Ad Widget

ಸುಬ್ರಹ್ಮಣ್ಯದಲ್ಲಿ ದ ರಾಯಲ್ ಮೊಂಟಾನಾ ಹೋಟೆಲ್ & ರೆಸಾರ್ಟ್ ಉದ್ಘಾಟನೆಗೆ ಸಜ್ಜು – ಏ.03 ರಂದು ಲೋಕಾರ್ಪಣೆಗೊಳ್ಳಲಿರುವ ರೆಸಾರ್ಟ್  ಬಗ್ಗೆ ವಿವರ ನೀಡಿದ ಸಂಸ್ಥೆಯ ಮುಖ್ಯಸ್ಥ ಹರ್ಷ ಪುಟ್ಟಪ್ಪ

ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಏನೇಕಲ್ ನಲ್ಲಿ ನೂತನವಾಗಿ ದಿ ರಾಯಲ್ ಮೊಂಟಾನಾ ಹೋಟಲ್ ಮತ್ತು ರೆಸಾರ್ಟ್ ಉದ್ಘಾಟನೆಗೆ ಸಜ್ಜುಗೊಂಡಿದ್ದು ಏ.03 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ದ ರಾಯಲ್ ಎಂಟರ್ ಪ್ರೈಸಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹೇಳಿದರು.

. . . . . . .

🔺ಏನೆಕಲ್ಲು : ದಿ ರೋಯಲ್ ಮೊಂಟಾನಾ ಹೋಟೆಲ್ ರೆಸಾರ್ಟ್ ಉದ್ಘಾಟನೆಗೆ ಸಿದ್ಧತೆ De Royal Montana Resort

ಅವರು ಇಂದು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ತಮ್ಮ ಯೋಜನೆಗಳ ಬಗ್ಗೆ ವಿವರ ನೀಡಿದರು. ದಿ ರಾಯಲ್ ಎಂಟರ್ ಪ್ರೈಸಸ್ ಕರಾವಳಿ, ಮಲೆನಾಡ ಪ್ರವಾಸೋದ್ಯಮದಲ್ಲಿ ಹೊಸ ಪರ್ವ ಉಂಟು ಮಾಡಲಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದೇವೆ. ಯೇನೆಕಲ್ಲಿನ ದಿ ರಾಯಲ್ ಮೊಂಟಾನಾ ರೆಸಾರ್ಟ್ ಜತೆಗೆ ಕಾರವಾರದಿಂದ ಕೂರ್ಗ್ ವರೆಗೆ ಕುಂದಾಪುರದಿಂದ ಕುಕ್ಕೆವರೆಗೆ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಭಾಗದಲ್ಲಿನ ಬೆಳಕಿಗೆ ಬಾರದ ಆದ್ಭುತ ಪ್ರವಾಸಿ ತಾಣಗಳನ್ನು ಜಗತ್ತಿಗೆ ತೆರೆದಿಡುವುದೇ ಸಂಸ್ಥೆಯ ಉದ್ದೇಶ ಎಂದರು. ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ದ ರಾಯಲ್ ಎಂಟರ್‌ಪ್ರೈಸಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಶ್ರೀ ಹರ್ಷ ಪುಟ್ಟಪ್ಪ, ನಿರ್ದೇಶಕರಾದ ಕು. ಧನುಶ್ರೀ, ಗಗನ್ ಹರ್ಷ ಉಪಸ್ಥಿತರಿದ್ದರು

ಬೆಂಗಳೂರಿನ ವೇರ್ ಹೌಸಿಂಗ್ ಕ್ಷೇತ್ರದಲ್ಲಿ ಅಪಾರ ಪರಿಣತಿಯನ್ನು ಹೊಂದಿ, ಹೋಟೆಲ್ ಉದ್ಯಮವನ್ನು ನಿರ್ವಹಿಸುತ್ತಿರುವ ಸಂಸ್ಥೆ ನೂರಾರು ಜನರಿಗೆ ಉದ್ಯೋಗವನ್ನು ನೀಡಿದೆ. ಧಾರ್ಮಿಕ ಪ್ರವಾಸೋದ್ಯಮಕ್ಕೆ ಮುನ್ನುಡಿ ಬರೆದಿರುವ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಹೋಟೆಲ್ ಮತ್ತು ರೆಸಾರ್ಟನ್ನು ಆರಂಭಿಸುವ ಮೂಲಕ ರಾಯಲ್ ಎಂಟರ್ ಪ್ರೈಸಸ್ ಹೊಸ ಮುನ್ನುಡಿ ಬರೆದಿದೆ.

ಏಪ್ರಿಲ್ 03 ರಂದು ಉದ್ಘಾಟನೆ

ಏಪ್ರಿಲ್ 3ರಂದು ರಾಜ್ಯ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಕುಮಾರಿ ಭಾಗೀರಥಿ ಮುರುಳ್ಯ ವಹಿಸುವರು. ಸಮಾರಂಭದಲ್ಲಿ ಮಾಜಿ ಸಚಿವರು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್‌ ಕುಮಾರ್ ರೈ, ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಶನ್ ಡಿಸೈನರ್‌ ಪ್ರಸಾದ್‌ ಬಿದ್ದಪ್ಪ ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಜಾತಾ ಕಲ್ಲಾಜೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ವಿಶೇಷತೆಗಳು :
ಪಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯ ಜಗದ್ವಿಖ್ಯಾತ. ಕಾನನದೊಳಗಿನ ಪ್ರಶಾಂತ ನಾಗನ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರಕ್ಕೆ ಸೇವೆ ಸಲ್ಲಿಸಲು ಬರುವವರು ಲಕ್ಷಾಂತರ ಮಂದಿ. ಎದುರಲ್ಲೇ ಕಾಣಿಸುವ ಕುಮಾರ ಪರ್ವತಕ್ಕೆ ಚಾರಣ ಹೋಗುವ ಸಾವಿರಾರು ಮಂದಿ ಪ್ರವಾಸಿಗರೂ ಕುಕ್ಕೆಗೆ ಬಂದೇ ಹೋಗಬೇಕು. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ಯಾತ್ರಾ ತಾಣದಂತೆ, ಪ್ರವಾಸಿ ತಾಣವೂ ಹೌದು. ಹೀಗೆ ಬರುವ ಪ್ರವಾಸಿಗರಿಗೆ ಅಲ್ಲಿಂದ ಕೇವಲ ಆರು ಕಿ.ಮೀ. ದೂರದ ಏನೆಕಲ್ಲು ಗ್ರಾಮದಲ್ಲಿ ಸುಂದರ ರೆಸಾರ್ಟ್ ಕೈಬೀಸಿ ಕರೆಯುತ್ತಿದೆ. ಅದುವೇ ಡಿ ರಾಯಲ್ ಮೊಂಟಾನಾ.

ಸುಬ್ರಹ್ಮಣ್ಯ-ಪುತ್ತೂರು ರಸ್ತೆಯಲ್ಲಿ ಏನೆಕಲ್ಲು ಎಂಬ ಕಾನನದೊಳಗೆ ಹುದುಗಿದ ಊರು ಸಿಗುತ್ತದೆ. ಅದರ ಸಮೀಪದಲ್ಲೇ ಇದೆ ಬೂದಿಪಳ್ಳ ಎಂಬ ಹಸಿರು ಹೊದಿಕೆ ಹೊದ್ದ ಸುಂದರ ಪ್ರದೇಶ. ಅಲ್ಲಿಯೇ ಹೊಸದಾಗಿ ಆರಂಭಗೊಂಡಿದೆ ಡಿ ರಾಯಲ್ ಮೊಂಟಾನಾ ಹೋಟೆಲ್ ರೆಸಾರ್ಟ್. ಕುಮಾರಧಾರಾ ಸ್ನಾನಘಟ್ಟದಿಂದ ಇಲ್ಲಿಗೆ ಇರುವ ದೂರ ಕೇವಲ 5 ಕಿ.ಮೀ. ಮಾತ್ರ.

ಮೂರು ಎಕರೆ ಪ್ರದೇಶದಲ್ಲಿ ವಿಶಾಲವಾಗಿ ವ್ಯಾಪಿಸಿಕೊಂಡಿರುವ ಹಾಗೂ ಪ್ರಕೃತಿ ತನ್ನ ಸೌಂದರ್ಯವೆಲ್ಲವನ್ನೂ ಇಲ್ಲೇ ಅನಾವರಣಗೊಳಿಸುವ ರೀತಿಯ ಲ್ಯಾಂಡ್‌ಸ್ಕೆಪ್ ಪರಿಕಲ್ಪನೆಯಲ್ಲಿ ಈ ಹೋಟೆಲ್ ರೆಸಾರ್ಟ್ ನಿರ್ಮಾಣವಾಗಿದ್ದು, ಬೆಂಗಳೂರಿನ ಉದ್ಯಮಿ ಹರ್ಷ ಪುಟ್ಟಪ್ಪ ಅವರ ಕನಸಿನ ಕೂಸು, ಯಾತ್ರಿಕರ ಜತೆಗೆ ಪ್ರವಾಸಿಗರಿಗೆ ಉತ್ತಮ ಸೌಲಭ್ಯದ ಊಟ, ವಸತಿ, ಮನರಂಜನೆ, ಮಕ್ಕಳಿಗೆ ಆಟವಾಡುವ ಸ್ಥಳ, ಈಜುಕೊಳ ಸಹಿತ ಎಲ್ಲಾ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕು ಎಂಬ ಪರಿಕಲ್ಪನೆಯೊಂದಿಗೆ ಅತ್ಯುತ್ತಮವಾಗಿ ತಲೆ ಎತ್ತಿ ನಿಂತಿದೆ ಏನೆಕಲ್ಲಿನ ಈ ಹೊಸ ಪ್ರವಾಸಿ ನೆಲೆ.

ಆಧುನಿಕ ರೆಸಾರ್ಟ್‌ಗಳಲ್ಲಿ ಇರುವಂತಹ ಲಾನ್ ಏರಿಯಾ, ಪ್ಯಾಂಟ್ರಿ ಹೌಸ್, ಬ್ಯಾಂಕ್ವೆಟ್ ಹಾಲ್, ಎಸಿ ಡೈನಿಂಗ್ ಹಾಲ್ ಸಹಿತ ಊಟ, ಉಪಾಹಾರ, ಪಾನೀಯ ಸೇವನೆ, ವಿಶ್ರಾಂತಿ, ವಾಕಿಂಗ್, ಸ್ವಿಮ್ಮಿಂಗ್ ಗೆ ಇಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಒಂದು ಬಾರಿ ಬಂದರೆ ಹೊರ ಪ್ರಪಂಚದ ಜಂಜಡಗಳನ್ನು ಮರೆತುಬಿಟ್ಟು ಹಾಯಾಗಿ ಒಂದೆರಡು ದಿನ ಇಲ್ಲೇ ಕಾಲ ಕಳೆಯುವ ಮನಸ್ಸು ಮಾಡುವುದು ನಿಶ್ಚಿತ. ರೆಸಾರ್ಟ್ ನಲ್ಲಿ 29 ಕೊಠಡಿಗಳಿದ್ದು ಎಸಿ ಮತ್ತು ನಾನ್ ಎಸಿ ಕೊಠಡಿಗಳಿದ್ದು, ಎಲ್ಲವೂ ವಿಶಾಲವಾಗಿದೆ. 4 ಕಾಟೇಜ್ ಗಳಿದ್ದು, ಮಡಿಕೇರಿಯ ಅನುಭವವನ್ನು ಈ ಕಾಟೇಜ್‌ಗಳು ಕುಕ್ಕೆಯ ಪರಿಸರದಲ್ಲಿ ನೀಡುವುದು ನಿಶ್ಚಿತ. ಬಿರು ಬೇಸಿಗೆಯಲ್ಲೂ ಕಾಡೊಳಗಿಂದ ಹರಿದು ಬರುವ ಜಲಜಲಲ ಜಲಧಾರೆ ಇಲ್ಲಿನ ಜೀವಜಲ. ಜತೆಗೆ ಕೊಳವೆಬಾವಿಯಲ್ಲೂ ನೀರು ಲಭ್ಯ ಇದೆ. 100ಕ್ಕೂ ಅಧಿಕ ಕಾರುಗಳ ನಿಲುಗಡೆಗೆ ಇಲ್ಲಿ ಅವಕಾಶ ಇದೆ.

ಪಂಜುರ್ಲಿ ದೈವಸ್ಥಾನ

ರೆಸಾರ್ಟ್ ಎಂದ ಕೂಡಲೇ ಅದೊಂದು ಕೇವಲ ಮೋಜಿನ ಸ್ಥಳ ಎಂದುಕೊಳ್ಳಬೇಡಿ. ಇಲ್ಲಿ ಪಂಜುರ್ಲಿಯ ದೈವಸ್ಥಾನವೂ ಇದೆ. ಕರಾವಳಿ ಭಾಗದಲ್ಲಿ ಪಂಜುರ್ಲಿಯ ಮಹತ್ವ ಎಲ್ಲರಿಗೂ ಗೊತ್ತಿದ್ದು, ಅವನು ಅಭಯ ನೀಡಿದರೆ ಜೀವನದಲ್ಲಿ ಯಾವ ಭಯವೂ ಇಲ್ಲ ಎಂಬ ನಂಬಿಕೆ ಇದೆ. ಪ್ರವಾಸಿ ನೆಲೆಯನ್ನು ಪವಿತ್ರ ನೆಲೆಯನ್ನಾಗಿ ಈ ದೈವಸ್ಥಾನ ಪರಿವರ್ತಿಸಿದ್ದು, ಇಡೀ ವಾತಾವರಣದಲ್ಲಿ ಭಕ್ತಿಯಭಾವದೊಂದಿಗೆ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!