ.