ಅಜ್ಜಾವರ ಸ್ಮಶಾನ ಜಾಗ ಉಳಿಸಲು ಗ್ರಾಮ ಸಭೆಯಲ್ಲೇ ಪ್ರತಿಭಟನೆ , ಮೊದಲ ಭಾರಿಗೆ ಲಿಖಿತ ಹೇಳಿಕೆ ಪಡೆದುಕೊಂಡ ಗ್ರಾಮಸ್ಥರು.
ಕುಡಿಯುವ ನೀರು ಹಾಗೂ ಇತರೆ ವಿಚಾರಗಳ ಬಗ್ಗೆ ಪ್ರಶ್ನೆ ಅಸಮರ್ಪಕ ಉತ್ತರ , ಅಧಿಕಾರಿಗಳ ಗೈರಿಗೆ ನೋಟಿಸ್ ನೀಡಲು ತೀರ್ಮಾನ.
ಅಜ್ಜಾವರ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಬೇಬಿ ಕಲ್ತಡ್ಕರ ಅಧ್ಯಕ್ಷತೆಯಲ್ಲಿ, ಮೇನಾಲ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಗ್ರಾಮ ಸಭೆ ಆರಂಭವಾಗುತ್ತಿದ್ದಂತೆ ಗಂಗಾಧರ ಮೇನಾಲ ಅಧಿಕಾರಿಗಳ ಗೈರು ಹಾಜರಿಯ ಕುರಿತು ಪ್ರಶ್ನಿಸಿ ಪ್ರತಿಭಟನೆ ಕುಳಿತ ಬಳಿಕ ಒಬ್ಬರ ಹಿಂದೆ ಒಬ್ಬರಂತೆ ಅಧಿಕಾರಿಗಳು ಆಗಮಿಸತೊಡಗಿದರು ಅಲ್ಲದೆ ವಾರ್ಡ ಸಭೆ ನಡೆಸದೇ ಗ್ರಾಮ ಸಭೆ ನಡೆಸಿದ ಕುರಿತಾಗಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿ ರಮೇಶ್ ಬಿ ಇ ರವರು ಹಾಗಿದ್ದರೆ ಗ್ರಾಮಸ್ಥರು ತಿಳಿಸಿದಲ್ಲಿ ಮುಂದೂಡಬಹುದು ಎಂದು ಹೇಳಿ ಮತ್ತೆ ಸಮಧಾನ ಪಡಿಸಿದ ಬಳಿಕ ಗ್ರಾಮಸಭೆಯನ್ನು ಮುಂದುವರೆಸಲಾಯಿತು.
ಅಜ್ಜಾವರದಲ್ಲಿ ಸುಳ್ಯ ನಗರ ಪಂಚಾಯತ್ ಗೆ 1 ಎಕ್ರೆ ಜಾಗ ಕಾದಿರಿಸಿದ್ದು ಯಾರು? ಪ್ರತಿಭಟನೆ, ಲಿಖಿತ ಹಿಂಬರಹ ಪಡೆದ ಪ್ರತಿಭಟನಕಾರರು.
ಹರೀಶ್ ಮೇನಾಲರು, ಕಲ್ಲಗುಡ್ಡೆ ಸ್ಮಶಾನ ಜಾಗಕ್ಕೆ ಬೇಲಿ ಯಾಕೆ ಹಾಕಿಲ್ಲ. ಈ ಹಿಂದಿನ ಗ್ರಾಮ ಸಭೆಯಲ್ಲಿಯೂ ನಾವು ಪ್ರಸ್ತಾಪಿಸಿದ್ದೆವು ಎಂದು ಹೇಳಿದರು.
ಆಗ ಚಂದ್ರಶೇಖರ ಪಲ್ಲತಡ್ಕರು, ಕಲ್ಲಗುಡ್ಡೆಯಲ್ಲಿ ಸ್ಮಶಾನ ಜಾಗವನ್ನು ವ್ಯವಸ್ಥಿತ ರೀತಿಯಲ್ಲಿ ಇಡಬೇಕು. ಇಲ್ಲಿಯ ಸುತ್ತ ಮುತ್ತ ನಿಧನರಾದರೆ ಅದೊಂದೇ ಸ್ಮಶಾನ ಇರುವುದು. ಅದೇ ಜಾಗವನ್ನು ಬಳಸಿಕೊಂಡು ಸುಳ್ಯ ನಗರ ಪಂಚಾಯತ್ ಗೆ ಘನತ್ಯಾಜ್ಯಕ್ಕೆ ಆಗಿದೆಯಂತೆ ಏನದು ಎಂದು ಕೇಳಿದರು. ಸತೀಶ್ ಬೂಡುಮಕ್ಕಿ, ರಂಜಿತ್ ರೈ ಮೇನಾಲ, ಸೌಕತ್ ಅಲಿ, ದಾಸಪ್ಪ ಮೇನಾಲ, ಗಂಗಾಧರ್ ಮೇನಾಲ ಮೊದಲಾದವರು ಧ್ವನಿಗೂಡಿಸಿ ಮಾತನಾಡಿದರು. ನಗರ ಪಂಚಾಯತ್ ಗೆ ಅಲ್ಲಿ ಒಂದು ಎಕ್ರೆ ಜಾಗ ಆರ್.ಟಿ.ಸಿ. ಇದೆ.ಅದರ ಸರ್ವೆ ಮಾಡಲಿದ್ದೇವೆ ಬನ್ನಿ ಎಂದು ಇತ್ತೀಚೆಗೆ ಸರ್ವೆಯರ್ ಫೋನ್ ಮಾಡಿದ್ದರು. ಆದರೆ ನಾವು ಹೋಗಿಲ್ಲ. ಬಳಿಕ ಸರ್ವೆಯರ್ ಹಿಂತಿರುಗಿದ್ದಾರೆ ಎಂದು ಪಿಡಿಒ ಹೇಳಿದರು. ಸದಸ್ಯ ಪ್ರಸಾದ್ ರೈಯವರು ಕೂಡಾ, ಸ್ಮಶಾನಕ್ಕೆ ಅದೊಂದೇ ಜಾಗ. ಅದನ್ನು ಉಳಿಸಬೇಕು” ಎಂದು ಹೇಳಿದರು.
“ನಗರ ಪಂಚಾಯತ್ ಗೆ ಆ ಜಾಗವನ್ನು ಕಾದಿರಿಸಿದ್ದು ಯಾರು?. ಅದು ಗೊತ್ತಾಗಬೇಕು. ನಮ್ಮ ಗ್ರಾಮದಲ್ಲೇ ನಮಗೆ ಜಾಗ ಇಲ್ಲ. ನಗರದವರಿಗೆ ಹೇಗೆ ಇಲ್ಲಿ ಕೊಡೋದು.ಅದನ್ನು ಉಳಿಸಬೇಕು ಈ ಕುರಿತು ನಿರ್ಣಯ ಮಾಡಿ, ನಮಗೆ ಲಿಖಿತ ಹೇಳಿಕೆ ನೀಡಿ ಎಂದು ಚಂದ್ರಶೇಖರ ಪಲ್ಲತಡ್ಕ ಒತ್ತಾಯಿಸಿದರು.
ಕೆಲ ಹೊತ್ತು ಈ ಕುರಿತು ಅಭಿಪ್ರಾಯ ಗಳನ್ನು ಪ್ರತಿಯೊಬ್ಬರು ಹೇಳತೊಡಗಿದರು. ಚಂದ್ರಶೇಖರ ಪಲ್ಲತಡ್ಕ ಹಾಗೂ ಇತರರು ನಮಗೆ ಲಿಖಿತ ಹೇಳಿಕೆ ನೀಡಬೇಕೆಂದು ಒತ್ತಾಯಿಸಿ, ಸಭೆಯ ಮುಂಭಾಗ ನೆಲದಲ್ಲಿ ಕುಳಿತು ಪ್ರತಿಭಟಿಸ ತೊಡಗಿದರು.
ಬಳಿಮ ಆ ಜಾಗ ಪಂಚಾಯತ್ ಗೆ ಅಗತ್ಯತೆ ಯ ಕುರಿತು ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಬರೆಯುವ ಕುರಿತು ಲಿಖಿತ ಹೇಳಿಕೆ ನೀಡಿ, ಸದಸ್ಯರೆಲ್ಲರೂ ಸಹಿ ಮಾಡಿದ ಪ್ರತಿಯನ್ನು ಚಂದ್ರಶೇಖರ ಪಲ್ಲತಡ್ಕ ಮತ್ತು ತಂಡದವರಿಗೆ ನೀಡಲಾಯಿತು. ಅದನ್ನು ಸ್ವೀಕರಿಸಿ ಪ್ರತಿಭಟನೆ ಹಿಂಪಡೆಯಲಾಯಿತು.
ಅಜ್ಜಾವರ ಶಾಲೆಯ ಬಳಿಕಯಲ್ಲಿನ ಹಳೆಯ ಕಟ್ಟಡ ಮುರಿದು ಬೀಳುವ ಹಂತದಲ್ಲಿದ್ದು ಅದನ್ನು ಬಾಡಿಗೆ ಗ್ರಾಮ ಪಂಚಾಯತ್ ಪಡೆಯುತ್ತಿದ್ದರು ಯಾಕೆ ಅದನ್ನು ರಿಪೇರಿ ಮಾಡುತ್ತಿಲ್ಲ ಎಷ್ಟು ವರ್ಷಗಳಿಂದ ನಾವು ಗ್ರಾಮ ಸಭೆಯಲ್ಲಿ ಕೇಳುತ್ತಿದ್ದೆವೆ ಎಂದು ಬಾಲಕೃಷ್ಣ ನೈಕ್ ಅಜ್ಜಾವರ ಪ್ರಶ್ನಿಸಿದರು ಇದಕ್ಕೆ ಉತ್ತರಿಸುತ್ತಾ ನಮ್ಮಲ್ಲಿ ಅದರ ಬಾಡಿಗೆ 50 ಸಾವಿರ ಇದೆ ಅದರಲ್ಲಿ ಮಾಡಬಹುದು ಮತ್ತು ನಾವು ಅದು ಕೃಷಿ ಇಲಾಖೆಯ ಕಟ್ಟಡವಾದ ಕಾರಣ ಅವರಿಗೆ ಪತ್ರ ಬರೆದಿದ್ದೆವೆ ಎಂದು ಹೇಳಿದರು ಅಲ್ಲದೆ ಮುಂದಿನ ಗ್ರಾಮ ಸಭೆಯ ಮುಂಚಿತವಾಗಿ ಅದನ್ನು ದುರಸ್ತಿ ಕಾರ್ಯ ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿಗಳು ಉತ್ತರಿಸಿದರು.
ಒಂದೇ ಕಾಮಗಾರಿ ಹೆಸರಿನಲ್ಲಿ ಎರೆಡೆರಡು ಬಿಲ್ಲ್ ಗಳು ಕಾಮಗಾರಿ ಆದ ಸ್ಥಳದ ಹೆಸರು ಅದಲು ಬದಲು.
ಮೇದಿನಡ್ಕ ನಾಂಗುಳಿ ರಸ್ತೆಯ ಹೆಸರಿನಲ್ಲಿ ಎರೆಡೆರಡು ಬಿಲ್ಲುಗಳನ್ನು ಮಾಡಿದ್ದು ಅದು ಹಣದ ಕೊರತೆಯಿಂದಾಗಿ ನಾವು ಮಾಡಿದ್ದು ಅಲ್ಲದೇ ಅಜ್ಜಾವರ ಪೇಟೆಯಿಂದ ಕರ್ಲಪ್ಪಾಡಿ ಕಾಲು ದಾರಿ ಕಾಂಕ್ರೀಟ್ ಎಂದು ನಮೂದಾಗಿದ್ದು ಅದು ಪೇಟೆಯಿಂದ ಪ್ರರಂಭವಾಗದೇ ಇನ್ನೊಂದು ಕಡೆಗಳಲ್ಲಿ ಮಾಡಿದ್ದು ಇದು ಸದಸ್ಯರು ಮಾಹಿತಿ ಕೊಡುವಾಗ ತಪ್ಪಾಗಿದೆ ಎಂದು ಒಪ್ಪಿಕೊಂಡ ಪ್ರಸಂಗವು ಗ್ರಾಮ ಸಭೆಯಲ್ಲಿ ನಡೆಯಿತು.
ನಾಲ್ಕು ವರ್ಷಗಳ ನಂತರ ಮತ್ತೆ ಮುನ್ನೆಲೆಗೆ ಬಂದ ಆಶಾ ಕಾರ್ಯಕರ್ತೆ ನೇಮಕ ವಿಚಾರ.
ಸಾವಿರ ಜನರಿಗೆ ಒಬ್ಬರಂತೆ ಆಶಾ ಕಾರ್ಯಕರ್ತೆಯರ ನೇಮಕವಾಗಬೇಕಿದೆ ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕರ್ಲಪ್ಪಾಡಿ , ನೆಹರುನಗರ , ಪಡ್ಡಂಬೈಲು ಸೇರಿದಂತೆ ಇತರೆ ಕಡೆಗಳಿಗೆ ಆಶಾ ಕಾರ್ಯಕರ್ತೆಯ ಕೊರತೆಯ ಬಗ್ಗೆ ಈ ಹಿಂದಿನಿಂದಲು ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿ ಪತ್ರಗಳು ಬರೆಯುತ್ತಿದ್ದರು ಈವರೆಗೆ ನೇಮಕ ಗೊಳಿಸದೇ ಇರುವುದು ಯಾಕೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದ ಹಿನ್ನಲೆಯಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೆವೆ ಎಂದು ಈ ಹಿಂದಿನಂತೆಯೇ ಉತ್ತರ ನೀಡಿದಾಗ ಗರಂ ಆದ ಗ್ರಾಮಸ್ಥರು ನಮಗೆ ಇಂತಹ ಹಾರಿಕೆಯ ಉತ್ತರ ಬೇಕಿಲ್ಲಾ ಎಂದಾಗ ಇದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಮತ್ತೊಮ್ಮೆ ತರಲಾಗುವುದು ಅಲ್ಲದೆ ಸರಕಾರ ಆದೇಶ ಮಾಡಬೇಕಿದೆ ಸರಕಾರ ಮಾಡುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು ಆಶಾ ಕರ್ಯಾಕರ್ತೆಯರ ಕೆಲಸಗಳ ಬಗ್ಗೆ ವಿವರಣೆ ಕೇಳಿದಾಗ ಅಧಿಕಾರಿ ಉತ್ತರಿಸಲು ತಡಕಾಡಿದ ಪ್ರಸಂಗವು ನಡೆಯಿತು.
ಮೇನಾಲ ಶಾಲೆ ಉದ್ಘಾಟನೆ ರದ್ದು ಕುರಿತು ಪ್ರಶ್ನಿಸಿದ ಗ್ರಾಮಸ್ಥರು.
ಮೇನಾಲ ಶಾಲೆಯ ಕಟ್ಟಡ ಉದ್ಘಾಟನೆ ವಿಚಾರ ಕುರಿತು ಗಂಗಾಧರ ಮೇನಾಲ ಪ್ರಶ್ನಿಸಿದರು ಇದಕ್ಕೆ ಎಸ್ ಡಿ ಎಂಸಿ ಅಧ್ಯಕ್ಷರಾದ ಶೌಕತ್ ಮೇನಾಲ ಇವರಲ್ಲಿ ಉತ್ತರವನ್ನು ಕೊಡಿಸುವ ಕೆಲಸ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದಾಗ ಉತ್ತರಿಸಿ ನಮ್ಮ ಕಾರ್ಯಕ್ರಮ ಆಯೋಜನೆಯ ನಷ್ಟಕ್ಕೆ ಯಾರು ಹೊಣೆ ಅಲ್ಲದೆ ಪರಿಷತ್ ಸದಸ್ಯರು ಬರುವಾಗ ಅವರಿಗೆ ಅವಕಾಶ ಕೊಡಬಹುದಿತ್ತಲ್ವಾ ಎಂದು ಹೇಳಿದಾಗ ಇದೀಗ ಉದ್ಘಾಟನೆ ಆಗಿದೆ ಅಲ್ವಾ ಮುಂದೆ ಈ ರೀತಿಯಲ್ಲಿ ಆಗದಂತೆ ನೋಡಿಕೊಳ್ಳುವಜದಾಗಿ ಹೇಳಿದರು . ತನ್ನ ಮಾತುಗಳನ್ನು ಮುಂದುವರೆಸಿ ಶಾಲೆಗಳಿಗೆ ಕೆಲ ಕಿಡಿಗೇಡಿಗಳು ಮಧ್ಯದ ಬಾಟಾಲಿಗಳು ಎಲ್ಲಾ ಹಾಕುತ್ತಿದ್ದು ಇದಕ್ಕೆ ಶಾಲೆಗಳಿಗೆ ಸಿಸಿಟಿವಿ ಅಳವಡಿಕೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳನ್ನು ಆಗ್ರಹಿದಿದರು.
ಕುಡಿಯುವ ನೀರಿನ ಸರಬರಾಜಿನಲ್ಲಿ ಸಮಸ್ಯೆಗಳ ಪ್ರಶ್ನೆಗಳಿಗೆ ಮೌನವೇ ಉತ್ತರ .
ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೌನವಹಿಸಿ ಎಲ್ಲದಕ್ಕು ಅಭಿವೃದ್ಧಿ ಅಧಿಕಾರಿಗಳನ್ನೆ ಬೊಟ್ಟುಮಾಡಿ ತೋರಿಸಿ ಉತ್ತರಿಸುವಂತೆ ಆಗ್ರಹಿಸಿದ ಘಟನೆ ನಡೆಯಿತು.
ರಸ್ತೆಯ ಚರಂಡಿ ಮತ್ತು ನಿವೇಶನದ ಕಾಡು ಕಡಿದ ಮೊತ್ತದ ಬಗ್ಗೆ ಪ್ರಶ್ನೆ ಉತ್ತರವೇ ಅಸಮರ್ಪಕ ಉತ್ತರ, ಪರಿಶೀಲನೆಗೆ ಆಗ್ರಹ .
ಬೇಳ್ಯ ಮೇನಾಲದಲ್ಲಿ ನಿರ್ಮಿಸಲಾಗುತ್ತಿರುವ ನಿವೇಶನದ ಬಳಿಯಲ್ಲಿ ಕಾಡು ಕಡಿದ ಮೊತ್ತವೆಂದು ಒಂಬತ್ತು ಸಾವಿರ ಮೊತ್ತವನ್ನು ಪಡೆದು ಅದೇ ಕೆಲಸದ ಹೆಸರಿನಲ್ಲಿ ಮತ್ತೆ ಜೆಸಿಬಿ ಮೂಲಕ ರಸ್ತೆ ನಿರ್ಮಣ ಮತ್ತು ಕಸ ಕಡ್ಡಿ ತೆರವು ಎಂದು ಮತ್ತೊಮ್ಮೆ ಹತ್ತು ಸಾವಿರದ ಬಿಲ್ಲ್ ಗಳನ್ನು ಮಾಡಿದ ಬಗ್ಗೆ ಸಂತೋಷ್ ರೈ ಮೇನಾಲ ಪ್ರಶ್ನಿಸಿದಾಗ ಸದಸ್ಯರಾದ ಅಬ್ದುಲ್ಲ ಉತ್ತರಿಸಿ ಅದು ಅಲ್ಲಿ ಕೆಲಸ ಆಗಿದೆ ಎಂದರು ಆಗ ಸಂತೋಷ್ ಎಲ್ಲಿ ನಮಗು ಜೆಸಿಬಿ ಕೆಲಸ ಮಾಡಿ ಗೊತ್ತಿದೆ ಎಂದಾಗ ಪಿಡಿಒ ಉತ್ತರಿಸಿ ಎಂದು ಉಳಿದ ಸದಸ್ಯರು ಹೇಳಿದಾಗ ಉತ್ತರಿಸಿ ಮತ್ತೊಮ್ಮೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಅಲ್ಲದೇ ಆಗಮಿಸಿದ ಅಧಿಕಾರಿಗಳು ಇಲಾಖವಾರು ಮಾಹಿತಿಯನ್ನು ನೀಡಿದರು. ಸಂಜೆ ನಾಲ್ಕು ಗಂಟೆ ಆಗುತ್ತಿದ್ದಂತೆ ಗ್ರಾಮಸ್ಥರು ಪ್ರಶ್ನೆಗಳನ್ನು ಕೇಳುತ್ತಿದ್ದರು ತರಾತುರಿಯಲ್ಲಿ ಅಧ್ಯಕ್ಷೀಯ ಮಾತುಗಳನ್ನು ಕೂಡ ಆಡದೇ ಗ್ರಾಮ ಸಭೆಗೆ ವಂದಾರ್ಪಣೆ ಗೈಯಲಾಯಿತು ಬಳಿಕ ರಾಷ್ಟಗೀತೆಯೊಂದಿಗೆ ಮುಕ್ತಾಯವಾಯಿತು.
ಗ್ರಾಮ ಸಭೆಯ ವೇದಿಕೆಯಲ್ಲಿ ಉಪಾಧ್ಯಕ್ಷ ಜಯರಾಮ ಅತ್ಯಡ್ಕ, ಸದಸ್ಯರುಗಳಾದ ಪ್ರಸಾದ್ ಕುಮಾರ್ ರೈ ಮೇನಾಲ,ಸತ್ಯವತಿ ಬಸವನಪಾದೆ
ರವಿರಾಜ್ ಕರ್ಲಪ್ಪಾಡಿ, ದಿವ್ಯ ಪಡ್ಡಂಬೈಲು, ಅಬ್ದುಲ್ಲ ಅಜ್ಜಾವರ, ಶ್ವೇತ ಶಿರಾಜೆ, ವಿಶ್ವನಾಥ ಮುಳ್ಯ ಮಠ, ರಾಹುಲ್ ಅಡ್ಪಂಗಾಯ, ವಿಶ್ವನಾಥ, ರಾಘವ, ಶಿವಕುಮಾರ, ಲೀಲಾ ಮನಮೋಹನ, ಪಿಡಿಒ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ನೋಡೆಲ್ ಅಧಿಕಾರಿಯಾಗಿದ್ದರು.